ಕಾವ್ಯ ಸಂಗಾತಿ
ಮನುಷ್ಯ ಪ್ರೀತಿಯ ಮುಂದೆ
ಅಮುಭಾವಜೀವಿ ಮುಸ್ಟೂರು
ಮನುಷ್ಯ ಪ್ರೀತಿಯ ಮುಂದೆ
ಎಲ್ಲ ನೀತಿಗಳು ನಿಸ್ಸಾರ
ಮಾನವೀಯತೆಯ ಮುಖವೊಂದೇ
ಈ ಬದುಕು ನೀಡಿದ ಸಂಸ್ಕಾರ
ವಿಶ್ವಮಾನವತೆಯ ಸಾರ ತಿಳಿಯದೆ
ಅಲ್ಪ ಮಾನವರಾಗಿ ಕಚ್ಚಾಡುವುದೇಕೆ
ಜಾತಿ ಧರ್ಮಗಳ ಸಂಕೋಲೆ ಕಳಚಿ
ಸಾಮರಸ್ಯದಿ ಬೆರೆತು ಬಾಳಲಾರರೇಕೆ
ದೇಹದಿ ಹರಿವ ರಕ್ತಕಿಲ್ಲ ಭೇದ
ತಿನ್ನುವ ಅನ್ನದೊಳೇಕೆ ಪ್ರಮಾದ
ಅವರವರ ಆಹಾರ ಅವರ ಇಚ್ಛೆ
ಬೇಡವೆನ್ನುವುದು ಮೂಢತನವಲ್ಲವೇ
ನೆರೆಹೊರೆಯ ಸಾಮರಸ್ಯ ಕದಡಿ
ನರ ರಾಕ್ಷಸರಂತೆ ಹೋರಾಡಿ
ಜಗದ ಸ್ವಾಸ್ಥ್ಯಕ್ಕೆ ಕುಂದು ತಂದು
ಸಾಧಿಸಿದ್ದೇನೆ ಅವರ ಹೆಚ್ಚುಗಾರಿಕೆ
ಯಾವ ಧರ್ಮವು ಬಂದು ಬಡತನವ ನೀಗದು
ದುಡಿಮೆಯೊಂದೆ ಹಸಿವ ನೀಗುವುದು
ಕಾಯಕದೊಳಗು ಕಲಬೆರಕೆ ಮಾಡುವ
ಕ್ರೂರ ಮನಸ್ಸುಗಳಿಗಿರಲೊಂದು ದಿಕ್ಕಾರ