ಸಂಗಾತಿ ಸಾಹಿತ್ಯ ಪತ್ರಿಕೆಯ ವಾರ್ಷಿಕ ವಿಶೇಷ ಬರಹ

ನನ್ನವರು

ನಾಗರತ್ನ ಹೆಚ್

burning fire at night

ಯಾರಿಹರು ನನ್ನವರು
ಎಲ್ಲಾ ಮರೆತು ಸಾಗುತಿಹರು.

ನನ್ನೊಳಗಿನ ನನ್ನ ಅರಿತವರು
ಏನು ತಿಳಿಯದಂತೆ ನಟಿಸುತಿಹರು.

ಪ್ರೀತಿ ಎಂಬ ಪಾಶದಲ್ಲಿ
ಮುಳಗಿಸಿ ಕೊಂದವರು.

ನಂಬಿಕೆ ಎಂಬ ದೀಪವನ್ನು
ಹಾರಿಸಿ ನಡೆದಿಹರು.

ನೊಂದ ಮನಸ್ಸಿನ ಅಳಲು
ಕೇಳದೆ ದೂರ ಸರಿದಿಹರು.

ಎನ್ನ ಬದುಕಿಗೆ ಆಧಾರವಾದವರು
ಈಗ ನನ್ನ ಜೀವಕ್ಕೆ ಮುಳ್ಳಾಗಿಹರು.

ಜೊತೆಯಾಗಿ ಸಾಗುತ್ತಿರಲು
ನೋವೆಂಬ ಬೆಂಕಿಯಲ್ಲಿ ದೂಡಿಹರು.

ಪ್ರೀತಿಯ ಬದುಕಿಗೆ
ಜೊತೆಯಾಗಿ ನಿಂತವರು.

ಈಗ ನನ್ನ ಮನಸ್ಸಿಗೆ ಬೇಡವಾದವರು


ನಾಗರತ್ನ ಹೆಚ್ ಗಂಗಾವತಿ

One thought on “

Leave a Reply

Back To Top