ಅನುವಾದ ಸಂಗಾತಿ
ಇರುವೆಗಳು…
ಮಲಯಾಳಂ ಮೂಲ: ಸಲೀಂ ಚೇನಂ.
ಕನ್ನಡಕ್ಕೆ :ಐಗೂರು ಮೋಹನ್ ದಾಸ್, ಜಿ.


ಇರುವೆಗಳು
‘ಮರಣ’ ಹೊಂದಿರುವರ
ಕುರಿತು ವಿಸ್ತಾರವಾಗಿ
ಹೇಳಿ ಕೊಡುತ್ತದೆ…!
ಮರಣ ಹೊಂದಿರುವರ
ಕೆನ್ನೆಯ ಮೇಲೆ
ಇರುವೆಗಳು ಸಾಲು
ಸಾಲಾಗಿ ನಡೆದು
ಮೂಗಿನ ಮೇಲೆಗೆ ಏರಿ
ಕಣ್ಣು ಬಳಿ ಕುಳಿತು
ಒಮ್ಮೆ ಕಣ್ಣುಗಳಿಗೆ
ನೋಡುತ್ತದೆ..!
ಜೀವಂತ ಇರುವ
ಮಂದಿಯ ಮೇಲೆ..
ಮರಣ ಹೊಂದಿರುವ
ಮಂದಿಗೆ ತುಸು
ಕೋಪ-ಅಸೂಯೆ
ಇರುವುದಿಲ್ಲ…!!
ಮರಣ ಹೊಂದಿರುವ
ಮಂದಿಯ ಎಲ್ಲಾ
ಅಸ್ಥಿಗಳನ್ನು ಜೋಡಿಸಿ
ಇರುವೆಗಳು
ಶವಸಂಸ್ಕಾರದಲ್ಲಿ
ತೊಡಗಿ ಬಿಟ್ಟವು…!!!
ಮಲಯಾಳಂ ಮೂಲ: ಸಲೀಂ ಚೇನಂ.
ಕನ್ನಡ ಅನುವಾದ: ಐಗೂರು ಮೋಹನ್ ದಾಸ್, ಜಿ.
ಸೂಪರ್ .