ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬಣ್ಣಗಳ ಸಮ್ಮಿಲನ
ಹೋಳಿ ಹಬ್ಬದ ದಿನ
ಮಿಂದೇಳುತ ಮೈ ಮನ
ನೆನೆಯುತ ರಾಧೆ ಶಾಮನ
ರಂಗಿನೋಕುಳಿ ಕಾಮ ದಹನ
ತ್ಯಜಿಸು ಅರಿಷಡ್ವರ್ಗಗಳನ್ನ.

ಬಣ್ಣದ ಹಬ್ಬವಿದು
ಸಂಭ್ರಮದ ಹೋಳಿಯಿದು
ರಂಗನು ಚೆಲ್ಲುತ ನಿಂದು
ಸಂತಸದಿ ನಲಿಯೋಣ ಮಿಂದು
ಒಂದಾಗಿಸಿ ಮನಗಳ ಇಂದು
ಎಲ್ಲೆಲ್ಲೂ ಉಲ್ಲಾಸವೆ ತುಂಬಿಹುದು.

ಕೋಟೆಯ ಬಣ್ಣವ ನೋಡಿದೆಯಾ
ರಂಗಿನೋಕುಳಿಯ ಆಡಿದೆಯಾ
ಶಾಮನಿರಲು ರಾಧೆ ಬಾರೆಯಾ
ನೀನಿರಲು ಸರಿಯದು ಸಮಯ
ಎನ್ನುತ ಸ್ನೇಹಿತರ ಬಳಿ ಸಾರೆಯಾ
ಏಳು ಬಣ್ಣಗಳ ಮನಸಾರೆ ಬೆರೆಸೆಯಾ.

ಒಲವಿನ ಬಣ್ಣ ಚೆಲುವಿನ ಬಣ್ಣ
ನವಿರಾದ ಭಾವ ಮೈಮನದೊಳಗಿಣ್ಣ.


About The Author

Leave a Reply

You cannot copy content of this page

Scroll to Top