ನಾಮದೇವ ಕಾಗದಗಾರ ಕವಿತೆ-ಮೌನದೊಳಗಿನ ನೋವು

ಕಾವ್ಯ ಸಂಗಾತಿ

ಮೌನದೊಳಗಿನ ನೋವು.

ನಾಮದೇವ ಕಾಗದಗಾರ

1.
ಮೌನ ಪರದೆ ಕಟ್ಟಿಕೊಂಡಿದೆ
ನಿರಾಕರಿಸಿದ ಎದೆ ಗಾಯಗೊಂಡಿದೆ
ಬದುಕು ಮೋಹಗೊಂಡು
ಪಾತ್ರದ ನೆರಳಾಗಿದೆ..

2.
ಉದುರಿ ಬೀಳುತ್ತಿರುವ
ಗೋಡೆಯ ಮಣ್ಣು,
ಎಣ್ಣೆ ಇಲ್ಲದ
ಮಿಣಿ ಮಿಣಿ ಚಿಮಣಿ
ದೀಪ,
ಇವುಗಳ ಕೆಳಗೆ
ತತ್ತರಿಸಿ ಕುಣಿದಿತ್ತು
ಬದುಕಿನ ಮಗ್ಗಲುಗಳು…

3.
ಗಾಲಿ ಇಲ್ಲದ ಬದುಕಿನ
ಬಂಡಿ, ತನ್ನ ನೋವುಗಳಿಗೆಲ್ಲಾ
ಮೌನದ
ಕೀಲ ಹಾಕಿಕೊಂಡಿತು…

4.
ನೆಲದ ಮೇಲಿನ
ಹಸಿವು
ಹೇಗೆ ಕಾಣಬೇಕು ?
ಲೋಕದ ಕಣ್ಣಿಗೆ
ಕಣ್ಣಿಲ್ಲವಲ್ಲ…

5.
ಇಲ್ಲಿ ತುಂಡು ಬಟ್ಟೆ,
ತುತ್ತು ಅನ್ನಕ್ಕಾಗಿ
ನಿರಂತರ ಹೋರಾಟ…
ಅಲ್ಲಿ ಭವ್ಯ ಬಂಗಲೆಯ
ಅಧಿಕಾರದ ಶೋಕಿಗಾಗಿ
ನಿರಂತರ ಪರದಾಟ…


Leave a Reply

Back To Top