ಕಾವ್ಯ ಸಂಗಾತಿ
ಸಂತಸದ ಅಲೆ……!
ಶಂಕರಾನಂದ ಹೆಬ್ಬಾಳ
ಹೃದಯ ಬಡಬಡಿಸುತ್ತಿದೆ
ಅಲಾರಂನಂತೆ
ಟಿನ್ ಟಿನ್ ಎಂದು ವಟಗುಟ್ಟುತ್ತಿದೆ…
ತನ್ನ ಡ್ಯೂಟಿಗೆ ಹಾಜರಾದ ಸೂರ್ಯ
ಕೆಂಪನೆ ಮೊಗವೇರಿ ಬಂದ
ಆಮೇಲೆ ಉರಿ ಉರಿ….
ಹೊದ್ದಿರುವ ಮುಸುಕ ಸರಿಸಿದೆ
ಥಟ್ಟನೆ…..ಥುತ್…!
ಆಗಲೆ ಬೆಳಿಗ್ಗೆ ಗಂಟೆ ಎಂಟು…?
ಎಬ್ಬಿಸಲು ಅವಳಿಲ್ಲ..
ಬಳೆಗಳ ಸದ್ದಿಲ್ಲ
ಗೆಜ್ಜೆಯ ನಾದವಿಲ್ಲ…
ಪೋನಾಯಿಸಿದರೆ
ಒಂದೇ ದನಿ
” ನೀವು ಕರೆಮಾಡಿದ
ಚಂದಾದಾರು ವ್ಯಾಪ್ತಿ
ಪ್ರದೇಶದ ಹೊರಗಿದ್ದಾರೆ”
ಎಂಬ ಅಣಕುನುಡಿ..
ಬಾಗಿಲು ಬಳಿ ಸದ್ದು…
ಸರ್….ಪೇಪರ್
ಎಂಬ ಕೂಗು
ಬಂದೆ….ತಡಿಯೋ…?
ಬೆನ್ನು ತಿರುಗಿಸಬೇಕೆನ್ನುವ
ಚಣದಲ್ಲಿ….
ಅಮ್ಮ….?
ಹಾಲು…..
ಸರ್….
ಸರಿ ಕೊಡಮ್ಮ….
ಚಿಕ್ಕಮ್ಮಾರು ಇಲ್ವಾ…..
ತವರಿಗೆ ಹೋಗಿದ್ದಾಳೆ
ಎಂದು ಹಲ್ಕಿರಿದ….
ಗ್ಯಾಸ ಆನ್ ಮಾಡಿ ಹಾಲಿಟ್ಟೆ
ಹಾಲು ಕಾಸಿ
ಕಾಫಿ ಮಾಡಿದೆ….
ಸಮಯ ಒಂಬತ್ತುವರೆ ಆಗಿತ್ತು….
ಅರ್ದಮರ್ದ ಸ್ನಾನ
ಮುಗಿಸಿ….ಹೋಟೆಲನಲ್ಲಿ
ಇಡ್ಲಿ ತಿಂದು ಕೆಲಸಕ್ಕೆ ದಡಬಡಾಯಿಸಿ
ಹೊರಟೆ…..
ಅವಳ ನೆನಪಿನಲ್ಲಿ….
ನೀನಿದ್ದರೆ ಚನ್ನಿತ್ತು….?
ಎಂಬ ಮೂಕದನಿ
ಸಂಜೆ ಸೂರ್ಯ ಸಪ್ಪೆಮೋರೆ
ಹಾಕುತ್ತಾ ಜಾರಿದ
ಮಡದಿಗೊಂದು ಪೋನಾಯಿಸಿದೆ….
ಅತ್ತ ಕಡೆಯಿಂದ …..ರೀ ಮಾತಾಡಿ
ನಾನೇ……
ಆಫಿಸಿಗೆ ಹೋಗಿದ್ರಾ…?
ತಿಂಡಿ ತಿಂದ್ರಾ….?
ಹೀಗೆ ದಿನಚರಿಯ ಮೆಲುಕು
ಹಾಕಿ ಹಾಸಿಗೆಗೆ ಒರಗಿ
ಸರಿ….ನಿದ್ದೆ ಬಂತು…
ಮರುದಿನ ಬಾಗಿಲು
ತೆರೆಯುವ ಮುಂಚೆ
ಅವಳೇ ಕಣ್ಣೆದುರು…?
ಆಹಾ..!
ಅಂತೂ ಬಂದೆಯಲ್ಲೆ….
ಒಂದು ಸಂತಸದ ಅಲೆ
ಎದೆಯಲ್ಲಿ ಉಕ್ಕಿತ್ತು….
ಸುಂದರ ಅಭಿವ್ಯಕ್ತಿ… ಮನೆ ಮನದೊಡತಿ ಇರದ ಬಾಳು ಬಾಳೇ ಅಲ್ಲ. ಧನ್ಯವಾದಗಳು ತಮಗೆ.