ಕಾವ್ಯ ಸಂಗಾತಿ
ಒಲವಿನ ಹನಿಗಳು
ಒಲವು
1.
ಹೃದಯ ಸೋತು
ಕೈಚೆಲ್ಲಿ ಕೂತಾಗ
ಉಸಿರು ತುಂಬುವ
ಚಿರಚೇತನ ಒಲವು
2.
ನನ್ನವಳ ಮಲಗಿಸಲು
ಹಾಡೇನೂ ಬೇಕಾಗಿಲ್ಲ
ಒಲವಿನ ಹನಿಗವಿತೆ
ಒಂದೇ ಸಾಕು
3.
ನಿದ್ದೆಗೆಡಿಸಿದ ರಾತ್ರಿಗಳು
ಉಸಿರುಗಟ್ಟಿಸಲಿಲ್ಲ
ಒಲವು ಅರಳಲು
ಸಾಕ್ಷಿಯಾದವು
4.
ಪ್ರತೀಸಾರಿ ನಾ ಕವಿತೆ ಬರೆಯುವಾಗಲೂ
ನೀ ಅದೇಕೆ ಇಣುಕಿ ಹೋಗುತ್ತೀಯಾ
ಕೊಠಡಿಯನ್ನಲ್ಲ,
ನನ್ನ ಹೃದಯದ ಕಪಾಟನ್ನು ಒಲವೇ….
5.
ಬದುಕು
ಒಲವೊಳಗೆ
ಅದ್ದಿ ತೆಗೆದ
ಚೆಲುವು
6.
ಕಂಗಳು ನಿನ್ನನ್ನೇ ಹುಡುಕುತ್ತವೆ,
ನೀ ನನ್ನನ್ನೇ ಹುಡುಕುತ್ತೀಯ
ಎಂದು ಕೊಳ್ಳುತ್ತವೆ.
7.
ಒಲವಿಲ್ಲದ ಹಾದಿಯಲ್ಲಿ
ಮುಳ್ಳುಗಳು ಹುಟ್ಟುತ್ತವೆ
8.
ನಡುವೆ ಕಣಿವೆ,ಕಂದಕಗಳಿರಲಿ
ಒಲವದೊಂದೇ ಸೇತುವೆಯಾಗಲಿ.
9.
ಸುಳಿವ ಸುಳಿಗಾಳಿಗಾದರೂ
ಕರುಣೆ ಬರಲಿ
ನಿನ್ನೊಲವ ಗಂಧವ
ಹೊತ್ತು ತರಲಿ
10.
ಸುಮ್ಮನಿರು
ಒಲವ ಕೆಣಕಬೇಡ
ಹೊತ್ತಿಕೊಂಡರೆ,
ಆರಿಸುವುದು ಕಷ್ಟ.