ಕವಿತೆ
ಕತ್ತಲಿನಲಿ ನ್ಯಾಯ
ಸಾಯಬಣ್ಣ ಮಾದರ
ಎಳೆಯ ಬಾರದೆಕ್ಕೆ
ಅವರ ಕರಳು ಬಳ್ಳಿಗಳನ್ನು
ಕ್ರೀಯಗೆ ಪ್ರತಿಕ್ರೀಯೇ ?
ಆಗುವದ್ಯಾವಾಗಿನ್ನು
ಎಷ್ಟು ದಿನವಂತೆ
ಕೂಗುವಿರಿ ದಿಕ್ಕಾರ
ಮೇಲಿನವರ ಕುರ್ಚಿಗಳಿಗೆ
ಕಿವಿ ಕುರುಡ
ಮನಿಷಾಗೆ ಸಿಗುವುದೇ
ಕತ್ತಲಿನಲ್ಲಿರುವ
ನ್ಯಾಯ ಬೆಳಕು !!
ಜೋಳದ ಹೊಲದ ದಂಟುಗಳೆ
ಕಣ್ಣೀರುಗೈದವು
ಯೋನಿಯಿಂದರಿದ ರಕ್ತ
ಮಡುಗಟ್ಟಿತ್ತಲ
ಕೂಗಲು ಬಾರದಂತೆ
ನಾಲಿಗೆ ಸೀಳಿ
ಅಟ್ಟಹಾಸ ಗೈದರಲ್ಲ
ಸಬಲರು
ಆಗಬೇಕಲ್ಲವೇ ಅವರಿಗೂ
ಆ ನೋವು
ಜಾತಿ ಬಲವಿದ್ದರೆ
ಮಾಡುವರು ಎನ್ಕೌಂಟರ್
ಸುಡುವರು ದಮನಿತರನ್ನು
ನಡುರಾತ್ರೀ ಹಗಲು !!
ನಾಟ್ಯದವರು ಬಸಿರಾದರು
ದೇಶದ ದೊರೆ
ಕುಣಿದಾಡುವನು ಹಿರಿ ಹಿರಿ ಹಿಗ್ಗಿ
ಬೆನ್ನು ಮೂಳೆ ಮುರಿದು
ಯೋನಿ ಹರಿದರು
ಇವರಿಗೆ
ಕನಿಕರಿಸದವನು !!
ಭಯ
ಭರವಸೆ ಕಳೆದುಕೊಂಡರೆ
ಹಾವೇ ಹಗ್ಗ
ಭಯ ಬುಗ್ಗೆಯ
ಚಿಲುಮೆ ಹುಟ್ಟಿಸಿ
ನ್ಯಾಯ ದೀಪಕ್ಕೆ
ಬತ್ತಿ ಹತ್ತಿಸಿ
ಕಣ್ಣಿಗೆ ಕಣ್ಣು ಕಳೆಯಲು
ಸಿದ್ದರಾಗ ಬೇಕಲ್ಲವೆ
ನಾವು !!
*********************************
Very nice
Shanthala madhu
Super sir very nice…
Super poem.