ನೆರಳಿತ್ತವನ ಉರುಳಿಸಿದವರು

ಕಾವವ್ಯ ಸಂಗಾತಿ

ನೆರಳಿತ್ತವನ ಉರುಳಿಸಿದವರು

ಸುರೇಶ ಮಲ್ಲಾಡದ.

ಮುಂದಿನ ಪೀಳಿಗೆಗಳಿಗೆ…
ಜಲ-ಚರಗಳಿಗೆ ನೆರವಾಗಲು
ಭುವಿ ತಂಪಾಗಿ..
ಮೋಡ ಮಂಜಾಗಿ..
ಮಳೆ ಸುರಿಸಲಿ. ಜೀವ-ಸಂಕುಲಕೆ
ಬೊಗಸೆ ನೀರುಣಿಸಲೆಂದು..
ರಾಜರು. ಪರಿಸರ ಪ್ರಿಯರೆಲ್ಲ
ಕೂಡಿ ಗಿಡ ನೆಟ್ಟರು..

ಬರಿಗಾಲೊಳು ನಡೆದಾಡಿದರೆ.
ಆರೋಗ್ಯಕ್ಕೆ ರಕ್ತ-ಪರಿಚಲನೆಗೆ
ಉತ್ತಮವೆಂದು ತಿಳಿದಿದ್ದ
ನಮ್ಮ ಹಿರೀಕರು..
ಪರಿಸರ ಪ್ರಿಯರು. ಉತ್ತಮ
ನಾಗರೀಕರವರು..

ಬೆಳೆದೆ ನಾನು ಆಲ-ಮರವಾಗಿ
ಭೂ ಒಡಲ ಅಂತರಾಳದ
ಜಲವ-ನುಂಡು…
ಮಣ್ಣಿನ ಸತ್ವ ಹೀರಿ..
ಆಕಾಶದಗಲ ನಳನಳಿಸೋ
ಹಸಿರ ರಂಬೆ-ಕೊಂಬೆ ಹರಡಿ
ನೆರಳ ಹಾಸಿ ಭುವಿಗೆ ನೂರಡಿ.

ಮನುಜ ನಡೆಯುವುದ ಮರೆತಿರುವ.
ಹಲವು ರೋಗಗಳಿಗೆ ತುತ್ತಾಗಿರುವ.
ತನ್ನ ವಾಹನಗಳಿಗೆ ಸರಾಗ
ರಸ್ತೆ ಗೇಯುತ್ತಿರುವ..
ಅಡ್ಡಬಂದ ನನ್ನಂತಹ ನೂರಾರು
ವರ್ಷಗಳಿಂದ ಮಳೆ-ನೆರಳಿಗೆ
ನೆರವಾಗಿ ತಂಪನೀಯುವವರನ್ನ.
ಬುಡಮೇಲು ಮಾಡುತ್ತಿರುವ..


4 thoughts on “ನೆರಳಿತ್ತವನ ಉರುಳಿಸಿದವರು

  1. ವಾಸ್ತವ ಎಲ್ಲವೂ ಕೃತ್ತಿಮತೆಗೆ ಒಳಗಾಗಿ ನೋವು ಅನುಭವಿಸುವುದು ಖಚಿತ…ಮನುಷ್ಯ ನಷ್ಟು ಭಯಂಕರ ವ್ಯಕ್ತಿ ಬೇರೆಲ್ಲೂ ಇಲ್ಲ…

  2. ಹಸಿರೇ ಉಸಿರು ಎನ್ನುವ ಜನರು ಈಗೆಲ್ಲಿ? ಒಂದು ವೇಳೆ ಹಾಗೆ ಅನ್ನುವವರು ಮುಂದೆ ಬಂಧರೆ ಆಲದ ಮರದ ಗತಿಯನ್ನೇ ಅವರಿಗೂ ತಂದೊಡ್ಡುವವರು ಬೇಕಾದಷ್ಟು ಜನ ನಮ್ಮಲ್ಲಿ.ಇದಕ್ಕೆ ಕೊನೆ ಹೇಗೋ?!

    1. ಕೊನೆನೇ ಇಲ್ಲ. ಪ್ರಶ್ನಿಸಿದವರು ನೆಲೆ ಕಳೆದುಕೊಳ್ಳುವರು.ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ..

      ಧನ್ಯವಾದಗಳು ಮೇಡಮ್..

Leave a Reply

Back To Top