ಕಾವ್ಯ ಸಂಗಾತಿ
ಬಿಸಿಲು
ಡಾ. ಅರಕಲಗೂಡು ನೀಲಕಂಠ ಮೂರ್ತಿ
ಮಧ್ಯಾಹ್ನದ ಬಿಸಿಲು ಝಳಕ್ಕೆ
ತಕ್ಕಡಿಯಲಿ ಕಣ್ಣುಗಳಿಟ್ಟ ತಟ್ಟೆ
ಕೆಳಗೆ ಇಳಿಯುವುದು ಸಹಜ ಭಾರಕ್ಕೆ
ಬೇಸಿಗೆಯ ಕೋರೈಸುವ ಹೊಳಪಿನ
ಮಧ್ಯಾಹ್ನದ ಬೃಹತ್ ತೊಟ್ಟಿಯಲ್ಲಿ
ಅಂಗಾತ ಮಲಗಿ ಬಿಸಿಲ ಸುಡುಸುಡು ನೀರ
ಮೈದಡವುವ ಜಳಕದಲಿ
ನಡುಹಗಲ ನಿದ್ದೆಯ ಸಡಗರ
ಆಗಸದಾಳದಲಿ ಉರಿವ ನೇಸರ
ನೆಲದ ತೋಟದಲಿ ಉಟ್ಟು ಹೊಸ ಝರಿ ಹಸಿರ
ನಳನಳಿಸುವ ಅನಂತ ಸಸ್ಯ ಸಾಗರ
ಹೊತ್ತಿನ ಲಕ್ಷ್ಯ ಗಣನೆ ಇರದ ಹೊಟ್ಟೆಗಾಗಿ
ಅಂಥ ಆತಪದ ಧಗೆಯೊಳಗು ನುಗ್ಗಿ
ತಮ್ಮ ತಮ್ಮ ಕಾಯಕದಲಿ ನಿರತ ಕಾರ್ಮಿಕ ಕುಲ
ಬಿಸಿಲು ಬೇಗೆಯ ಬದುಕು
ವೈವಿಧ್ಯಮಯ ರಕಮು!
ಮೂರ್ತಿ”ನಿಮ್ಮ ನಡುಹಗಲ ನಿದ್ದೆಯ ಸಡಗರ ” ಖುಷಿ ಕೊಟ್ಟಿತು. ಚೆನ್ನಾಗಿದೆ ಕವನ
ಧನ್ಯವಾದಗಳು ಡಾ. ವೆಂಕಟೇಶ್
ಕವನ ಬಹಳ ಚೆನ್ನಾಗಿ ಮೂಡಿಬಂದಿದೆ. ಅಭಿನಂದನೆಗಳು ನೀಲಣ್ಣ