ಕಾವ್ಯ ಸಂಗಾತಿ
ದೇವರಾಜ್ ಹುಣಸಿಕಟ್ಟಿಗೆ ದೊರೆತ….!
ಕನಕ
ಬಾಗಿಲು ಮುಚ್ಚುವಾಗ
ಕಿಟಕಿ ತೆರೆಯುವಾಗ
ಕೃಷ್ಣ ಕನಕ ಚರಿತ….
ಬೆರಳು ಕುಣಿಸುವಾಗ
ಕೊರಳು ಮಣಿಸುವಾಗ
ಕೃಷ್ಣನರಿಯುವಾಗ ಕನಕ ಹರಿತ …
ಕೃಷ್ಣನೊಂದು ಗಾಳಿ
ಕನಕನೊಂದು ಗಂಧ
ಗಾಳಿಯಲಿ ಸುಗಂಧವಾಗಿ ಬೆರತ…..
ಕೃಷ್ಣ ಕಂಬಳಿ ಹೊದ್ದ
ಕನಕ ಬೆಣ್ಣೆ ಮೆದ್ದ
ಲೋಕದ ತುಂಬಾ ಪ್ರೀತಿ ಸದ್ದ
ಈಗ ಬೆರತ ಚರಿತೆಯ ಮೊರೆತ….
‘ನಾನು ‘ತೊರೆಯುವಾಗ
ಜಾತಿ ಮುರಿಯುವಾಗ
ಕುಲದ ನೆಲೆಯನರಿಯುವಾಗ
ಕನಕ ದೊರೆತ….
–
‘ಕುಲದ ನೆಲೆಯನರಿಯುವವಾಗ ಕನಕ ದೊರೆತ’ ದೇವರಾಜ್ – ನಿಮ್ಮ ಕವಿತೆ ಓದಿ, ನನಗಗೂ ದೊರೆತ – ಕಿಂಡಿಯಕನಕ.