ಪ್ರೊ ಶ್ರೀಶೈಲ ಮದಾಣಿ ಕವಿತೆ-ಬರೆಯುತ್ತೇನೆ ಗೆಳೆಯ’

ಕಾವ್ಯ ಸಂಗಾತಿ

ಬರೆಯುತ್ತೇನೆ ಗೆಳೆಯ

ಪ್ರೊ ಶ್ರೀಶೈಲ ಮದಾಣಿ

ದೇಶವೂ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಏನೆಂದು ಬರೆಯಲಿ ಗೆಳೆಯ…

ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಮಹಾನ ವೀರಾಧಿವೀರರ ಬಗ್ಗೆ ಬರೆಯಲೇ,
ದೇಶದ ಸಂಪತ್ತು ಕೊಳ್ಳೇಹೊಡೆದು ಅಟ್ಟಹಾಸದಿ ಮೆರೆಯುತ್ತಿರುವ ಕ್ಷುದ್ರಶಕ್ತಿಗಳ ಬಗ್ಗೆ ಬರೆಯಲಿ.

ಇದ್ದ ಸರಕಾರಿ ನೌಕರಿ ಬಿಟ್ಟು ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧುಮುಕಿದ ನೇತಾಜಿ ಸುಭಾಷ್ ರ ಬಗ್ಗೆ ಬರೆಯಲೇ… ಅಥವಾ…
ಸರಕಾರಿ ನೌಕರಿಯಲ್ಲಿದ್ದು ಬ್ರಷ್ಟಾಚಾರದಲ್ಲಿ ತೊಡಗಿ ಜೈಲು ಸೇರಿದ ಇಂದಿನ ಬ್ರಷ್ಟ್ ಅಧಿಕಾರಿಗಳ ಬಗ್ಗೆ ಬರೆಯಲೇ.

ಒಪ್ಪತ್ತಿನ ಕೂಳಿಗಾಗಿ ಇಪ್ಪತ್ತು ಮನೆ ತಿರುಗಿ ಕಸ ಮುಸುರಿ ಬಳೆಯುವ ಎನ್ನ ಸಹೋದರಿಯರ ಬಗ್ಗೆ ಬರೆಯಲೇ,
ಹಣದ ಆಸೆ ತೋರಿಸಿ
ಅಧಿಕಾರ ದುರ್ಬಳಕೆ ಮಾಡಿಕೊಂಡು
ಹೆಣ್ಣಿನ ಮಾನವನ್ನು ಹರಾಜಿಗೆ ಇಟ್ಟು ಸೋಕ್ಕಿಂದ ಮೆರೆಯುತ್ತಿರುವ ಕುರಿತು ಬರೆಯಲೇ.

ಕಳ್ಳದಾರಿಯಲ್ಲಿ ಸರಕಾರಿ ನೌಕರಿ ಕೊಡಿಸುವುದಾಗಿ ಹೇಳಿ ಜೈಲಿಗೆ ಕಳುಹಿಸುತ್ತಿರುವರ ಬಗ್ಗೆ ಬರೆಯಲೇ,
ಧರ್ಮದ ಅಮಲಿನಲ್ಲಿ ಸಾಮಾಜಿಕ ಸಾಮರಸ್ಯ ಕೆಡಿಸುತ್ತಿರುವ ನೀಚ ಬುದ್ಧಿಯ ದುಷ್ಟಶಕ್ತಿಗಳನ್ನು ಕುರಿತು ಬರೆಯಲೇ.

ಏನೆಂದು ಬರೆಯಲಿ ಗೆಳೆಯ?


3 thoughts on “ಪ್ರೊ ಶ್ರೀಶೈಲ ಮದಾಣಿ ಕವಿತೆ-ಬರೆಯುತ್ತೇನೆ ಗೆಳೆಯ’

  1. ಎಲ್ಲವನ್ನೂ ಬರೆಯಬೇಕು. ವಿಪರ್ಯಾಸಗಳ ಅದ್ಭುತ ರಚನೆ.

  2. ಸಮಾಜದ ದಾಷ್ಟ್ರ್ಯವನ್ನು ಕಂಡು ನೊಂದ ಮನಸ್ಸಿನ ಭಾವನೆಗಳು ಕವಿತೆಯಲ್ಲಿ ಚೆನ್ನಾಗಿ ಮೂಡಿಬಂದಿದೆ ಸರ್.

Leave a Reply

Back To Top