ಕಾವ್ಯ ಸಂಗಾತಿ
ಹೀಗೇ ಅಲ್ಲವೇ?

ಹೂ ಅರಳುವ
ವೇಳೆಗೆ
ಮರ ಒಣಗಿ ನಿಂತರೆ ಹೇಗೆ?
ಆಸೆ ಹುಟ್ಟುವ
ಸಮಯಕ್ಕೆ
ಕತ್ತಲು ಮುತ್ತಿಕ್ಕಿದರೆ ಹೇಗೆ?
ಕವಿತೆ ಅರಳುವ
ವೇಳೆಗೆ
ಲೇಖನಿ ಜೀವ ತೆತ್ತರೆ ಹೇಗೆ?
ಬದುಕು ಕೈಹಿಡಿಯುವ
ಸಮಯಕ್ಕೆ
ಭೂಮಿ ಕಂಪಿಸಿದರೆ ಹೇಗೆ?
ಹೀಗೇ ಅಲ್ಲವೇ?
ಸಮಯದ ಜೊತೆ ನಾವು ನಡೆಯುವುದಿಲ್ಲ
ಇನ್ನು ನಮ್ಮ ಜೊತೆ ಸಮಯ ನಡೆಯುವುದೇ?
———————————————
ಲಕ್ಷ್ಮಿ ಕೆ.ಬಿ
