ಡಾ . ಮಮತ (ಕಾವ್ಯ ಬುದ್ಧ)-ನಾಚಿಕೆಯ ಮುಳ್ಳೇ,

ಕಾವ್ಯಸಂಗಾತಿ

ನಾಚಿಕೆಯ ಮುಳ್ಳೇ

ಡಾ . ಮಮತ (ಕಾವ್ಯ ಬುದ್ಧ)

ಇಷ್ಟೊಂದು ಮುನಿಸೇಕೆ ನಾಚಿಕೆಯ ಮುಳ್ಳೇ,
ಕೆಂಪು ಕೆನ್ನೆಗಳೆನಗೆ ಹೇಳಿದ್ದು ಸುಳ್ಳೇ? ….


ಮುಚ್ಚು ಮರೆ ಇನ್ನೇತಕ್ಕೆ?
ಕಣ್ಣ ಸನ್ನೆಗಳೇಕೆ?
ಬಣ್ಣನೆಯ ಮನಸುಗಳು ಒಂದನೊಂದರಿತಿರಲು
ಕಣ್ಣಾ ಮುಚ್ಚಾಲೆಯೇತಕ್ಕೆ? ನಾಚಿಕೆ ಮುಳ್ಳೇ….


ತಿಳಿಯಬೇಕೇ
ನಮ್ಮಂತರಂಗದ ಸುರಂಗದೊಳಗಡೆಯಲ್ಲೋ?
ಅಡಗಿ ಕುಳಿತಿರುವ ಆ‌ ಆಯಾಮಗಳು
ಅರಿವಿಲ್ಲದಂತೊಳಗಿಂದ‌ ಮೇಲೆರಗಿ

ನಾನು ನೀನೆಂಬರಿದ ಮರೆಸಲು ತಡವೇಕೆ?
ತಡೆಯೇಕೆ? ಕರೆಯೋಲೆಯೇಕೆ? ನಾಚಿಕೆ‌ಮುಳ್ಳೇ….
ಅಂಗಾಗ‌ಮರೆತಿರುವ ಕಣ್ಣು -ಕಿವಿಯೊಳಗೆ..
ಗುಣದೊಳಗೆ..
ಮನದೊಳಗೆ ಕಾಣದಂತಿರುವ ಅನಾಂಗಗಳು
ಲೋಹರಸ ರಜಸದಲಿ ಮುಗಿಲೆದ್ದಿತೇ ನಾಚಿಕೆ ಮುಳ್ಳೇ


Leave a Reply

Back To Top