ಗಜಲ್
ಬಾಗೇಪಲ್ಲಿ
ನಾನು ನಿನಗೆ ಯಾವುದರಲೂ ಕಡಿಮೆಯಿಲ್ಲವೋನನ್ನ ಸ್ವಾಮಿರಂಗ
ಗಂಡಿಗಿಂತ ಯಾವುದರಲೂ ಹೆಚ್ಚೂಯಿಲ್ಲವೋ ನನ್ನ ಸ್ವಾಮಿರಂಗ
ಸೃಷ್ಟಿ ಕಾರ್ಯದಿ ಗಂಡು ಹೆಣ್ಣಿನದು ಸಮಪಾಲು ಆಗಿಹುದು
ಇಬ್ಬರ ಕಲೆಗಾರಿಕೆಯಲಿ ವಿತ್ಯಾಸವಿಲ್ಲವೋ ನನ್ನ ಸ್ವಾಮಿರಂಗ
ಮೇಲಾಡುವ ಕರಿ ಮೋಡವೆಂಬ ಹುಂಬುತನ ಬೇಡ ಗಂಡೇ
ಮಳೆ ಸುರಿಸುವ ಬಾನೆಂದೂ ಗರ್ವಿಸಲಿಲ್ಲವೋ ನನ್ನ ಸ್ವಾಮಿರಂಗ
ಒಂದು ಹೆಣ್ಣಿಗೊಂದು ಗಂಡು ಪ್ರಕೃತಿ ಸಮಾನತೆಯ ನಿಯಮ
ಪಂಚಭೂತಗಳಲೆಂದೂ ತಾರತಮ್ಯವಿಲ್ಲವೋ ನನ್ನ ಸ್ವಾಮಿರಂಗ
ಗಂಡೆಂದು ಬೀಗಬೇಡ ಹೆಣ್ಣ ಕೀಳಾಗಿ ನೋಡಬೇಡ
ಹೆಣ್ಣೂಒಂದು ಜೀವಿ ಗಂಡು ಭೋಗಿಯಲ್ಲವೋ ನನ್ನ ಸ್ವಾಮಿರಂಗ
ಕೃಷ್ಣಾ ಗಂಡೇ ಹೆಣ್ಣೀ ನಿರ್ಧರಿಸುವುದು ಒಂದೇ ವೀರ್ಯಾಣು
ಮಿಕ್ಕೆಲ್ಲಾ ಜೀವಾಣುಗಳಲಿ ಭೇದ ವೆಂಬುದಿಲ್ಲವೋ ನನ್ನ ಸ್ವಾಮಿರಂಗ