ಭಾವನೆಗಳ ಸಂಘರ್ಷ..
ಚಂದನ ಪ್ರಿಯಾ ಎಂ ಎಸ್
ಮನಸ್ಸೆಂಬ ಆಗಸದಲ್ಲಿ ನೂರಾರು ಹಕ್ಕಿಯಂತೆ ನೆನಪುಗಳ ಹಾರಾಟ
ಯೋಚನೆ ಎಂಬ ಬಲೆಗೆ ಸಿಲುಕಿ ಮನದಲ್ಲಿ ಹೇಳಲಾಗದ ತೊಳಲಾಟ..
ಬಿರುಗಾಳಿಯಂತೆ ಎದ್ದಿರುವ ತುಮುಲದೊಡನೆ ನನ್ನ ಈ ಸಂಘರ್ಷ
ಸಮಸ್ಯೆಗಳ ಸರಮಾಲೆಯ ಮೆಟ್ಟಿ ನಿಲ್ಲುವುದೇ ಬಾಳ ಪಯಣದ ಉತ್ಕರ್ಷ..
ಚಿಂತೆಯಿಂದ ಕೂಡಿ ಸಂತೆಯಂತೆ ಆಗಿರುವ ನನ್ನ ಚಂಚಲ ಚಿತ್ತ
ಸಾಂತ್ವನದ ನುಡಿಗಳಿಗೆ ಹಾತೊರೆಯುತ್ತಿದೆ ನನ್ನ ಮನೋ ವೃತ್ತ..
ಏಕಾಂಗಿಯಾಗಿ ಬೇಯುತ್ತಿರುವ ಮನದಲ್ಲಿ ಮುಗಿಲು ಮುಟ್ಟಿರುವ ಯಾತನೆ
ಹಳೆಯ ಘಟನೆಗಳು ಮರುಕಳಿಸದಿರಲಿ ಎಂಬುದೇ ನನ್ನ ಪ್ರಾರ್ಥನೆ..
ದುಗುಡ – ದುಮ್ಮಾನದ ನಡುವೆ ಪ್ರತಿ ಸಲ ನಾನಾಗುವೆ ಭಾವುಕ
ನೆಮ್ಮದಿಯ ದಡ ಸೇರಿಸುವ ನಂಬಿಕೆ ಆ ದೇವರೆಂಬ ನಾವಿಕ..!!
*******************************
ಸೊಗಸಾದ ಕವಿತೆ
ಧನ್ಯವಾದಗಳು ಅನಸೂಯಾ ರವರೇ..