ಕಟ್ಟುವೆವು ಗೂಡನು.

ಕಾವ್ಯ ಸಂಗಾತಿ

ಕಟ್ಟುವೆವು ಗೂಡನು.

ಸುರೇಶ ಮಲ್ಲಾಡದ..

ಪಕ್ಷಿರಾಜ ಹತ್ತಿರ ಬಂದ
ನಿನಗಾಗಿ ನನ್ನ ಕೊಕ್ಕಿನೊಳು
ಒಣ ಹುಲ್ಕಡ್ಡಿಗಳ ಹೆಕ್ಕಿತಂದು
ಸುಂದರ ಗೂಡು ಹೆಣೆಯುವೆ..
ನನ್ನ ಬಾಳಿಗೆ ಬೆಳಕಾಗಿ ಜೊತೆಗಿರೆಂದು
ಪರಿ ಪರಿಯಾಗಿ ನಿವೇದಿಸಿಕೊಂಡಿಹನು.

ಪಕ್ಷಿ ಸಂಕುಲದೊಳು ದೈವದತ್ತ
ಉತ್ತಮವಾದ ಒಡಂಬಡಿಕೆಯಿದೆ..
ಮದುವೆಯಾದ ಮೇಲೆ
ಮನೆ ಕಟ್ಟುವವರು ನಾವಲ್ಲ..
ಸರಸ-ಸಲ್ಲಾಪಕೆ ಆಸ್ಪದವಿಲ್ಲ..

ಜೊತೆಯಾದೆವು..
ನೀಲಿ ಆಗಸದೊಳು..
ಸ್ವಚ್ಛಂದವಾಗಿ ವಿಹರಿಸಿದೆವು
ಬಿಳಿ ಮೋಡಗಳಿಗೆ..
ಹಸಿರು ವನಗಳಿಗೆ..
ನಮ್ಮ ಪ್ರೇಮ-ಪ್ರಣಯದ
ಸವಿನೆನಪುಗಳ ಹಂಚಿಕೊಂಡೆವು.

ಜೊತೆಯಾಗಿ..
ಒಬ್ಬರಿಗೊಬ್ಬರು ಹೆಗಲಿರಿಸಿ..
ನಮ್ಮ ಕನಸಿನ ಸುಂದರ
ಗೂಡನ್ನು ಕಟ್ಟಿದೆವು..
ಪ್ರಣಯದಾಟದೊಳು ತೇಲಾಡಿ ಸರಸ-ಸಲ್ಲಾಪದೆಡೆಗೆ
ನಡೆದಿಹೆವು..
ಇನ್ನೇನಿದ್ದರೂ ನಮ್ಮ
ಕನಸಿನ ಗೂಡಿನೊಳು
ಪುಟ್ಟ-ಪುಟ್ಟ ಮರಿ ಪಕ್ಷಿಗಳ
ಚಿಲಿಪಿಲಿ ಜೇಂಕಾರ…


2 thoughts on “ಕಟ್ಟುವೆವು ಗೂಡನು.

  1. ಪ್ರಾಣಿ ಪಕ್ಷಿಗಳಲ್ಲಿ ಎಷ್ಟೊಂದು ಸುಂದರ ಒಡಂಬಡಿಕೆ ಇದೆ. ನಾನೇ ಜ್ಞಾನವಂತ ಎನ್ನುವ ಮಾನವನಿಗೆ ಈ ಮೂಕ ಪ್ರಾಣಿಗಳು ಅನುಕರಣೀಯ. ಚೆನ್ನಾಗಿದೆ ಕವನ.ಧನ್ಯವಾದಗಳು ತಮಗೆ.

Leave a Reply

Back To Top