ಕಾವ್ಯಸಂಗಾತಿ
ಇನಿಯ
ಉಮಾ.

[1:37 am, 21/04/2022] Uma devi: ನಿನಗೊಂದು ನೆಪ ಬೇಕಾ
ನನ್ನ ನೋಡಲು
ನನ್ನೊಡನೆ ಮಾತಾಡಲು..
ನಿನಗೊಂದು ನೆಪ ಬೇಕಾ
ನನ್ನ ಎದುರು ನಿಂತು
ನನ್ನ ಕಣ್ಣಲಿ ಕಣ್ಣಿಟ್ಟು ನೋಡಲು..
ನಿನಗೊಂದು ನೆಪ ಬೇಕಾ
ನನ್ನ ಬರಸೆಳೆದು
ನಿನ್ನ ತೋಳಿನಲ್ಲಿ ಬಿಗಿದಪ್ಪಲು..
ನಿನಗೊಂದು ನೆಪ ಬೇಕಾ
ನನ್ನ ಮೊಗವ ಹಿಡಿದು
ನಿನ್ನ ಪ್ರೀತಿಯ ಹೂ ಮುತ್ತಿಡಲು..
ನಿನಗೊಂದು ನೆಪ ಬೇಕಾ
ನನ್ನ ಕಿವಿಯಲ್ಲಿ ಪಿಸುಮಾತಾಡಿ
ನಿನ್ನ ಮತ್ತಲ್ಲಿ ಮೈ ಮರೆಸಲು
ನಿನಗೊಂದು ನೆಪ ಬೇಕಾ
ನನ್ನ ಉಸಿರಿಗೆ ನಿನ್ನುಸಿರ ಬೆರೆಸಿ
ನಿನ್ನ ಜೊತೆ ಜಗವ ಮರೆಸಲು…
ನಿನಗೇಕೆ ನೆಪ ಇನಿಯ
ನಾನೇ ನಿನ್ನವಳಾಗಿ
ನಿನ್ನ ಬರುವಿಕೆಗಾಗಿ ಕಾದಿರುವಾಗ….
————————