ಡಾ. ನಿರ್ಮಲ ಬಟ್ಟಲ ಕವಿತೆ-ಚಿಗುರೊಡೆಯಿತು

ಕಾವ್ಯ ಸಂಗಾತಿ

ಚಿಗುರೊಡೆಯಿತು

ಡಾ. ನಿರ್ಮಲ ಬಟ್ಟಲ

ಅದೆಷ್ಟೋ ವರ್ಷಗಳ
ಹಿಂದೆ
ಭುವಿಯ ಗರ್ಭ ಸೇರಿದ್ದ
ಬೀಜವೊಂದು
ಮೊನ್ನೆ ಬಿಡದೆ ಸುರಿದ
ಜಡಿ ಮಳೆಗೆ
ಮೈಮೂರಿದು
ಮೊಳಕೆಯೊಡೆದು
ಗರ್ಭ ಸೀಳಿ
ಹೊರಬಂದಿತ್ತು….!!

ಚಿಗುರೊಡೆಯುವ
ಅದಮ್ಯ ಹಂಬಲ
ಕಮರುವ ಭಯವ
ಮೀರಿ
ನೇಸರನ ಸ್ಪರ್ಶಕೆ
ಮೈಯೊಡ್ಡಿ
ಮಣ್ಣನು ಗಟ್ಟಿಯಾಗಿ ಆಲಂಗಿಸಿ
ಬೇರುಗಳ ಆಳಕ್ಕಿಳಿಸಿತ್ತು…!!

ಬಿಸಿಲಿಗೆ ಬಸವಳಿಯದೆ
ಚಳಿಗೆ ಮುರುಟದೆ
ಸುಖದ ನೋವನುಂಡು
ಎಲ್ಲ ಸತ್ವಗಳ ಹೀರಿ
ಚಿಗುರೊಡೆಯಿತು….!

ವರ್ಷ ಧಾರೆ ಒಲವಿಗೆ
ಹೂ ಬಿಸಿಲಿನ ನಲಿವಿಗೆ
ತಬ್ಬಿಹಿಡಿದ ಮಣ್ಣಿನ ಘಮಲಿಗೆ
ಸಂಭ್ರಮದ ಕಾಲ
ಬೀಜವೊಂದರ ಕನಸು
ನನಸಾಗಿತ್ತು.
ತಾಯಿ ಮರದೆದೆ ಹಿಗ್ಗಿತು…!!


ಡಾ. ನಿರ್ಮಲ ಬಟ್ಟಲ

5 thoughts on “ಡಾ. ನಿರ್ಮಲ ಬಟ್ಟಲ ಕವಿತೆ-ಚಿಗುರೊಡೆಯಿತು

  1. ತುಂಬಾ ಸುಂದರವಾಗಿದೆ ಬೀಜದ ಅಧನ್ಯಶಕ್ತಿ ಚಿಗುರೊಡದ ಭಾವನೆಗಳ ಸ್ಪರ್ಶ ಮನಮುಟ್ಟುವಂತಿದೆ

  2. ಮೇಡಂ,
    ಸುಂದರ ಕವನ. ಬಸಿರಿನ ಬದುಕು ಅಗಮ್ಯ. ಅಗೋಚರ. ಪದಗಳಲ್ಲಿಯ ಭಾವ ಪ್ರಕೃತಿಯ ಒಡಲೊಳಗಿನ ಐಸಿರಿ ಬಿಂಬಿಸಿದೆ.
    ಅಭಿನಂದನೆಗಳು.

Leave a Reply

Back To Top