ಮಲಯಾಳಂ ಕವಿತೆ-ಪ್ರಣಯದ ಆರೋಪಿ

ಅನುವಾದ ಸಂಗಾತಿ

ಪ್ರಣಯದ ಆರೋಪಿ

ಮಲಯಾಳಂ ಮೂಲ: ಸಲೀಂ ಚೆನಂ.

ಕನ್ನಡಕ್ಕೆ: ಐಗೂರು ಮೋಹನ್ ದಾಸ್, ಜಿ

ಕೆನ್ನೆಗಳು
ತುಟಿಗಳ
ಭೂಪಟವಾಗಿದೆ..!
ಮುತ್ತುಗಳು
ಪ್ರಣಯದ
ಬಾಗಿಲು ತೆರೆದಿರುವ
ಸೆರಮನೆ…!!

ಆ ಸೆರಮನೆಯಿಂದ
ಹೊರ ಹಾಕಲಾಗಿರುವ
ಆರೋಪಿಯೇ
ನಾನು….?

ಹೃದಯ ಇಲ್ಲಾದ
ಒಂದು ‘ ದರಿದ್ರ’
ರಾಜ್ಯವೇ ನನ್ನ
ಕವಿತೆ…!!

ನನ್ನನ್ನು ಈ
ಸೆರಮನೆಯಲ್ಲಿ
ಬಂಧಿಯಾಗಿ ಮಾಡಿ
ಹಲವು ವರ್ಷಗಳೇ
ಕಳೆಯಿತ್ತು…!!

ಆದರೂ
ಶೂನ್ಯತೆ ಘಟ್ಟದ
ಕೊನೆಯ ಕನಸು
ನನಸಾಗುವ
ನಿರೀಕ್ಷೆ ಇದೆ…!
ಅದು ನನ್ನ
‘ಮರಣ’…!!!


Leave a Reply

Back To Top