ಕಾವ್ಯ ಸಂಗಾತಿ
ಸವಿತಾ ಮುದ್ಗಲ್
ಹೆಣ್ಣಿನ ಅಂತಾರಾಳ
ಪುಟ್ಟ ಬಾಳಿಗೆ ಊರ ಗುಡಿಸಲಾದರೇನು
ದೊಡ್ಡ ಬಾಳಿಗೆ ಊರಾಚೆ ಅರಮನೆಯಾದರೇನು
ಹೆಣ್ಣಿನ ಬಾಳಿಗೆ ಮನವೊಂದೆ ಜಗವಿದ್ದಂತೆ
ಅಂತಾರಾಳ ಬಲ್ಲವರಿದ್ದರೆ ಸಾರ್ಥಕ ಜೀವನವಂತೆ!
ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ
ದೀಪವೊಂದು ಹಚ್ಚಿದರೆ ಕತ್ತಲು ಹೋದಂತೆ
ಹೆಣ್ಕೈಗಳು ಪ್ರೀತಿಯಿಂದ ಕೈಮುಗಿದರೆ ಸ್ವರ್ಗದಂತೆ
ಕಡೆಗಣಿಸಿ ನೋಡದಿರಿ,ಅವಳೇ ಮುಗಿಲಂತೆ!
ಹೊರಟ ದಾರಿಗೆ ನೂರೊಂದು ತಿರುವುಗಳು
ಮರೆತು ಹೋದರೆ ಕೊನೆಮುಟ್ಟದೆ ಪಯಣವು
ಜಾಣ್ಮೆಯ ರೀತಿಯಲ್ಲಿ ನಡೆದರೆ ಉಚಿತವು
ಅತಿರೇಕವಾದರೆ ನೆಲಮುಟ್ಟುವುದು ಖಚಿತವು!
ಚಿಗುರಲೆಯೊಂದು ಪಿಸುಮಾತು ಹೇಳಲು ಮನಕೆ
ಹೆಣ್ಣೆಲೆಯು ಹೇಳಿತು ಶಾಶ್ವತವು ಏನಿಲ್ಲ ಜಗಕೆ
ದೀಪವು ತನ್ನಕೆಳಗೆ ಇಟ್ಟಿಹುದು ಕತ್ತಲೆಯ
ಹೆಣ್ಣೊಂದು ಬಚ್ಚಿಡದೆ ಯಾವುದೇ ಬಯಕೆಯ!
ಧನ್ಯವಾದಗಳು ಸರ್, ನಿಮ್ಮ ಪ್ರೋತ್ಸಾಹಕ್ಕೆ