ಕಾವ್ಯ ಸಂಗಾತಿ
ತನಗಗಳು
ಎ. ಹೇಮಗಂಗಾ
- ನಮ್ಮ ಇರುವಿಕೆಯೇ
ಶಾಶ್ವತವಲ್ಲ ತಿಳಿ
ಅಂಟಿಕೊಳ್ಳದಿರು ನೀ
ಪದವಿ, ಪಟ್ಟಕ್ಕೆಂದೂ - ಕತ್ತಲ ಪರದೆಯ
ಸೀಳಿ ಬರುವ ಇನ
ಚೈತನ್ಯ ತುಂಬುವನು
ಆಲಸ್ಯದ ಜಗಕೆ - ನೊಂದುಕೊಳ್ಳದೇ ಇರು
ಪರನಿಂದನೆ ಇರೆ
ಎಲುಬಿಲ್ಲದ ಜಿಹ್ವೆ
ಅದೇ ಅದರ ಕಾರ್ಯ - ‘ನಾನೇ’ ಎಂಬ ಮೆರೆತ
ಒಳಿತಲ್ಲ ನಿನಗೆ
ಮರಕ್ಕಿಂತ ಮರವು
ದೊಡ್ಡದು ಅರಿತುಕೋ - ‘ ಎಲ್ಲ ನನಗೆ ಮಾತ್ರ
ಇರಲಿ ‘ ಎನ್ನದಿರು
ಹಂಚಿಕೊಂಡು ತಿಂದರೆ
ಸುಖ, ಮರೆಯದಿರು