ಸಂಗಾತಿ ಸಾಹಿತ್ಯ ಪತ್ರಿಕೆಯ ವಾರ್ಷಿಕ ವಿಶೇಷ ಬರಹ

ಸಂತಸದ ಹೊನಲು

ಸಂತಸದ ಹೊನಲು

3.

ಕಣ್ಣಂಚಿನ ಹನಿಗಳೆಲ್ಲ
ಮಿಂಚಿನ ಸಂಚಾರ ಮಾಡಿವೆ
ಎದೆಯ ಭಾವನೆಗಳೆಲ್ಲ
ಸಂತಸದಿ ಮಿನುಗಿವೆ

ಕಾನನದಿ ನವಿಲಿನಂತೆ
ಮನ ನೃತ್ಯ ಮಾಡಿದೆ
ಜಲಪಾತದ ನೀರೆಲ್ಲ
ಹಾಲಿನಂತೆ ಕಂಡಿದೆ

ಮನದ ಬೇಗುದಿಯೆಲ್ಲ
ಆವಿಯಾಗಿ ಹೋಗಿದೆ
ಹರ್ಷದ ಹೊನಲು
ಹೃದಯದಿ ಮನೆ ಮಾಡಿದೆ

ಕಾಗುಣಿತಗಳೆಲ್ಲ ಮೀರಿ
ಭಾವ ಬಂಧದಿ ಅವಿತು
ಮಳೆಯ ಹನಿಗಳಲ್ಲಿ
ಬೆರೆತು ಕಲೆತು ಮೋಡಿ ಮಾಡಿದೆ


ದೀಪಿಕಾ ಚಾಟೆ

Leave a Reply

Back To Top