ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಗೂಡು

ಡಾ.ನಿರ್ಮಲಾ ಬಟ್ಟಲ

ವಸಂತನ ಆಗಮನದಿಂದ
ಪ್ರೇಮ ಕಾಮಗಳಲಿ ಹೃದಯವರಳಿ
ಹರ್ಷಗೊಂಡ ಜೋಡಿ
ಬುಲ್ ಬುಲ್ ಗಳೆರಡು
ಗೂಡುಕಟ್ಟಲೂ ಜಾಗ ಹುಡುಕುತ್ತ
ಹಾರಾಡುತಲಿದ್ದವು
ಪ್ರಣಯದಲಿ…..!

ಅವಳು…
ಬೆಳ್ಳಂಬೆಳಗ್ಗೆ
ಪ್ರೀತಿ ಪ್ರೇಮ ಕಾಮ ಕರಗಿ
ಕೊತಕೊತನೆ ಕುದಿಯು ತಾ
ಸುಟ್ಟ ಚಹಾದ ವಾಸನೆಗೆ
ಅಸಹನೆಯಿಂದ ಸಿಡಿಮಿಡಿಯುತ್ತಾ
ಕರಕಲಾದ ಪಾತ್ರೆಗಳನ್ನು
ತಿಕ್ಕುತ್ತಾ ಕುಕ್ಕತ್ತಾ ಗೊಣಗುತ್ತಿದ್ದಳೆ….!

ಅವಕ್ಕೊ…ಗೂಡು ಕಟ್ಟಬೇಕು
ಸಂಸಾರ ಹೂಡಬೇಕು
ಮೊಟ್ಟೆ ಇಡಬೇಕು
ಗೂಡೊಳಗಿದ್ದು
ಕಾವು ಕೊಡಬೇಕು
ಗುಟುಕು ನೀಡಬೇಕು
ಹಾರಲು ಕಲಿಸಬೇಕು ಎನ್ನುವ
ಆತುರ ಕಾತರ…..!

ಅವಳು ಅಷ್ಟೇ
ಇವೆಲ್ಲವೂ ಮಾಡಿದ್ದಳು….!
ಕಟ್ಟಿದ ಗೂಡಿನಿಂದ
ಪ್ರೀತಿ ಸಿಗದ ಕರುಳ ಕುಡಿಗಳಿಂದ
ಅಸಡ್ಡೆಯ ನುಡಿಗಳಿಂದ
ಕಾವೇರಿ ದ್ದಾಳೆ…!!
ಹಾರಿ ಬೀಡಬೇಕೆನ್ನುತ್ತಾಳೆ
ಸ್ವಚ್ಚಂದ ಬಾನಿಗೆ…
ಜಡವಾದ ಮನಸ್ಥಿತಿಯಲ್ಲಿ
ಆಗುತ್ತಿಲ್ಲಾ ನೊಯುತ್ತಿದ್ದಾಳೆ
ಕ್ಷಣ ಕ್ಷಣಕೂ…!

ಬುಲ್ ಬುಲ್ ಗೂಡಿನಲ್ಲಿಗ
ಜೋಗುಳ ಗಾನ….!
ಇವಳ ಮನದಲ್ಲೂ
ಈಗ ಸಡಗರ ….!
ಶಿಶು ಆರೈಕೆ ಬಾಣಂತನದ ಭಾರ
ರಕ್ಷಿಸು ಅವುಗಳನು
ಎನ್ನುವ ಪ್ರಾರ್ಥನೆ ನಿತ್ಯ ದೇವರಲಿ
ಎಷ್ಟಾದರೂ ಅವಳು ತಾಯಲ್ಲವೆ….!

ಸಮಭಾರ ಹೊತ್ತು
ಹಕ್ಕಿಗಳೆರಡೂ….
ಲಾಲಿಸಿ ಪಾಲಿಸಿ ಮುದ್ದಿಸಿ
ಜತನದಿ ಬೆಳೆಸಿದವುದ ಕಂಡು
ನೆನಪಿನಾಳಕ್ಕೆ ಇಳಿದು ಪುಳಕ ಗೊಳ್ಳುತ್ತಾಳೆ….!!

ಹಾರಲೊಲ್ಲದೆ ಭಯಪಡುವ ಮರಿಗಳಿಗೆ
ರಮಿಸಿ ಓಲೈಸಿ
ಹಾರಲು ಕಲಿಸಿದ ಕಂಡು
ನಿಟ್ಟುಸಿರು ಬೀಡುತ್ತಾಳೆ
ತುಟಿಯಂಚಿನಲ್ಲೊಂದು ನಗು
ಕಣ್ಣಂಚಿನಲ್ಲೊಂದು ಹನಿ
ಮಿಂಚಿ ಮರೆಯಾಗುತ್ತದೆ…!!

ಆಗಸದಲಿ
ಭಯವನು ಬಿಟ್ಟು ರೆಕ್ಕೆಯ ಬಿಚ್ಚಿ
ಗಾಳಿಯ ರಭಸಕೆ
ಆಗಸದ ವಿಸ್ತಾರಕೆ
ಬಲಿತರೆಕ್ಕೆಯ ಆತ್ಮ ಬಲಕೆ
ಹಾರುತ ಸಾಗಿದವು ಮರಿಗಳೆಲ್ಲಾ ದೂರದಲ್ಲಿ….!!

ಗೂಡಿಗೆ ಬಾರದ
ಮರಿಗಳಿಗಾಗಿ ಕಾಯದೆ
ಸಾರ್ಥಕತೆಯ ಭಾವದಿ
ಮರಿಗಳ ಹಂಗು ಗೂಡಿನ ಹಂಗುನು
ತೊರೆದು ಹಾರಿದವು
ಜೋಡಿ
ಬುಲ್ ಬುಲ್ ನೀಲಾಗಸದಲಿ….!

ಅವಳ ಕಣ್ಣಲ್ಲಿಗ
ಖಾಲಿಯಾದ ಕಣ್ಣಹನಿ
ಶಾಂತವಾಗಿದ್ದಾಳವಳಿಗ ಬುದ್ದನಂತೆ….!!
ಹಗುರಾಗಿದ್ದಾಳೆ ಹೂವಿನಂತೆಯಂತೆ…!
ಮೋಹದ ಗೂಡಿನಿಂದ ಹೊರಬಂದು
ವಿಶಾಲ ಬಾನಿನಲ್ಲಿಗ ಹಾರುತ್ತಿದ್ದಾಳೆ
ಹಕ್ಕಿಯಂತೆ….!!

About The Author

3 thoughts on “ಗೂಡು”

    1. ಚಂದ್ರನಾಥ ಶೆಟ್ಟಿ

      ಹೋಲಿಕೆ ಚೆನ್ನಾಗಿದೆ. ಹಾರುವ ಹಕ್ಕಿಗೆ ಹಾರಲಾರದ ಮನುಜ .ಭಾವನೆಗಳಿಗೆ ವಿಸ್ತಾರ ಬಾ ನು ಅಭಿನಂದನೆಗಳು. ಮೇಡಂ.

  1. ಹೆಚ್. ಮಂಜುಳಾ.

    ತುಂಬಾ ಅರ್ಥವತ್ತಾದ ಕವಿತೆ ಪ್ರಾಣಿ ಪಕ್ಷಿಗಳಂತೆ ತಾನೂ ಬದಲಾಗಬೇಕೆಂದುಕೊಂಡರೂ ವಾಸ್ತವ ಅಷ್ಟು ಸುಲಭವಲ್ಲ. ಆದರೂ ಭರವಸೆಯೇ ಬದುಕಾಗಬೇಕು. ಹೊಸ ಬದುಕನ್ನು ಕಟ್ದಿಕೊಳ್ಳಬೇಕು ಎಂಬುದನ್ನು ತಮ್ಮ ಕವನವು ಪ್ರತಿನಿಧಿಸುತ್ತದೆ. ನಿರೂಪಣೆಯ ಶೈಲಿ ತುಂಬಾ ಚೆನ್ನಾಗಿದೆ. ಧನ್ಯವಾದಗಳು ಮೇಡಂ.

Leave a Reply

You cannot copy content of this page

Scroll to Top