ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸಂಬಂಧಗಳನೆಲ್ಲ ಅಳೆದು
ತೂಗುವದಿಲ್ಲ, ಎಲ್ಲರೂ
ನನ್ನವರೇ ಎನ್ನುವೆವಲ್ಲ, ನಾವೇಕೆ ಹೀಗೆ.?!

ವೈಯಕ್ತಿಕ ಆಸೆ, ಕನಸುಗಳನೆಲ್ಲ
ಹತ್ತಿಕ್ಕಿ ಬದುಕ ನಡೆಸಿದೆವಲ್ಲ
ತಮಗಾಗಿ ಬದುಕಲಿಲ್ಲ, ನಾವೇಕೆ ಹೀಗೆ.!?

ತವರುಮನೆಯ ತೊರೆಯಬೇಕು
ಗಂಡನಮನೆಯಲಿ ಬೆರೆಯಬೇಕು
ಇಲ್ಲಿಯೂ ನಮಗಾಗಿ ಅಲ್ಲ, ನಾವೇಕೆ ಹೀಗೆ.!?

ಸಣ್ಣ ಸಣ್ಣ ಕ್ಷಣಗಳ ಆನಂದಿಸುವಳು
ಅಡುಗೆ ಮನೆಯೇ ತನ್ನದೆನ್ನುವಳು
ನಮಗೆಲ್ಲಾ‌ ಅದ್ಯಾಕ ಎನ್ನುವಳು ಅವಳೇಕೆ ಹೀಗೆ.?!

ಮಾತಿಗೆ ಮೊದಲೇ ಸಹನಾಮೂರ್ತಿಯಾಗಿಹಳು
ಸಿಟ್ಟು ಕೋಪವ ಒಳಗೊಳಗೆ ನುಂಗುವಳು
ತನ್ನ ರಕ್ತವ ಸುಟ್ಟುಕೊಳ್ಳುವಳು ಇವಳೇಕೆ ಹೋಗೆ.?!

ಗಂಡ ಗದರಿದರೂ ಮರಳಿ ಗದರಿಸದವಳು
ಮಕ್ಕಳು ಹೆದರಿಸಿದರೂ ಹೆದರುವಳು
ಮನಕೆ ಘಾಸಿಯಾದರೂ ಸಹಿಸುವಳು ಇವಳೇಕೆ ಹೀಗೆ.!?

ಇಂದು ಮಹಿಳಾ ದಿನಾಚರಣೆಯಂತೆ
ಒಂದಿನಕೆ ಆಚರಣೆಗಾದರೆ
ನಿತ್ಯಕೆ ಅದಾವ/ರ ಆಚರಣೆ.!?


About The Author

1 thought on “ಮಹಿಳಾದಿನದ ವಿಶೇಷ,ಕಲ್ಪನಾ ಎಸ್ ಪಾಟೀಲ”

Leave a Reply

You cannot copy content of this page

Scroll to Top