ಕಾವ್ಯ ಸಂಗಾತಿ
ಜೊತೆ ಸಾಗು
ಜೊತೆ ನಡೆದುಬಿಡು ಗೆಳೆಯ
ಸಾವಿನೂರ ನಾ ಸೇರುವವರೆಗೂ
ಜೀವ ಜಾರುವವರೆಗೂ
ಜೀವನ ಮುಗಿವವರೆಗೂ
ತುಸು ಹೆಚ್ಚೇ ನಡೆಯಬಲ್ಲೆ
ನೀ ಕೈಯ ಹಿಡಿದಿರಲು
ಏಸು ದಣಿವನೂ ಮರೆಯಬಲ್ಲೆ
ನೀ ನಗುತ ಜೊತೆಯಿರಲು
ಏಕಾಂಗಿ ಮಾಡದಿರು
ಹೃದಯ ಬಿಗಿಹಿಡಿದುಬಿಡು
ನೀ ನನಗೆ ನಾ ನಿನಗೆ
ಎಂಬಾಣೆ, ಭಾಷೆಗಳ ಮರೆಯದಿರು
ಜೊತೆ ಸಾಗು, ಸಾಗು
ಹೃದಯದಿಂಗಿತವನರಿತು
ಕೊನೆತನಕ ಧನಿಯಾಗು
ಅಂತಿಮಕ್ಕೊಂದು ಕವಿತೆಯಾಗು
ಒಲವು