ಗಝಲ್
ಸಿದ್ಧರಾಮ ಹೊನ್ಕಲ್
ತರಹಿ ಗಜಲ್-೧೨೫
ಮಿಸ್ರಾ:-ಅವಳಿಂದ ಬೇರಾದ ಮೇಲೆ ಅವಳಂತೆ ಯಾರೂ ದೊರೆಯಲೇ ಇಲ್ಲ
ಮೂಲ:-ಬಶೀರ್ ಬದ್ರ್
ಕನ್ನಡಕ್ಕೆ:-ಡಾ.ಸಿದ್ಧರಾಮ ಹಿರೇಮಠ ಕೂಡ್ಲಿಗಿ
ಮನ ಸಾಗರದಲ್ಲಿ ಮತ್ತೆ ಹುಡುಕಿದೆ ಇವಳಂತೆ ಯಾರೂ ದೊರೆಯಲೇ ಇಲ್ಲ
ಅವಳಿಂದ ಬೇರಾದ ಮೇಲೆ ಅವಳಂತೆ ಯಾರೂ ದೊರೆಯಲೇ ಇಲ್ಲ
ಆಡಿದ ಪಿಸು ಮಾತು ಮಧುರ ನೆನಪಾಗಿ ಕಾಡುವವು ಬೇರೆ ಬೇಕೆನಿಸುವದಿಲ್ಲ
ನಾನಿಲ್ಲಿ ಅವಳಲ್ಲಿ ಏಕಾಂಗಿಭಾವ ಕಾಡುವುದಂತೆ ಯಾರು ದೊರೆಯಲೇ ಇಲ್ಲ
ಈ ಪ್ರೀತಿಯಲಿ ಕಣ್ಣು ಮತ್ತು ಕರುಳುಗಳು ಅರಿತಷ್ಟು ಮತ್ತೆ ಯಾರು ಅರಿಯುವದಿಲ್ಲ
ಕೆಲವರು ಬಂದು ಅವಳಿಗೂ ಇಷ್ಟವಾಗದೇ ಹೋದರಂತೆ ಯಾರೂ ದೊರೆಯಲೇ ಇಲ್ಲ
ನಮ್ಮೀರ್ವರ ಆಯ್ಕೆಗಳು ಒಂದೇ ನೋವು ಒಂದೇ ಎಂದು ಸದಾ ಹಚ್ಚಿಕೊಂಡಿದ್ದಳು
ಬಿಟ್ಟಿರಲಾರೆ ಬದುಕುಪೂರ್ತಿ ಎಂದು ಮತ್ತೆ ಮರೆತಳಂತೆ ಯಾರೂ ದೊರೆಯಲೇ ಇಲ್ಲ
ಪ್ರೀತಿ ಪ್ರೇಮದಿ ಬೆರೆತು ಸವಿಮಾತು ಖುಷಿ ಕ್ಷಣ ಹಂಚಿಕೊಂಡೆವು ಆ ಸುವರ್ಣಕಾಲ
ಹೋಗುವ ಮುನ್ನ ಬಿಟ್ಟ ನೆನಪುಗಳು ಸದಾ ಜೊತೆಗಿಟ್ಟಂತೆ ಯಾರು ದೊರೆಯಲೇ ಇಲ್ಲ
ಅವಳಿಗೆ ಬೇಕೆನಿಸಿದರೆ ಸಿಗಲಿ ನನಗೆ ಹಿಡಿಸುವಂತಹ ಯಾರು ಮತ್ತೆ ಸಿಗುವದೇ ಬೇಡ
ಹೊನ್ನಸಿರಿ’ಕನಸಲಿ ಸಹ ಬಿಟ್ಟು ಕೊಳ್ಳಲಾರನಂತೆ ಯಾರು ದೊರೆಯಲೇ ಇಲ್ಲ
********************************