ಕವಿತೆಯ ‘ದಿನ’
ಅಬ್ಳಿ ಹೆಗಡೆ.
ಹುಟ್ಟಿದ್ದಕ್ಕೊಂದು-
ಸತ್ತಿದ್ದಕ್ಕೊಂದು-
ಪ್ರೀತಿಗೊಂದು-
ನೀತಿಗೊಂದು-
ಅಂತೇ….
ಕವಿತೆಗೂ…
ಒಂದು ‘ದಿನ’.
ಬರೆಯುವ ವ್ಯಸನ-
ಕ್ಕೆ ಬಿದ್ದು ಕತ್ತಲಲಿ
ಹೊಳೆಯದೇ,
ಶುಷ್ಕಪದಗಳ-
ಮೂಟೆ ಹೊತ್ತು,
ಬಯಲ ಬೆಳಕಿಗೆ
ಬಂದರೆ…….
ಅಲ್ಲೂ ಮಬ್ಬು,
ಸಾವಿನ ನೆರಳು,
ನರಳು..ಗಧ್ಗದಿತ
ಕೊರಳು ಎಲ್ಲೆಲ್ಲೂ.
ರಾಶಿ,ರಾಶಿ-
ಕವಿತೆಯ ಹೆಣ,
ಕಣ್ಣೆದುರು,ಈ…
ದಿನ ನಿಜಕ್ಕೂ..
ಕವಿತೆಯ ‘ದಿನ’
ಎಲ್ಲೆಲ್ಲೂ
ಬರೀ ‘ಕೊರೋನ’.
**********************