ಕಾವ್ಯ ಸಂಗಾತಿ
ಈ ಪ್ರೇಮ
ಒಲವು

ಮನಸು ಮನಸುಗಳಲ್ಲಿ
ಕಾಡಿ ಬರೆದ ಕವಿತೆ
ಈ ಪ್ರೇಮ
ಮನಸ್ಸು ಮನಸುಗಳಲ್ಲಿ
ಮೂಡಿ ಹಾಡಿದ ಭಾವಗೀತೆ
ಈ ಪ್ರೇಮ
ಮನಸು ಮನಸುಗಳಲ್ಲಿ
ನಸುನಗುವ ಹೃದಯ
ಈ ಪ್ರೇಮ
ಸ್ವಚ್ಛಂದ ಬಾನಲ್ಲಿ
ಹಾರಾಡೋ ಜೋಡಿಹಕ್ಕಿ
ಈ ಪ್ರೇಮ
ಇಳಿಸಂಜೆ ಹೊತ್ತಲ್ಲಿ
ಇಳೆಗಿಳಿದ ಇಬ್ಬನಿ
ಈ ಪ್ರೇಮ
ಒಲವ ಹೃದಯಗಳಲ್ಲಿ
ಹರಿವ ನಸುಗೆಂಪು ರಕ್ತ
ಈ ಪ್ರೇಮ
ಭಯವಿಲ್ಲದೆ ಬೆರೆತ
ಎರಡು ಹೃದಯಗಳ ಪಿಸುಮಾತು
ಈ ಪ್ರೇಮ
ಬರೆದಷ್ಟೂ ಬರೆಸಿಕೊಳ್ಳುವ
ಮುಗಿಯದ ಹೊಸಕಾವ್ಯ
ಈ ಪ್ರೇಮ
ಬಯವಿಲ್ಲದೆ ಬೆರೆತ ಎರಡು ಹೃದಯ ಗಳ ಪಿಸುಮಾತು ಈ. ಪ್ರೇಮ. ವಾವ. ಹೃದಯ ತಟ್ಟಿತು ಬಡಿತ ತಪ್ಪಿತು.
ತುಂಬ ಧನ್ಯವಾದ ಸರ್
ಹೌದು ಬರೆದಷ್ಟೂ ಬರೆಯಿಸಿಕೊಳ್ಳುವ ಮುಗಿಯದ ಹೊಸ ಕಾವ್ಯ ಈ ಪ್ರೇಮ. ತುಂಬಾ ಸುಂದರವಾದ ಕವಿತೆ. ಧನ್ಯವಾದಗಳು.
ತುಂಬ ಧನ್ಯವಾದ ಮೇಡಂ