ಕಾವ್ಯ ಸಂಗಾತಿ
ಇಷ್ಟು ಕಾಡುವವರಾರಿಲ್ಲ
ಒಲವು
ನಾನು ನಿನ್ನನ್ನಷ್ಟೇ
ಪ್ರೀತಿಸುತ್ತೇನೆ ಗೆಳೆಯ
ಹರಿವ ನದಿಗಳು
ಸುತ್ತ ಬೆಟ್ಟದ ಸಾಲು
ಹೊಂದಿಕೊಂಡ ವನಸಿರಿ
ಸ್ವಚ್ಛಂದದ ಹಕ್ಕಿಗಳು
ಮರವ ಮುತ್ತಿಕ್ಕುವ ಹೂಗಳು
ಕಾಮನಬಿಲ್ಲ ನಾಚಿಸುವ
ಬಣ್ಣದ ಚಿಟ್ಟೆಗಳು
ಯಾವುವು ನಿನ್ನಷ್ಟು
ಕಾಡುವುದಿಲ್ಲ ಗೆಳೆಯ
ಹೊಳೆವ ನಕ್ಷತ್ರಗಳ
ನಾಚಿಸಬಲ್ಲ ಕಂಗಳು
ಹೂಗಳ ನಾಚಿಸಬಲ್ಲ ಹೂನಗೆ
ಮೈ ತಂಪಾಗಿಸುವ ಉಸಿರು
ಮನವ ಮುದ್ದಿಸುವ
ನಿನ್ನ ಒಲವಿನಷ್ಟು
ಮತ್ತಾವುದು ನನ್ನನ್ನು
ಕಾಡುವುದಿಲ್ಲ ಗೆಳೆಯ