ಕಾವ್ಯ ಸಂಗಾತಿ
ಕನ್ನಡ ನುಡಿ
ಸವಿತಾ ಮುದ್ಗಲ್
ಎಷ್ಟು ಚಂದ ಎಷ್ಟು ಅಂದ ನಮ್ಮ ಕನ್ನಡ
ಎಷ್ಟೋ ಮನಗಳ ಮನಸ ಕದ್ದ ಸವಿಕನ್ನಡ
ಅಆಇಈ ವರ್ಣಮಾಲೆಯ ಸೊಬಗು ಕನ್ನಡ
ಅಮ್ಮಅಪ್ಪ ಅನ್ನುತಿರಲು ಮಧುರ ಕನ್ನಡ||
ವಲಸಿಗರು ಸೊಗಸಾಗಿ ಕಲಿತು ನುಡಿವ ಕನ್ನಡ
ಅನ್ಯಭಾಷೆಗೆಂದು ಪೈಪೋಟಿ ಮಾಡದ ಕನ್ನಡ
ಅಂತಾರಾಜ್ಯ ಭಾಷೆಗಿಂತ ಬಲು ಸುಂದರ ಕನ್ನಡ
ಅತ್ತಇತ್ತ ಸುತ್ತಮುತ್ತ ಸರಳತೆ ಹೊಂದಿದ ಕನ್ನಡ||
ಇಂದಿಗು ಮುಂದಿಗೂ ನಾವು ನುಡಿವೆವು ಕನ್ನಡ
ಹಗಲುರಾತ್ರಿಯಲ್ಲಿ ಬಿಡದಸೇವೆ ಮಾಡುವೆವು ಕನ್ನಡ
ಸುಲಿದ ಬಾಳೆ ಸವಿಯಲಷ್ಟು ಸುಲಭಭಾಷೆ ಕನ್ನಡ
ಏಳುಕೋಟಿ ಮುಗ್ದಜನರ ಮನಸಕದ್ದ ನುಡಿಕನ್ನಡ||
ಹೃದಯ ಪೂರ್ವಕ ಧನ್ಯವಾದಗಳು ಸರ್, ನಿಮ್ಮ ಪ್ರೋತ್ಸಾಹ ಬರೆಯುವ ಕೈಗಳಿಗೆ ಸಿಗಲಿ