ಕಾವ್ಯ ಸಂಗಾತಿ
ದೀವಟಿಗೆ
ಡಾ. ನಿರ್ಮಲ ಬಟ್ಟಲ
ಕಲ್ಲು ಸುರಿಂದ್ಹಾಂಗ
ಮಳೆ….!
ಭೂಮಿ ಚೆಂಡಿನಂತೆ
ಉರುಳುವಾಂಗ ಗಾಳಿ…!
ನಕ್ಷತ್ರಗಳ ಗೊಂಚಲೇ
ಜಾರಿ ಬಿದ್ದಾಂಗ ಮಿಂಚು…!
ಗುಡುಗು ಬಾರಿಸುತ್ತಿದೆ ನಗಾರಿ
ಬ್ರಹ್ಮಾಂಡ ಬೇರಿ….!
ಸೂರ್ಯ ಫಕ್ಕನೆ ಬೆಳಗಿ
ಮರೆಯಾದ ಬೆಳಕು….!
ಮುಗಿಲು ಹರಿದು ಬಿದ್ದಾಂಗ
ಸಿಡಿಲು….!
ಮುಸುಕಿದೆ ಕರಿಮೋಡ
ಕತ್ತಲೆಯ ಸೆರಗು….!
ಮಳೆರಾಯನ ಈ ರುದ್ರನರ್ತನ
ಶಾಂತವಾಗಿ..!
ಮೊಡಗಳ ಬದಿಗೆ ಸರಿಸಿ
ಬರಬೇಕು ಚಂದಿರ
ಬೆದರಿದ ಭೂರಮೆಯ
ರಮಿಸಲು….!!
ಬೆಳದಿಂಗಳ ದೀವಟಿಗೆ
ಹಿಡಿದು…!!
ವಾವ್, ಚೆಂದದ ಕವನ, ಸುಂದರ ಉಪಮೆಗಳು.
ಹೊಸತನ ಇರುವ ಕವಿತೆ
ಸುಕುಮಾರ ಆಶಯದ ಕವಿತೆ….. ನಿರ್ಮಲಾ….ಚೆಂದ ಇದೆ