ಗಾಂಧಿ ವಿಶೇಷ

ಕನ್ನಡ ಶಾಯರಿಗಳು

01

ಅಜ್ಜ… ರೇ
ಛಲೋ ಇತ್ತು ನೋಡ್ರೀ
ನಿಮ್ಮ ಕಾಲ್ದಗಾ
ಸತ್ಯ, ನ್ಯಾಯ, ನೀತಿ, ಧರ್ಮ
ಕಾಲು ಮುಕ್ಕಡೋ ಇದ್ದವ್ರೀ
ಈಗಲೂ ಇದ್ದಾವ್… ರೀ
ಕಿಮ್ಮತ್ ಇಲ್ರೀ
ಅವೇ..!
ಹಿಕ್ಮತ್ ಮಾಡ್ಯಾರ್ರೀ !!

02

ಬಾಪು
ಸ್ವಾತಂತ್ರ್ಯ ಪೂರ್ವದಾಗ
ನಿಮ್ಮಾತು ತಣ್ಣಗಿತ್ತು
ಬೆಚ್ಚಗಾತು ರಕ್ತ
ಹರಿಲಿಲ್ಲ ಮತ್ತೆ..?
ಅದೇ ಮಹಾತ್ಮನ
ತಾಕತ್ತು ಅಲ್ವೇನ್ರೀ…?

03

ಮಹಾತ್ಮ ಅಂಥ
ಜಗತ್ತಿನಾಗ್
ಕ್ಯಾಮೆರಾದೊಳಗ
ಕೂಡಲಿಲ್ಲ ನೋಡ್ರೀ..!
ನಮ್ಮ ಎದಿಯಾಗ
ನಿಮ್ಮ ಇಟಗೊಂಡಿವ್ರೀ
ಹಂಗಾ ಬದುಕ್ದ್ರೀ ನೀವು…!!

04

ಬ್ರಿಟಿಷರಿಗೆ
ದಂಡಿಗೆ ಹೋದ್ರು
ಚಳುವಳಿಗೆ ಹೋದ್ರು
ನಿಮ್ಮ ನಡಿಗೆ
ಹಾವು ಹರದ್ಹಂಗ
ಸಾಯ್ ಹೊಡದ್ಹಂಗ
ರೀ…!

05

ಖರೇ ಹೇಳಾವ್ರೇ
ನೀವು ಒಬ್ಬರೇ
ನೋಡ್ರಲ್ಲಾ..!
ರಾಮ್ ರಹೀಮ್
ಮನ್ ಮೇ ಹೈ
ಸಬ್ಕಾ ಭಗವಾನ್ ಏಕ್
ಹೈ ಅಂದೋರೂ..!!

***************************

ಹುಳಿಯಾರ್ ಷಬ್ಬೀರ್

Leave a Reply

Back To Top