ಹಾಯ್ಕುಗಳು

ಕಾವ್ಯ ಸಂಗಾತಿ

ಹಾಯ್ಕುಗಳು

ಭಾರತಿ ರವೀಂದ್ರ

1)
ಹಾಯ್ಕು ಎಂದರೆ
ಸಂಪೂರ್ಣ ಸಾಗರವೆ
ಬಂದಿ ಅಂಗೈಲಿ.

2)
ಮಿಂಚಿದ ಹಾಯ್ಕು
ಬಾಳ ಸಾರ ತುಂಬಿದೆ
ಅರ್ಥ ಗರ್ಭಿತ.

3)
ಕಣ್ಣೀರು ಸೆಲೆ
ಬಂಜರು ಹೃದಯಕೆ
ಚಿಗುರು ಮೂಡಿ.

4)
ಹಾಯ್ಕು ಎಂದರೆ
ಅವಳ ಮೌನ, ಅವ
ಮಿಡಿದ ರಾಗ.

5)
ಅಮ್ಮನ ನಗು
ಬಾಳ ಬೆಳದಿಂಗಳು,
ಅನವರತ.

6)
ತಾಯಿ ಎಂದರೆ
ನಿರ್ಜೀವ ಶರೀರಕ್ಕೆ
ಪ್ರಾಣ ದೇವತೆ.

7)
ರಾತ್ರಿ ಬಾನಿಗೆ
ತಾರೆಗಳ ಸಾಂಗತ್ಯ
ಚಂದ್ರ ಏಕಾಂಗಿ.

8)
ದೇವರ ರೂಪ
ಅಮ್ಮ, ಬದುಕಿನಲ್ಲಿ
ಅಮೃತ ಸಿಂಧು.

9)
ಹೂವು ಪತ್ರೆ ಯ
ಪೂಜೆ ಮಹಾದೇವ ಗೆ
ರಕ್ಷಿಸು ತಂದೆ

10)
ನಲ್ಲೆ ಮುನಿಸು
ನೆನಪಾಯಿತು, ಮೋಡ
ತುಂಬಿದ ಬಾನು.

11)
ತಾರೆ ಚಂದಿರ
ಕದ್ದು ನೋಡಲು, ನಲ್ಲೆ
ಕೆಂಪಾದ ಕೆನ್ನೆ.

12)
ಬಿಳಿ ಬಟ್ಟೆ ಗೂ
ಲಜ್ಜೆ, ಮನ ಮೈಲಿಗೆ
ತೆರೆ ಸರಿದು.

13)
ಬಾನ ಹಣೆಗೆ
ಇಳೆ ಇಟ್ಟ ತಿಲಕ
ನಗೋ ನೇಸರ.

14)
ಮೋಡ ನಾಚಿತು;
ನಲ್ಲೆ ಮುಡಿ ಬಿಚ್ಚಲು
ನೀರಿಗೆ ಚಳಿ.

15)
ಹುಚ್ಚು ಏನಲು
ನಗದಿರೆ ಸಾಧ್ಯ ವೇ?
ಮನ ಲಹರಿ.


One thought on “ಹಾಯ್ಕುಗಳು

Leave a Reply

Back To Top