ಜಯಶ್ರೀ ಭ ಭಂಡಾರಿ-ದತ್ತ ಚಿತ್ರಕ್ಕೆ ಗಝಲ್.

ಕಾವ್ಯ ಸಂಗಾತಿ

ದತ್ತ ಚಿತ್ರಕ್ಕೆ ಗಝಲ್

ಜಯಶ್ರೀ ಭ ಭಂಡಾರಿ.

ಉದಯ ಉದಯಿಸುವ ಮುನ್ನ ಬಾಗಿಲ ಬಳಿ ಮಂಜು ಹನಿಗಳು ಕರೆದಿವೆ
ಮದವ ನೀಗಿಸಿ ಮುದದಿ ಅಂಜದೆ ಎಲೆಗಳ ಮೇಲೆ ಹನಿಗಳು ಒರೆದಿವೆ.

ದಾರಿ ಯಾವುದಯ್ಯ ಸ್ವರ್ಗಕ್ಕೆ ಎಂದು ಬಲೆಯ ಕೇಳುತಿರುವೆಯೇನು
ಧಾರೆ ಕವಿದು ಮೋಡದ ಸಲೆಯಿಂದ ಉದುರುವ ಹನಿಗಳು ತೆರೆದಿವೆ

ಜೇಡನ ಕಲೆಯು ಸೃಷ್ಟಿಯಲಿ ಬೆರಗು ಮಣಿಗಳ ಮಾಲೆ ತೂಗುತಿದೆ
ನಾಡಿನ ಮಲೆಯು ವೃಷ್ಟಿಯ ಹಸಿರು ತೋರಣದಿ ಹನಿಗಳು ಎರೆದಿವೆ.

ಹೆಣೆದ ಹೆಣ್ಣಿನ ಹೆರಳಲಿ ಮಲ್ಲಿಗೆ ಮೊಗ್ಗಿನ ಮೃದು ಕಾವ್ಯ ಕಟ್ಟಿ ಸೆಳೆದಿದೆ.
ಮಣಿದು ಕಡೆದ ಬೆಣ್ಣೆಯ ಅರಳು ಚೆಲ್ಲಾಡಿದಂತೆ ಅವಿತ ಹನಿಗಳು ಮೆರೆದಿವೆ.

ನಿಸರ್ಗದ ಬಳ್ಳಿಯಲಿ ಬಳಕುವ ಜಾದು ಕಂಡು ಜಯಾ ರೋಮಾಂಚನಗೊಂಡಿಹಳು
ಸತ್ಸಂಗದಲಿ ಮುಳ್ಳಿನ ಬೇಲಿ ಕೊಳಕು ಕಾದು ಮುತ್ತಿನ ಹನಿಗಳು ಪೊರೆದಿವೆ


Leave a Reply

Back To Top