ನಾ ಕಣ್ಣಿಗೆ ಕಾಣದ ಕೊರೊನಾ..!

ಕಾವ್ಯ ಸಂಗಾತಿ

ನಾ ಕಣ್ಣಿಗೆ ಕಾಣದ ಕೊರೊನಾ..!

ಸೋಮಶೇಖರ್ ಜಮಶೆಟ್ಟಿ,

ನೀನು ಯಾರಿಗೂ
ಹೆದರದವನು..!
ಯಾರಿಗೂ ಕೈ
ಜೋಡಿಸದವನು..!!
ನನಗ್ಯಾಕ ಭಯ ಪಡತಿ..?

ನೀನು ದುಡ್ಡಿನ
ಅಹಂಕಾರದವನು..!
ಯಾರಿಗೂ ತಲೆ
ಬಾಗದವನು..!!
ನನಗ್ಯಾಕ ಭಯ ಪಡತಿ..?

ನೀನು ಬಂಧು-ಬಳಗ
ಮರೆತವನು..!
ಒಬ್ಬಂಟಿಯಾಗಿ
ಬದುಕಿದವನು..!!
ನನಗ್ಯಾಕ ಭಯ ಪಡತಿ..?

ನೀನು ಜಾತಿ-ಭೇದ
ಮಾಡುವನು..!
ನಾನೇ ಶ್ರೇಷ್ಠ
ಅಂದ್ಕೊಂಡವನು..!!
ನನಗ್ಯಾಕ ಭಯ ಪಡತಿ..?

ನೀನು ದೇಶಿ ಸಂಸ್ಕಾರ
ಕಲಿತವನು..!
ವಿದೇಶಿ ಸಂಸ್ಕಾರಕ್ಕೆ
ಬಲಿಯಾದವನು..!!
ನನಗ್ಯಾಕ ಭಯ ಪಡತಿ..?

ನೀನು ಉತ್ತಮ
ಆರೋಗ್ಯವಂತನು..!
ಎಂದೂ ಆಸ್ಪತ್ರೆಗೆ
ಹೋಗದವನು..!!
ನನಗ್ಯಾಕ ಭಯ ಪಡತಿ..?

ನೀನು ಎಲ್ಲರಿಗೂ
ಒಳಿತು ಮಾಡುವನು..!
ಸಹಾಯಕ್ಕೆ ಕೇಡು
ಬಯಸಿದವನು..!!
ನನಗ್ಯಾಕ ಭಯ ಪಡತಿ..?

ನೀನು ದೇವರಿಂದ
ವರ ಪಡೆಯುವನು..!
ದೇವರ ಬಾಗಿಲು
ಮುಚ್ಚಿದವನು..!!
ನನಗ್ಯಾಕ ಭಯ ಪಡತಿ..?

ನೀನು ದೇಶದ
ಜನ ನಾಯಕನು..!
ಆಡಳಿತದ ಚುಕ್ಕಾಣಿ
ಹಿಡಿದವನು..!!
ನನಗ್ಯಾಕ ಭಯ ಪಡತಿ..?

ನೀನು ಜನತಾ ಕರ್ಪ್ಯೂ
ಪಾಲಿಸುವನು..!
ಕೊರೊನಾ ಹೊಡೆದು
ಓಡಿಸುವನು..!!
ನನಗ್ಯಾಕ ಭಯ ಪಡತಿ..?

ನೀನು ಬಲಿಷ್ಠ
ಭಾರತದವನು..!
ಮುಂದೆ ವಿಶ್ವದ
ದೊಡ್ಡಣ್ಣನಾಗುವನು..!!
ನನಗ್ಯಾಕ ಭಯ ಪಡತಿ..?
ನಾ ಕಣ್ಣಿಗೆ ಕಾಣದ ಕೊರೊನಾ..!

  -------------------

5 thoughts on “ನಾ ಕಣ್ಣಿಗೆ ಕಾಣದ ಕೊರೊನಾ..!

    1. ತುಂಬಾ ಚೆನ್ನಾಗಿದೆ. ನಿಮ್ಮ ಸಾಹಿತ್ಯ ರಚನೆಯ ಆಸಕ್ತಿ ಹೀಗೆ ಮುಂದುವರೆಯಲಿ.

  1. ಹೌದು ಇಡೀ ಮನುಕುಲವನ್ನೇ ನಡುಗಿಸಿದ ಈ ರೋಗ. ಎಂಥ ನೋವಿನ ದಿನಗಳವು! ಮತ್ತೆಂದೂ ಬಾರದಿರಲಿ. ಕವನ ಚೆನ್ನಾಗಿದೆ.

  2. ಅತ್ಯಂತ ಸುಂದರ ಕವನ ತುಂಬಾ ಧನ್ಯವಾದಗಳು ಅಧ್ಯಕ್ಷರಿಗೆ ನಿಮ್ಮ ಸಾಹಿತ್ಯ ಸೇವೆ ಕವನ ರಚನೆ ಸದಾ ಹೀಗೆ ಮುನ್ನಡೆಯಲಿ…

    1. ಅರ್ಥ ಪೂರ್ಣ ಹಾಗೂ ಸದ್ಯ ಪರಸ್ಥಿತಿಗೆ ಹಿಡಿದ ಕೈಗನ್ನಡಿ ಈ ಕವನ ತುಂಬಾ ಧನ್ಯವಾದಗಳು ಅಧ್ಯಕ್ಷರಿಗೆ ನಿಮ್ಮ ಸಾಹಿತ್ಯ ಸೇವೆ ಕವನ ರಚನೆ ಸದಾ ಹೀಗೆ ಮುನ್ನಡೆಯಲಿ…

Leave a Reply

Back To Top