ಕಾವ್ಯ ಸಂಗಾತಿ
ಹಚ್ಚಬೇಕು ಹಣತೆ
ಪ್ರೊ ರಾಜನಂದಾ ಘಾರ್ಗಿ
ಮನುಕುಲದ ಮೂಡತೆ ಕಳೆದು
ಜಾಗೃತಿಯ ಹೊಸದಾರಿ ಹಿಡಿದು
ನಡೆಯಲು ಹಚ್ಚಬೇಕು ಹಣತೆ
ಜಾತಿ ಮತ ಪಂಥದ ಗೋಡೆಗಳ
ಕರಾಳ ನೆರಳನು ಕರಗಿಸಲು
ನೂರಾರು ಹಚ್ಚಬೇಕು ಹಣತೆ
ಅನಕ್ಷರತೆಯ ಜಿಡ್ಡು ತೊಳೆದು
ವ್ಯಕ್ತಿತ್ವದ ಹೊಳಪು ಮೆರೆಯಲು
ಅಕ್ಷರಗಳಲ್ಲಿ ಹಚ್ಚಬೇಕು ಹಣತೆ
ಸ್ವಾರ್ಥದ ಪೊರೆ ಹರಿದು ಹಾಕಿ
ನಿಸ್ವಾರ್ಥದ ಬೆಳಕು ಹರಿಯಲು
ಮನದಂಗಳದಿ ಹಚ್ಚಬೇಕು ಹಣತೆ
ಅಜ್ಞಾನದಿಂದ ಸುಜ್ಞಾನದೆಡೆಗೆ
ಅಂಧಕಾರದಿಂದ ಅರಿವಿನೆಡೆಗೆ
ನಡೆಯಲು ಹಚ್ಚಬೇಕು ಹಣತೆ
Very nice
Nice one