ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ7ಸಂಗಾತಿ

ದೇವಕಿರಣ

ಗಿರಿಜಾ ‌ಇಟಗಿ

ದಟ್ಟಕಾನನದ ನಟ್ಟನಡುವೆ
ಕತ್ತಲೆಯನಾಚೆ ದೂಡುತ್ತಾ,
ಭಾಸ್ಕರನ ಪ್ರಖರಕಿರಣ
ವಸುಮತಿಯ ದರುಶನಕೆ ಕಾತರಿಸುತಿಹದು

ಏನದ್ಭುತ!! ಸೃಷ್ಟಿಯ ಲೀಲೆಯದು
ಕೊರಡು ಕೊನರುವ ಸಮಯ
ಹಸಿರೆಲ್ಲಾ ಉಸಿರಲಿ ಬೆರೆಸಿ
ಹರ್ಷದ ಛಾಯೆಯಲಿ ಮಿಂದೇಳುತಿಹದು

ಧ್ಯಾನಗೈಯುತಲಿಹಳು ಪ್ರಕೃತಿ
ತನ್ಮಯಳಾಗಿ, ದೇವಕಿರಣವು
ಬಳಿಗೆ ಪೊಡಮಡಲು ತನ್ನನ್ನೆ
ಪರಿಶುದ್ಧ ಚೇತನಕೆ‌ ಅರ್ಪಿಸುತಿಹಳು

ಹೊಸತನದ ಸಿರಿಸೊಬಗಿನೊಳು
ತನ್ನೆದೆಯ ತಮವ ಕರಗಿಸುತಲಿ
ಮೃದುಮಧುರ ಭಾವದೊಳು
ದೈವಯೋಗವನು ಸ್ವೀಕರಿಸುತಿಹಳು

ವ್ಯಾಪಿಸಿಹುದು ಜಗದೊಳೆಲ್ಲಾ ಪೂರ್ಣತೆಯ ದರುಶನವು
ಎಲ್ಲ ಧರ್ಮದ ಬಂಧನವ ಕಳಚಿ
ವಿಶ್ವರೂಪದಿ ಪ್ರಕೃತಿ ಅನುಗ್ರಹಿಸುತಿಹಳು


About The Author

Leave a Reply

You cannot copy content of this page

Scroll to Top