ಮೇ ದಿನದ ವಿಶೇಷ ಬರಹ
“ಊರುಎದ್ದೇಳುವಮುನ್ನ
ಕಾಯಕಮುಗಿಸಿದಪೌರಕಾರ್ಮಿಕ.”
ವಿಜಯ ಅಮೃತರಾಜ್
“ಊರು ಎದ್ದೇಳುವ ಮುನ್ನ ಕಾಯಕ ಮುಗಿಸಿದ ಪೌರ ಕಾರ್ಮಿಕ.”
ನಾವೆಲ್ಲಾ ಅಲಾರಾಂ ಇಟ್ಟುಕೊಂಡು ಕಣ್ಣು, ಹಲ್ಲು ಉಜ್ಜುತ್ತಾ, ಉದಯಿಸಿದ ಸೂರ್ಯನ ಕಿರಣಕ್ಕೆ ಕಣ್ಣು ತೆಗೆಯಲು ಹಿಂಜರಿಯುವ ಸಮಯದಲ್ಲಿ, ಎಲ್ಲರಿಗಿಂತ ಮೊದಲು ಎದ್ದೇಳುವ ಅವ್ವಳಂತೆ ಈ ಪೌರಕಾರ್ಮಿಕರು.
ಊರು ಏಳುವ ಮುನ್ನವೇ ಏಳುವ ಪಡೆದವ್ವರು ಈ ಪೌರಕಾರ್ಮಿಕರು, ತಾಯಂದಿರು ತಮ್ಮ ಮಕ್ಕಳ ಮುಖ ಮಜ್ಜನ ತೊಳೆದು ಶುಚಿಗೊಳಿಸಿಸುವಂತೆ, ಇಡೀ ಊರಿನ ಮುಖ ಮಜ್ಜನ ಸೂಚಿ ಗೊಳಿಸುವ ತಾಯಿ ಈ ಪೌರಕಾರ್ಮಿಕರು, ಸರಿಯಾದ ಸಂಬಳವಿಲ್ಲ, ಮಾಡಿದ ಕೆಲಸಕ್ಕೆ ಶಹಬ್ಬಾಶ್ ಎನ್ನುವ ಮನಸ್ಸುಗಳಿಲ್ಲ, ಗಮನಿಸುವಂತವರು ಇಲ್ಲವೇ ಇಲ್ಲ ಆದರೂ ಎಲ್ಲ ಕೊರತೆಗಳ ನಡುವೆಯೂ, ಸೂರ್ಯನ ಜೊತೆಗೆ ಹುಟ್ಟಿವ ಈ ಮನಸ್ಸುಗಳು ನಿರಂತರವಾಗಿ ನಮಗಾಗಿ ಊರಿನ ಸ್ವಚ್ಛತೆ ಕಾರ್ಯವನ್ನು ಚಾಚೂತಪ್ಪದೆ ನಿಯಮಿತವಾಗಿ ಮಾಡಿಕೊಂಡೆ ಬರುತ್ತಿದ್ದಾರೆ.
ಈ ಅದ್ಭುತ ಮನಸ್ಸುಗಳು ಅದು ರಸ್ತೆ ಕಸಗುಡಿಸುವುದು ಆಗಿರಬಹುದು, ಡ್ರೈನೇಜ್ ಕ್ಲೀನಿಂಗ್ ಆಗಿರಬಹುದು, ಮಕ್ಕಳು ಆಡುವ ಪಾರ್ಕ್, ಜಾತ್ರೆ, ಸಂತೆ ಅಷ್ಟೇ ಏಕೆ ಆಗಸ್ಟ್ 15 ಜನವರಿ 26 ಮುನ್ನಾದಿನವೇ ಅದ್ಭುತವಾಗಿ ಸಿಂಗರಿಸುವರು ಇದೇ ಪೌರಕಾರ್ಮಿಕರು ಆದರೆ ಅವರ ಬದುಕು ಸಿಂಗರಿಸುವರು ಯಾರು!?.
ಈ ಪ್ರಶ್ನೆಯನ್ನು ಕನಿಷ್ಠ ಮೇ 1 ಕಾರ್ಮಿಕ ದಿನಾಚರಣೆಯಂದಾರೂ ನಮ್ಮನ್ನು ನಾವು ಹಾಕಿಕೊಳ್ಳಬೇಡಿವೆ?
ಮನಸ್ಸಿನ ಮಾರ್ಗದಲ್ಲಿ ಮೌನವಾಗಿ ಸಂಚರಿಸುವ ಸದಾ ಚಾರಿಗಳು ಈ ಪೌರ ಕಾರ್ಮಿಕರು, ಇವರ ಮೌನ ಹಲವರಿಗೆ ಅರ್ಥವಾಗದೆ, ಧ್ವನಿ ಇಲ್ಲದವರು ಅಂದುಕೊಂಡಿದ್ದಾರೆ, ಪೌರಕಾರ್ಮಿಕರ ಮೌನ ಬಂಗಾರ , ಅಂದರೆ ಅವರ ಕಾಯಕ ಬಂಗಾರದ ಅಂತದ್ದು, ಅದಕ್ಕೆ ನಾವುಗಳು ಮಾತಿನ ಮೂಲಕವಾದರೂ, ಆ ಮನಸ್ಸುಗಳಿಗೆ ಹಿತವಾಗುವ ‘ಮಾತಿನ ಬೆಳ್ಳಿ’ಯ ಉಡುಗೊರೆ ನೀಡೋಣ ಈ ಮೇ 1 ಕಾರ್ಮಿಕರ ದಿನದಂದು.
ನಮ್ಮಗಳ ಮಾರ್ಗ ಸನ್ಮಾರ್ಗ ಮಾಡಿದ ಈ ಮನಸ್ಸುಗಳಿಗೆ ಅಡೆತಡೆಗಳು ಉಂಟಾಗಬಾರದು ಅಲ್ಲವೇ? ಮಾನಸಿಕ ಮಾರ್ಗಕ್ಕೂ, ಲೌಕಿಕ ಮಾರ್ಗಕ್ಕೂ ಅಂತರಂಗ ಬಹಿರಂಗ ಶುದ್ದಿ ಬಹಳ ಮುಖ್ಯ ಅಲ್ಲವೆ? ಬಹಿರಂಗ ಶುದ್ಧಿಯ ಕಾಯಕದ ಪೌರ ಕಾರ್ಮಿಕರುಗಳಿಗೆ ನಮನಗಳನ್ನು ಸಲ್ಲಿಸದಿದ್ದರೆ ಹೇಗೆ? ಯೋಚಿಸಿ.
ಕಣ್ಣಿಗೆ ಕಾಣದ ಕ್ರಿಮಿ-ಕೀಟಗಳನ್ನು ನಾಶಮಾಡಿ, ನಮ್ಮೆಲ್ಲರ ಆರೋಗ್ಯ ಕಾಪಾಡುವ ಅರೆ ಬರಿಗಾಲ ವೈದ್ಯರು ಈ ಪೌರಕಾರ್ಮಿಕರು, ಅನೇಕ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವುದು ನಮಗೆಲ್ಲರಿಗೂ ತಿಳಿದ ವಿಷಯ ಆದರೂ ನಾವು ಇದನ್ನೆಲ್ಲ ನೋಡಿದರೂ ನೋಡದಂತೆ ಇರುವ ಮನಸ್ಥಿತಿಯನ್ನು ಬೆಳೆಸಿಕೊಂಡಿರುವುದು, ನಮ್ಮನ್ನು ನಾವೇ ತಿರಸ್ಕರಿಸಿ ಕೊಂಡಂತೆ ಎನ್ನುವ ಸಣ್ಣ ವಿಚಾರವು ನಮಗೆ ಅರ್ಥವಾಗುತ್ತಿಲ್ಲ ಎನ್ನುವ ಬೇಜಾರು ಇದೆ.
ಮನಸ್ಸಿನ ಮಲಿನ ತೊಳೆಯುವ ಸೂಫಿ ಸಂತರಂತೆ, ಮಠಾಧೀಶರಂತೆ ಬಾಹ್ಯ ಮಲಿನ ತೊಳೆಯುವ ಈ ಪೌರಕಾರ್ಮಿಕರು ಪೂಜ್ಯನಿಯರು ಅಲ್ಲವೆ ?
ಸದಾ ಅರೆಹೊಟ್ಟೆ, ಕೊಟ್ಟಾಗ ಪಗಾರ, ಇದೆ ಪೌರಕಾರ್ಮಿಕರ ಹಣೆ ಬರಹ, ತಮ್ಮನ್ನು ತಾವು ಸುಟ್ಟುಕೊಂಡು, ಊರ ಜನರಿಗೆ ಶುದ್ಧ ನೀರು, ಪ್ರಖರ ಬೆಳಕು ನೀಡುವವರು ಇಂದು ಒಂದು ದಿನವಾದರೂ ಈ ಅಕ್ಷರಗಳ ಬೆಳಕು ಅವರ ಮೇಲೆ ಬೀಳಲಿ ಎನ್ನುವುದೇ ನನ್ನ ಆಶಯ.
ವಿಜಯ ಅಮೃತರಾಜ್.
ಕಾರ್ಮಿಕರ ಶ್ರಮ ದುಡಿಮೆ ಕುರಿತಾದ ಉತ್ತಮ ಆಶಯಗಳುಳ್ಳ ಲೇಖನ ಸರ್ ವಿಜಯ್ ಅಮೃತಸರ್ ಅವರಿಗೆ ಅಭಿನಂದನೆಗಳು
ಓದಿ ಪ್ರತಿಕ್ರಿಯೆ ನೀಡುವ ತಮ್ಮಗೆ ಧನ್ಯವಾದಗಳು.
Meaningful writing and thinking.
ಸೊಗಸಾಗಿದೆ,,,,,
ತುಂಬಾ ಸಾಂದರ್ಭಿಕ ವಾದ ಹಾಗೂ ಅರ್ಥಪೂರ್ಣ ಲೇಖನ ಚೆನ್ನಾಗಿ ಮೂಡಿ ಬಂದಿದೆ. ಎಲ್ಲಾ ಕಾರ್ಮಿಕ ಬಂಧುಗಳಿಗೂ ಧನ್ಯವಾದಗಳು ಹಾಗೂ ತಮಗೂ ಧನ್ಯವಾದಗಳು ಸರ್.
ಪ್ರತಿಕ್ರಿಯಿಸಿದ ತಮ್ಮ ಸಹೃದಯತೆಗೆ ಧನ್ಯವಾದ.