ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ಸಾವಿಲ್ಲದ ಶರಣರು

ಸಾವಿಲ್ಲದ ಶರಣರು ಮಾಲಿಕೆ, “ಶಿವಯೋಗ ಪರಂಪರೆಯ ಸಮಾಜ ಮುಖಿ ಶ್ರೀಬಂಥನಾಳ ಸಂಗನಬಸವ ಸ್ವಾಮಿಗಳು”ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ

ಶರಣ ಸಂಗಾತಿ ಸಾವಿಲ್ಲದ ಶರಣರು ಮಾಲಿಕೆ, “ಶಿವಯೋಗ ಪರಂಪರೆಯ ಸಮಾಜ ಮುಖಿ ಶ್ರೀಬಂಥನಾಳ ಸಂಗನಬಸವ ಸ್ವಾಮಿಗಳು ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ ಹನ್ನೆರಡನೆಯ ಶತಮಾನದ  ಶರಣರು  ಜಗತ್ತಿಗೆ ಸತ್ಯ ಸಮತೆ ಶಾಂತಿ ಪ್ರೀತಿ ನೀಡಿ ಸಾರ್ವಕಾಲಿಕ ಸಮಾನತೆ ಸಾರಿಧ ದಾರ್ಶನಿಕರು.  ಬಸವಯುಗ ವಚನಸಾಹಿತ್ಯದ ಸುಗ್ಗಿಕಾಲ. 12ನೆಯ ಶತಮಾನದ ಮಧ್ಯಭಾಗದಲ್ಲಿ ಮೈಮುರಿದು ಎದ್ದ ಲಿಂಗಾಯತ ಆಂದೋಲನ ಕನ್ನಡ ಸಮಾಜಕ್ಕೆ ಹೊಸ ತಿರುವು ಕೊಟ್ಟಿತು. ಆಚಾರ-ವಿಚಾರ, ಭಾಷೆ-ಸಾಹಿತ್ಯ ಮುಂತಾದ ಹಲವು ಕ್ಷೇತ್ರಗಳಲ್ಲಿ ಹೊಸತನ್ನು ತುಂಬಿತು. ಬಸವಣ್ಣ, ಚನ್ನಬಸವಣ್ಣ, ಪ್ರಭುದೇವ, ಅಕ್ಕಮಹಾದೇವಿ, ಸಿದ್ಧರಾಮ, ಮಡಿವಾಳ ಮಾಚಿದೇವ ಇವರು ಸ್ಥಾಪಿಸಿದ ಜನಮುಖಿ ಸಾಮಾಜಿಕ ಸೇವೆಯ ಪರಂಪರೆಯನ್ನು ಮುಂದಿನ ಶರಣ ಧರ್ಮದ ಸ್ವಾಮಿಗಳು   ನಿರಂತವಾಗಿ ನಡೆಸಿಕೊಂಡು ಬಂದಿದ್ದಾರೆ. ಅಂತಹವರ ಸಾಲಿನಲ್ಲಿ ಪರಮ ಪೂಜ್ಯ ತೋಂಟದ ಎಡೆಯೂರಿ ಶ್ರೀ ಸಿದ್ಧಲಿಂಗ ಶಿವಯೋಗಿಗಳು, ಜೇವರಗಿ ಷಣ್ಮುಖ ಶಿವಯೋಗಿಗಳು ಅಥಣಿಯ ಶ್ರೀ ಮುರುಗೇಂದ್ರ ಶ್ರೀಗಳು, ಮುರುಗೋಡ ಶ್ರೀ ಮಹಾಂತಪ್ಪಜ್ಜನವರು,  ಗಚ್ಚಿನ ಮಠದ ಶ್ರೀ ಸಿದ್ಧಲಿಂಗಪ್ಪನವರು ಜಯದೇವ ಜಗದ್ಗುರುಗಳು , ಇಂತವರ ಸಾಲಿನಲ್ಲಿ ನಿಲ್ಲುವವರು ನಮ್ಮ ಬಂಥನಾಳ ಶ್ರೀ ಸಂಗನಬಸವ ಸ್ವಾಮಿಗಳು.  ಬಾರದ ನೆಲದಲ್ಲಿ ಬದುಕಿನ ಭರವಸೆಯನ್ನು ನೀಡಿದ ಅಪ್ರತಿಮ ಶಿವಯೋಗ ಸಾಧಕರು.   ಜನನಮತ್ತುಬಾಲ್ಯ————————————ಬಂಥನಾಳ ಸಂಗನಬಸವ ಶಿವಯೋಗಿಗಳ ಜನನವು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಮಸೂತಿ ಗ್ರಾಮದಲ್ಲಿ ಶರಣ ದಂಪತಿಗಳಾದ ಗೌರಾಂಬೆ ಮತ್ತು ಪರುತಯ್ಯ ನವರ ಪುತ್ರರಾಗಿ 1900 ರ ಜುಲೈ 27ರಂದು ಜನಿಸಿದರು. ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಉಕ್ಕಲಿ ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ಇವರು ಬಾಲ್ಯದಲ್ಲೆ ಪುರಾಣ ಪ್ರವಚಣ ಪೌರಾಣಿಕ ನಾಟಕಗಳಲ್ಲಿ ಆಸಕ್ತಿ ಹೊಂದಿದ್ದರು. ‘ಬೆಳೆಯುವ ಸಿರಿ ಮೊಳಕೆಯಲ್ಲಿ’ ಎಂಬಂತೆ ಬಾಲ್ಯದಲ್ಲಿಯೇ ಅಪೂರ್ವ ತೇಜಸ್ಸು, ಹಸನ್ಮುಖತೆಗೂಡಿಸಿಕೊಂಡು ಬೆಳೆದರು.ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಉಕ್ಕಲಿಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದರು. 6ನೇ ತರಗತಿಯಲ್ಲಿ‘ರಾಜಾ ಸತ್ಯಹರಿಶ್ಚಂದ್ರ’ ಎಂಬ ಪೌರಾಣಿಕ ನಾಟಕದಲ್ಲಿ ತಾರಾಮತಿ ಪಾತ್ರಧಾರಿಯಾಗಿ ಅಭಿನಯಿಸಿ ಸುತ್ತಲ ಗ್ರಾಮಸ್ಥರ ಮೆಚ್ಚುಗೆ ಪಡೆದರು. 1913ರಲ್ಲಿ ಯರನಾಳ ಮಠದ ಪಂಪಾಪತಿ ಸ್ವಾಮೀಜಿ ಅವರು 11 ವರ್ಷದ ಸಂಗನಬಸವ ಶಿವಯೋಗಿಗಳನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ಸ್ವಿಕರಿಸಿದರು. ಮುಂದೆ ವಿಜಯಪುರ ಜಿಲ್ಲೆಯ ಬಬಲೇಶ್ವರ ಮಠದ ಶಾಂತವೀರ ಶ್ರೀಗಳ ಸಮ್ಮುಖದಲ್ಲಿ ಸಂಸ್ಕೃತ ಭಾಷೆ, ಸಾಹಿತ್ಯದ ಮೇಲೆ ಅಪಾರ ಪಾಂಡಿತ್ಯ ಸಂಪಾದಿಸಿದರು. ಕೆಲವು ದಿನಗಳು ಗತಿಸಿದ ನಂತರ ಬಂಥನಾಳ ಮಠದ ಹಿಂದಿನ ಪೀಠಾಧಿಪತಿ ಚನ್ನಬಸವ ಶ್ರೀಗಳ ಅಪ್ಪಣೆಯಂತೆ ಸಂಗನಬಸವ ಶ್ರೀಗಳು 1916ರಲ್ಲಿ ಬಂಥನಾಳ ಮಠದ 4ನೇ ಪೀಠಾಧಿಪತಿಗಳನ್ನಾಗಿ ನಿಯೋಜಿಸುವಲ್ಲಿ ಲಚ್ಯಾಣ ಸಿದ್ದಲಿಂಗ ಮಹಾರಾಜರು ಶ್ರಮಿಸಿದರು. ನಂತರ ಕೆಲವು ದಿನ ಭೀಮಾ ತೀರದ ಭೀಮೇಶ್ವರ ಬೆಟ್ಟದಲ್ಲಿ ಶಿವಧ್ಯಾನ, ಶಿವಚಿಂತನೆ, 30 ದಿನ ಮೌನಾಚರಣೆ ವ್ರತ ಕೈಗೊಂಡರು. ಪೀಠಾಧಿಪತಿಯಾಗಿಆಯ್ಕೆ—————————————ವೃಷವಲಿಂಗ ಸ್ವಾಮಿಗಳಿಂದ ಸ್ಥಾಪಿತವಾದ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಬಂಥನಾಳ ಗ್ರಾಮದ ಶ್ರೀಮಠವು ಧಾರ್ಮಿಕ ಮತ್ತು ರಾಷ್ಟ್ರಧರ್ಮದ ಕಾರ್ಯಗಳಿಂದ ಇತಿಹಾಸ ಪುಟದಲ್ಲಿ ಅಚ್ಚಳಿಯದೆ ಉಳಿದಿದೆ. ಶ್ರೀಮಠ ಪೀಠಾಧಿಪತಿಗಳಾದ ಶ್ರೀ ಸಂಗನಬಸವ ಸ್ವಾಮೀಜಿ ಈ ಭಾಗದ ಶೈಕ್ಷಣಿಕ ಕ್ರಾಂತಿಗೆ ಮುನ್ನುಡಿ ಬರೆದರು. ವಿಜಯಪುರ ಜಿಲ್ಲೆಯ ವಿಜಯಪುರ ತಾಲ್ಲೂಕಿನ ಬಬಲೇಶ್ವರದ ಶ್ರೀ ಶಾಂತವೀರ ಸ್ವಾಮಿಗಳಿಂದ ಸಂಸೃತ ಕಲಿತು 1916ರಲ್ಲಿ ಬಂಥನಾಳ ಮಠಕ್ಕೆ ನಾಲ್ಕನೇ ಪೀಠಾಧಿಪತಿಯಾಗಿ ನಿಯೊಜನೆಗೊಂಡರು. ಶಿಕ್ಷಣಸೇವೆ————————-ಶೈಕ್ಷಣಿಕವಾಗಿ ಹಿಂದೆ ಉಳಿದಿದ್ದ ವಿಜಯಪುರದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದರು ಅವುಗಳು ಇಂದು ಶತಮಾನ ಸಂಭ್ರಮದಲ್ಲಿದ್ದು ಶ್ರೀಗಳ ಕೀರ್ತಿ ಕಿರೀಟಗಳು. ವಿಜಯಪುರ ಜಿಲ್ಲೆಯಲ್ಲಿ ಇಂದು‌ ಹಲವಾರು ಶಿಕ್ಷಣ ಸಂಸ್ಥೆಗಳು ಶಾಲಾ ಕಾಲೇಜು ತಲೆ ಎತ್ತಲು ಕಾರಣವಾದವು.   ಅವರು ಅಂದು ಕೊಟ್ಟ ಸ್ಪೂರ್ತಿಯ ಕರೆ. ಶೈಕ್ಷಣಿಕ ಕ್ರಾಂತಿ ಮಾಡಿ ಮಠಗಳ ‌ಮೂಲಕ ರಾಷ್ಟ್ರಾಭಿಮಾನ ಹೆಚ್ಚಿಸಿದ, ಸ್ವಾತಂತ್ರ್ಯ ಹೋರಾಟಗಾರರ ಬೆಂಬಲಕ್ಕೆ ನಿಂತು ಅವರಿಗೆ ಆಶ್ರಯ ನೀಡಿ ಹೋರಾಟಕ್ಕೆ ಅಣಿಯಾದ ಧೀರ ಸನ್ಯಾಸಿ ಈ ನಮ್ಮ ಬಂಥನಾಳ ಸಂಗನವಸವ ಶಿವಯೋಗಿಗಳು. 1923ರಲ್ಲಿ ಕರ್ನಾಟಕದ ಗಾಂದಿ ಹರ್ಡೆಕರ್ ಮಂಜಪ್ಪನವರಿಂದ ರಾಷ್ಟ್ರದೀಕ್ಷೆ ಪಡೆದರು. ಹರ್ಡೆಕರ್ ಮಂಜಪ್ಪನವರು ಒಂದು ರಾಷ್ಟ್ರ ಬೆಳೆಯಬೇಕಾದರೆ ಉತ್ತಮ ಸಮಾಜ ನಿರ್ಮಾಣವಾಗಬೇಕಾದರೆ ಉತ್ತಮ ಶಿಕ್ಷಣ ಅವಶ್ಯ ಎಂದು ಹೇಳಿದರು. ಅಂದಿನಿಂದ ಖಾದಿ ಧರಿಸಿ ಮಠದ ಕಾರ್ಯಕ್ರಮಕ್ಕೂ ಮುನ್ನ ರಾಷ್ಟ್ರದ್ವಜಾರೋಹಣ ಮಾಡಲು ಪ್ರಾರಂಬಿಸಿದರು.ಸಮಾಜಸೇವೆ1925ರಲ್ಲಿ ವಚನ ಪಿತಾಮಹ ಫ.ಗು.ಹಳಕಟ್ಟಿಯವರು ಕಟ್ಟಿದ ಬಿ.ಎಲ್.ಡಿ.ಇ ಸಂಸ್ಥೆಯ ಅಧ್ಯಕ್ಷರಾಗಿ  ಶೈಕ್ಷಣಿಕ‌ ಕೇಂದ್ರ ಮತ್ತು ದಾಸೋಹ ನಿಲಯ ಸ್ಥಾಪಿಸಿದರು. 1950 ರಲ್ಲಿ ಲಚ್ಯಾಣ  ಗ್ರಾಮದಲ್ಲಿ ಸರ್ವಧರ್ಮ ಸಮ್ಮೇಳನ, ಸೊನ್ನದಲ್ಲಿ 1953 ಮತ್ತು  1963ರಲ್ಲಿ ಮಂಟಪ‌ ಪೂಜೆ ಮಾಡಿದ್ದಾರೆ. ವಿಜಯಪುರ ನಗರದಲ್ಲಿ 1954ರಲ್ಲಿ 770 ಅಮರಗಣಾಧೀಶ್ವರರ ಪೂಜೆ ನೇರವೇರಿಸಿದರು ಈ ಮಹಾತ್ಕಾರ್ಯದ ಸ್ಮರಣಾರ್ಥ ಬ್ರಹತ್   ಲಿಂಗದಾಕಾರದ ಮಂದಿರಲ್ಲಿ 770 ಲಿಂಗಗಳನ್ನು ಸ್ಥಾಪಿಸಿ ಕೀರ್ತಿ ಗಳಿಸಿದ್ದಾರೆ. ಈ ಲಿಂಗದ ಗುಡಿ ಇಂದು ಲಕ್ಷಾಂತರ ಭಕ್ತರ ಶೃದ್ಧಾಕೇಂದ್ರವೆನಿಸಿದೆ. ಲಚ್ಯಾಣದಲ್ಲಿ ಅಮರಗಣಾಧೀಶ್ವರ ಪೂಜೆ ಲಕ್ಷದೀಪೋತ್ಸವದಂತ ದೊಡ್ಡ ಮಟ್ಟದ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಜನರನ್ನು ಧಾರ್ಮಿಕ ಕೇದ್ರಗಳತ್ತ ಸೆಳೆದಿದ್ದಾರೆ. ತಾವು ಮಾಡಿದ ಪ್ರವಚನಗಳಿಂದ ಬಂದ ಹಣವನ್ನು ಶಿಕ್ಷಣ ಕ್ಷೇತ್ರ ಬೆಳವಣಿಗೆಗಾಗಿ ಬಳಿಸಿದ್ದಾರೆ ಹಲವಾರು ಶಾಲೆಗಳನ್ನು ಕಟ್ಟಿ ಬೆಳೆಸಿದ್ದಾರೆ. ನಿತ್ಯ ನಿರಂತರ ದಾಸೂಹ ಮಾಡಿ ದಾಸೋಹ ಮೂರ್ತಿಯಾಗಿದ್ದಾರೆ. ಸ್ವಾತಂತ್ರ ಹೋರಾಟಗಾರರಿಗೆ ಶ್ರೀ ಮಠದಲ್ಲಿ ಆಶ್ರಯ, ನೆಲೆ ನೀಡಿ ರಕ್ಷಿಸಿದ್ದಾರೆ. ಶ್ರೀಗಳು ದಾಸೋಹ, ಶೈಕ್ಷಣಿಕ, ರಾಷ್ಟ್ರಭಕ್ತಿ, ಧರ್ಮಜಾಗೃತಿ ನಡೆಸಿದ್ದಾರೆ.ಶೈಕ್ಷಣಿಕಕ್ರಾಂತಿಯಹರಿಕಾರ——————————————ವಿದ್ಯಾರ್ಥಿಗಳೇ ದೇವರ, ವಿದ್ಯಾಲಯವೇ ದೇವಾಲಯ ಎಂಬ ಮಂತ್ರ ಪಠಣದೊಂದಿಗೆ ಭಕ್ತರು ಕೊಟ್ಟ ಕಾಣಿಕೆಯಲ್ಲೇ ಬಡ ಮಕ್ಕಳ ಅಕ್ಷರ ದಾಹ ನೀಗಿಸಿದ ಸಂತ ಬಂಥನಾಳದ ಸಂಗನಬಸವ ಮಹಾಶಿವಯೋಗಿಗಳು. ನಾಡಿನೆಲ್ಲೆಡೆ ವಿದ್ಯಾಕೇಂದ್ರಗಳನ್ನು ಸ್ಥಾಪಿಸಿ, ಶೈಕ್ಷಣಿಕ ಕ್ರಾಂತಿ ಮಾಡಿದ ಶ್ರೀಗಳು, ಬಡ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದ್ದಾರೆ. 18ನೇ ಶತಮಾನದಲ್ಲಿ ವೃಷಭಲಿಂಗ ಮಹಾಶಿವಯೋಗಿಗಳಿಂದ ಸ್ಥಾಪಿತವಾದ ಬಂಥನಾಳ ಮಠದ ಕೊಡುಗೆ ಅನನ್ಯ. ಮಠದ ಈ ಹಿಂದಿನ ಪೀಠಾಧಿಪತಿಗಳಾದ ಶಂಕರಲಿಂಗ ಶಿವಯೋಗಿಗಳು, ಚನ್ನಬಸವ ಶಿವಯೋಗಿಗಳು ಕುಗ್ರಾಮವನ್ನು ಸುಕ್ಷೇತ್ರವನ್ನಾಗಿಸಲು ಶ್ರಮಿಸಿದರು. ಬಸವಾದಿ ಪ್ರಮತರ ದಾರಿ ಕ್ರಮಿಸಿದರು. ತದನಂತರ ಬಂದ ಪೀಠಾಧಿಪತಿ ಸಂಗನಬಸವ ಮಹಾಶಿವಯೋಗಿಗಳ ಸಮಾಜ ಮುಖಿ ಕಾರ್ಯಗಳಿಂದ ಮಠದ ಕೀರ್ತಿ ಮುಗಿಲೆತ್ತರಕ್ಕೆರಿದೆ. ಪ್ರವಚನದ ಮೂಲಕ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಲವು ಕಾರ್ಯಕ್ರಮಗಳನ್ನು ಕೈಗೊಂಡರು. ಅವಿರತ ಪ್ರಯತ್ನದಿಂದ ಶೈಕ್ಷಣಿಕವಾಗಿ ಬರಡಾಗಿದ್ದ ವಿಜಯಪುರ ಜಿಲ್ಲೆಯನ್ನು ಶಿಕ್ಷಣದ ತವರೂರನ್ನಾಗಿಸಿದರು. ಪರಿಣಾಮ ವಿಜಯಪುರ ಜಿಲ್ಲೆಯಾದ್ಯಂತ ಅನೇಕ ಶಿಕ್ಷಣ ಸಂಸ್ಥೆಗಳು ತಲೆ ಎತ್ತಿ ನಿಂತವು. ಈ ಸಂಸ್ಥೆಗಳಲ್ಲಿ ಶಿಕ್ಷಣ ಪಡೆದ ಅನೇಕ ಬಡ ವಿದ್ಯಾರ್ಥಿಗಳು ನಾಡಿನ ನಾನಾ ಭಾಗದಲ್ಲಿ ಸರ್ಕಾರಿ ನೌಕರಿ ಪಡೆದು ಸ್ವಾವಲಂಬಿಯಾಗಿ ಬದುಕುತ್ತ, ತಮ್ಮ ಜೀವನವನ್ನು ಪಾವನಗೊಳಿಸಿಕೊಂಡಿದ್ದಾರೆ. ಲಿಂಗೈಕ್ಯ ಬಂಥನಾಳ ಶ್ರೀ ಸಂಗನಬಸವ ಶಿವಯೋಗಿಗಳು 1972 ಮೇ 7ರಂದು ಲಿಂಗೈಕ್ಯರಾದರು. *ಪ್ರಮುಖಘಟನಾವಳಿಗಳು* 1923 ರಲ್ಲಿ ಕರ್ನಾಟಕದ ಗಾಂಧಿ ಹರ್ಡೇಕರ ಮಂಜಪ್ಪ ನೇತೃತ್ವದಲ್ಲಿ ರಾಷ್ಟ್ರೀಯ ದೀಕ್ಷೆ ಸ್ವೀಕಾರ. 1925 ರಲ್ಲಿ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಅವರು ಸ್ಥಾಪಿಸಿದ ವಿಜಯಪುರ ನಗರದ ಬಿ.ಎಲ್.ಡಿ.ಇ. ಸಂಸ್ಥೆಯ ಅಧ್ಯಕ್ಷರಾಗಿ ಸೇವೆ. 1950 ರಲ್ಲಿ ಸರ್ವಧರ್ಮ ಸಮ್ಮೇಳನ ಆಯೋಜನೆ.1953 ರಲ್ಲಿ ಸೊನ್ನದಲ್ಲಿ 63 ಪುರಾತನ ಮಂಟಪ ಪೂಜೆ. 1954 ರಲ್ಲಿ ವಿಜಯಪುರ ನಗರದಲ್ಲಿ 770 ಅಮರಗಣಾಧೀಶ್ವರರ ಪೂಜೆ. 1968 ರಲ್ಲಿ ವೃಷಭಲಿಂಗ ಮಹಾಶಿವಯೋಗಿಗಳನ್ನು ಬಂಥನಾಳ – ಲಚ್ಯಾಣ ಮಠದ ಪೀಠಾಧಿಪತಿಗಳನ್ನಾಗಿ ನೇಮಕ. 1969 ರಲ್ಲಿ ಲಚ್ಯಾಣದಲ್ಲಿ ಲಕ್ಷದ ಮೇಲೆ ತೊಂಬತ್ತಾರು ಸಾವಿರ ಅಮರಗಣದಿಶ್ವರರ ಪೂಜೆ, ಲಕ್ಷದೀಪೋತ್ಸವದಂತಹ ಮಹಾನ್ ಧಾರ್ಮಿಕ ಕಾರ್ಯಕ್ರಮ ಆಯೋಜನೆ. 1972 ರ ಮೇ 7 ರಂದು ಬಂಥನಾಳದಲ್ಲಿ ಲಿಂಗೈಕ್ಯ.  ಬಡತನ ಅಕ್ಷರವಂಚಿತ ಬರಗಾಲ ಪೀಡಿತ ಪ್ರದೇಶವೆಂದು ಕೆಟ್ಟ ಹೆಸರಿಗೆ ಕಾರಣವಾದ ವಿಜಯಪುರಕ್ಕೆ ಹೊಸ ಕಾಯಕಲ್ಪ ಕಲ್ಪಿಸಿಕೊಟ್ಟವರು ಶ್ರೀ ಬಂಥನಾಳ ಸಂಗನ ಬಸವ ಸ್ವಾಮಿಗಳು. ಇಂತಹ  ಪರಮ ಪೂಜ್ಯರ ಮೆಟ್ಟಿದಾನೆಲವೆ ಪಾವನ. ಪೂಜ್ಯರ ಕನಸುಗಳು ನನಸಾಗಿ ವಿಜಯಪುರವು ಸಕಲ  ಐಭೋಗಳ ಐಸಿರಿಯ ರಾಜಧಾನಿಯಾಗಲಿ. ಶ್ರೇಷ್ಠ ಶಿವಯೋಗ ಸಾಧಕರಾದ ಪರಮ ಪೂಜ್ಯ ಶ್ರೀ ಬಂಥನಾಳ ಸಂಗನ ಬಸವ ಸ್ವಾಮಿಗಳಲ್ಲಿ ಭಕ್ತಿ ಪೂರ್ವಕ ಶರಣಾರ್ಥಿಗಳು ಡಾಶಶಿಕಾಂತಪಟ್ಟಣರಾಮದುರ್ಗಪುಣೆ

ಸಾವಿಲ್ಲದ ಶರಣರು ಮಾಲಿಕೆ, “ಶಿವಯೋಗ ಪರಂಪರೆಯ ಸಮಾಜ ಮುಖಿ ಶ್ರೀಬಂಥನಾಳ ಸಂಗನಬಸವ ಸ್ವಾಮಿಗಳು”ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ Read Post »

ಕಾವ್ಯಯಾನ

ರಾ.ಶೇ ಅವರ ನೆನಪುಗಳ ಲಹರಿ “ಆ ದಿನಗಳು”

ನೆನಪುಗಳ ಸಂಗಾತಿ ರಾ.ಶೇ ಅವರ ನೆನಪುಗಳ ಲಹರಿ “ಆ ದಿನಗಳು” ಕಾಲೇಜು ದಿನಗಳ ಸವಿ ನೆನಪುಗಳೇ ಹಾಗೆ.. ನಮ್ಮ ಕಾಲೇಜು ಓದು ಮುಗಿದ ನಂತರವೂ ಕೆಲವು ಘಟನೆಗಳು.. ಮರೆಯಲಾಗುವುದಿಲ್ಲ ಗೆಳೆಯರ ಜೊತೆ ಆ ದಿನಗಳ ಆಟ, ಕೋಪ, ಮುನಿಸು, ಲವ್.. ನಮ್ಮ ಹೀರೋಯಿಜಂ ಇವೆಲ್ಲವೂ ಆಗಾಗ ನೆನಪಾಗುತ್ತಲೆ ಇರುತ್ತದೆ.. ಒಮ್ಮೊಮ್ಮೆ ಮತ್ತೆ ಆ ಲೈಫ್ ಬರಬಾರದೆ ಎನಿಸುತ್ತದೆ..ಆದರೆ ನನ್ನ ಕಾಲೇಜು ಲೈಫ್ನನಗೆ ಮರೆಯಲಾಗದೆ ಉಳಿದುಹೋಗಿದೆ.. ಈ ಘಟನೆ ನನ್ನನ್ನು ಸದಾ ಕಾಡುತ್ತಿದೆ.. ಸೆಕೆಂಡ್ ಇಯರ್ ಡಿಗ್ರಿಯಲ್ಲಿ ಓದುವಾಗ ನಾನು ಸಹ ಪ್ರೀತಿಯ ಅಲೆಯಲ್ಲಿ ಸಿಲುಕಿದ್ದೆ ನನ್ನ ಪ್ರೀತಿ ಅವಳ ಬಳಿ ನಿವೇದಿಸಲಾಗದೆ ಒದ್ದಾಡುತ್ತಿದ್ದೆ.. ಅದೆಷ್ಟೋ ಸಂಧರ್ಭ ಸಿಕ್ಕರು ಹೇಳಲಾಗದೆ ತಡವರಿಸುತ್ತಿದ್ದೆ.. ಗೆಳೆಯರು ದೈರ್ಯ ತುಂಬಿದರೂ ಆಕೆಯ ಮುಂದೆ ನಿಂತು ಹೇಳುವ ದೈರ್ಯ ನನಗೆ ಬರಲಿಲ್ಲ..!ಅದೊಂದು ದಿನ ಕಾಲೇಜಿನಲ್ಲಿ ಪ್ರವಾಸ ಕಾರ್ಯಕ್ರಮ ಏರ್ಪಾಡಾಗಿತ್ತು.. ಗೋವಾ ಪ್ರವಾಸಕ್ಕೆ ಹೊರಡಲು ಇಚ್ಚಿಸುವ ವಿದ್ಯಾರ್ಥಿಗಳು ತಮ್ಮ ಹೆಸರುಗಳನ್ನು ಕೊಡಬೇಕೆಂದು ನೋಟೀಸ್ ಬೋರ್ಡ್ ನಲ್ಲಿ ಮಾಹಿತಿ ಹಾಕಿದ್ದರು, ಅದಾಗಲೇ ಗೋವಾ ಟ್ರಿಪ್ ಗೆ ಹೋಗಿ ಬಂದಿದ್ದ ನನಗೆ ಮತ್ತೆ ಹೋಗುವ ಆಸಕ್ತಿ ಇರಲಿಲ್ಲ..ಆದರೆ ದಿನ ಕಳೆದಂತೆ ಗೆಳೆಯರ ಒತ್ತಾಯ ಅಲ್ಲದೇ ನನ್ನ ಹುಡುಗಿಯ ಹೆಸರು ಪಟ್ಟಿಯಲ್ಲಿರುವುದು ಗೊತ್ತಾಗಿ ಅವಳಿಗಾಗಿ ಹೋಗಬೇಕು ಈ ಪ್ರವಾಸದಲ್ಲಿಯೇ ನನ್ನ ಪ್ರೀತಿ ಹೇಳಿ ಅವಳ ಮನಸು ಗೆಲ್ಲಬೇಕೆಂಬ ಆಲೋಚನೆ ಮಾಡಿಕೊಂಡೆ..ಅಂತೂ ಗೆಳೆಯರ ಜೊತೆ ಖುಷಿಯಿಂದ ಬಸ್ ಹತ್ತಿದ್ದಾಯಿತು. ಅದೊಂದು ಎಂದೂ ಮರೆಯಲಾರದ ಪ್ರವಾಸ.. ಒಂದು ವಾರದ ಪ್ರವಾಸದ ಮದ್ಯೆ ಮದ್ಯೆ..ಹಸಿರು ಕಾಡು, ಜಲಪಾತ ಹೊಸ ವಾತವರಣದಲ್ಲಿ ಆಕೆಯನ್ನು ಮಾತನಾಡಿಸುವ ಫೋಟೊ ತೆಗೆಯುವ ಪ್ರಯತ್ನ ನನ್ನದು.. ಇದು ಗೆಳೆಯರಿಗೆ ಗೊತ್ತಿದ್ದ ಕಾರಣ ಅವರು ನನ್ನನ್ನು ಹುರಿದುಂಬಿಸುತ್ತಿದ್ದರು.ಅದಾಗಲೇ ಆಕೆಯ ಹಲವು ಫೋಟೊಗಳು ತೆಗಿದಿದ್ದೆ ಅವಳ ಗೆಳತಿ ಈಗಾಗಲೇ ನನಗೆ ಪರಿಚಯವಿದ್ದ ಕಾರಣ ಅವಳಿಗೆ ಫೋಟೋಗಳನ್ನು ತೋರಿಸಿದ್ದೆ.. ಅವಳ ಗೆಳತಿ ನನ್ನ ಕ್ಯಾಮರಾ  ಕೈ ಚಳಕಕ್ಕೆ ಫಿದಾ ಆಗಿದ್ದಳು.. ಮೆಲ್ಲಗೆ ಅವಳ ಬಳಿ ನನ್ನ ಮನದ ಬಯಕೆಯನ್ನು ಹೇಳಿಕೊಂಡು ಅವಳ ಪರಿಚಯ ಮಾಡಿಸಲು ದುಂಬಾಲು ಬಿದ್ದೆ..ಪ್ರವಾಸದ ಮೂರನೇ ದಿನ ನಾನು ಅವಳ ಗೆಳತಿಯ ಜೊತೆಗೆ ಸೇರಿ ನನ್ನ ಹುಡುಗಿಯ ಪರಿಚಯ ಮಾಡಿಕೊಂಡೆ.. ತಿಂಡಿ ತಿನ್ನುವ ಸಂದರ್ಭದಲ್ಲಿ ನಾನು ತೆಗಿದಿದ್ದ ಕೆಲವು ಫೋಟೊಗಳನ್ನು ಆಕೆಗೆ ತೋರಿಸಿದೆ..ಅವಳಿಗೆ ನಾನು ತೆಗೆದ ಅವಳ ಫೋಟೊಗಳ ನೋಡಿ ಬಹಳ ಖುಷಿಯಾಗಿ ಫೋಟೊ ಪ್ರಿಂಟ್ ಆದಮೇಲೆ ತನಗೆ ಕೊಡಬೇಕೆಂದು ಕೇಳಿಕೊಂಡಳು.. ನಾನು ಖುಷಿಯಿಂದ ಸರಿ ಎಂದಿದ್ದೆ ಹಾಗೆ ಪರಿಚಯ ಮಾತು, ಹಾಗೆ ನಮ್ಮಿಬ್ಬರ ಗೆಳೆತನದ ನೋಟ, ಕಣ್ಣೋಟ..ನಗು ಮುಂದುವರೆಯಿತು.. ಹೀಗೆ ಗೋವಾ ಪ್ರವಾಸ ನಮ್ಮಿಬ್ಬರ ಪ್ರೇಮ ಪ್ರಕರಣಕ್ಕೆ ವೇಧಿಕೆ ಆಯಿತು.. ನಾವಿಬ್ಬರು ಬಹಳ ಹತ್ತಿರವಾದೆವು.. ಏಕಾಂತದ ವೇಳೆ ನನ್ನ ಪ್ರೀತಿಯನ್ನು ಆಕೆಯಲ್ಲಿ ನಿವೇಧಿಸಿಕೊಂಡೆ..ತನ್ನ ಕಣ್ಣಿಲ್ಲಿಯೇ ಆಕೆ  ಒಪ್ಪಿಗೆ ಸೂಚಿಸಿದಾಗ ನನ್ನ ಆನಂದಕ್ಕೆ ಪಾರವೇ ಇರಲಿಲ್ಲ..ಹೀಗೆ ಆ ದಿನಗಳು ನನ್ನ ಪಾಲಿಗೆ ಅಮೂಲ್ಯ.. ಆದರೆ ವಿಧಿಯಾಟ ಬೇರೆಯೇ ಆಗಿತ್ತು ನಾವು ಪ್ರವಾಸ ಮುಗಿಸಿ ಹಿಂತಿರುಗುತ್ತಿದ್ದಾಗ ನಡು ರಾತ್ರಿಯ ಸಮಯ ಘಾಟ್ ಸೆಕ್ಷನ್ ನ ಭಯಾನಕ ತಿರುವಿನಲ್ಲಿ ನಮ್ಮ ಬಸ್ ಊಹಿಸಲಾಗದ ರೀತಿಯಲ್ಲಿ ಬಾರಿ ಅಪಘಾತಕ್ಕೆ ಒಳಗಾಗಿ ಕಂದಕಕ್ಕೆ ಉರುಳಿ‌ ಬಿತ್ತು.. ದೊಡ್ಡ ಚೀತ್ಕಾರ, ಘೋರ ಆಕ್ರಂಧನ ನರಳಾಟ.. ನಿಧಾನವಾಗಿ ನಾನು ಪ್ರಜ್ಞೆ ಕಳೆದುಕೊಂಡೆ..! ಕಣ್ಬಿಟ್ಟಾಗ ಆಸ್ಪತ್ರೆಯ ಬೆಡ್ ಮೇಲೆ ಇದ್ದೆ ಮೈ ಕೈ ನೋವು, ಕಾಲು ಕೈಗೆ ಬ್ಯಾಂಡೇಜ್..ವೈದ್ಯರು ಬಂದು ಪರೀಕ್ಷೆ ಮಾಡಿ ಹೋದರು.. ಏನಾಯಿತು.. ಬಸ್ ಅಪಘಾತದಲ್ಲಿ ನನಗೆ ಪೆಟ್ಟಾಗಿದೆ, ಇನ್ನು ಉಳಿದವರೆಲ್ಲಿ ನನ್ನ ಪ್ರೀತಿಯ ಹುಡುಗಿ ಎಲ್ಲಿದ್ದಾಳೆ..! ಹೇಗಿದ್ದಾಳೆ..!? ಅವಳಿಗೇನಾಯಿತು ಕಣ್ಣಲ್ಲಿ ನೀರು ಜಿನುಗಿತು..ನಮ್ಮ ಕಾಲೇಜು ಉಪಾದ್ಯಾಯರುಗಳು ಬಂದಿದ್ದರು ನನ್ನನ್ನು ಸಮಾಧಾನ ಪಡಿಸಿ ಮಾತನಾಡಿದರು..ಬಸ್ ಅಪಘಾತದಲ್ಲಿ ನಿನಗೆ ಪೆಟ್ಟಾಗಿದೆ ನೀನು ಧೈರ್ಯವಾಗಿರು ನಿಮ್ಮ ತಂದೆ ತಾಯಿ ಬರುತ್ತಿದ್ದಾರೆ.. ಗಾಭರಿಯಾಗಬೇಡ ಎಂದು ಹೇಳಿ ಹೊರಟು ಹೋದರು.ನನಗೇನಾದರು ಸರಿ ಅವಳು ಹೇಗಿದ್ದಾಳೆ..? ಯಾರನ್ನು ಕೇಳುವುದು ಈಗೇನು ಮಾಡುವುದು ಅವಳದೇ ನೆನಪು.. ಅಪಘಾತದಲ್ಲಿ ಅವಳಿಗೇನಾದರು ಆಯಿತೆ..! ಗೆಳೆಯರು ಎಲ್ಲಿ ಹೋದರು.. ನರ್ಸ್ ಇಂಜೆಕ್ಷನ್ ಕೊಡುತ್ತಿದ್ದರು ಹಾಗೆ ನಿದ್ದೆಯು ಆವರಿಸಿಕೊಂಡಿತು..ಮರುದಿನ ಆಸ್ಪತ್ರೆಯಿಂದ ಬಿಡುಗಡೆಯಾದೆ.. ಅಪ್ಪ ಅಮ್ಮನೊಂದಿಗೆ ಮನೆ ಸೇರಿದೆ, ಅಮ್ಮ ಅಳುತ್ತಿದ್ದರು.. ಅಪ್ಪ ನಿಟ್ಟುಸಿರುಬಿಟ್ಟು ಸುಮ್ಮನಾದರು.. ಗೆಳೆಯ ರವಿ ಮನೆಗೆ ಬಂದಾಗ ನನಗಾಗಿದ್ದ ನೋವಿನಲ್ಲಿಯೂ ಸಂತೋಷ.. ಅಮ್ಮ ಟೀ ತಂದು ಕೊಟ್ಟರು.. “ಇಂದುಕಾಲೇಜಿನಲ್ಲಿ ಪ್ರವಾಸದಲ್ಲಿ ಮಡಿದ ವಿದ್ಯಾರ್ಥಿಗಳಿಗೆ ಶೃದ್ದಾಂಜಲಿ ಸಭೆ ಇದೆ.. ಅದು ಹೇಳಿ ಹೋಗಲು ಬಂದೆ.. ನೀನು ಹುಷಾರಾಗು ಎಂದಾಗ ನನಗೆ ಶಾಕ್..!ಎಷ್ಟು ಜನ ಸತ್ತರು..? ಏನೇನಾಯಿತು ರವಿ ನಿಜ ಹೇಳು..?ದಯವಿಟ್ಟು ನನ್ನನ್ನು ಏನು ಕೇಳಬೇಡ ಎಂದು ಮುಖ ಮುಚ್ಚಿಕೊಂಡು ದುಃಖಿಸಿದ ರವಿ.. ಪತ್ರಿಕೆಯೊಂದನ್ನು ನನ್ನ ಮುಂದಿಟ್ಟು ಹೋದ*ಗೋವಾ ಪ್ರವಾಸ ಮುಗಿಸಿ ಬರುತ್ತಿದ್ದ ಕಾಲೇಜು ಬಸ್ ಭೀಕರ ಅಪಘಾತ..*ನಡುಗುವ ಕೈಗಳು ಕಣ್ತುಂಬಾ ನೀರು.. ಪತ್ರಿಕೆ ಓದಲು ಭಯವಾಗುತ್ತಿತ್ತು ಅಮ್ಮಾ.. ಎಂದು ಕೂಗಿದೆ ಓಡಿ ಬಂದ ಅಮ್ಮ ನನ್ನನ್ನು ತಬ್ಬಿ ಸಂತೈಸಿದಳು..!ಈಗ ನಾನು ಪತ್ರಕರ್ತರುಗಳ ಮುಂದೆ ಕುಳಿತಿರುವೆ.. ಹಲವಾರು ಸುದ್ದಿ ವಾಹಿನಿಗಳು ನನ್ನ ಕತೆಯನ್ನು ಬಿತ್ತರಿಸಿವೆ.. ಈಗಾಗಲೇ ನನ್ನ ಕತೆಯನ್ನು ಎಲ್ಲಾ ಕಡೆ ತೋರಿಸಿದೆ.. ನನಗೆ ಕೆಲವು ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವವಿಸಿವೆ… ಅಮರ ಪ್ರೇಮಿ ಎಂದು ಹೊಗಳಿದ್ದಾರೆ..ರಾಜೇಶ್ ಮಾತನಾಡುತ್ತಿದ್ದರು“ನನಗಾಗಿ ಇಷ್ಟು ದೂರ ಬಂದು ನನ್ನ ಕತೆ ಕೇಳಿ ನಾಲ್ಕು ಒಳ್ಳೆಯ ಮಾತು ಹೇಳಿ ನನ್ನ ಬಗ್ಗೆ ಬರೆದ ನಿಮಗೆಲ್ಲರಿಗೂ ಅನಂತ ಕೋಟಿ ಧನ್ಯವಾದಗಳನ್ನು ಅರ್ಪಿಸುತ್ತೇನೆ..ನಾನೀಗ ಸಣ್ಣದೊಂದು ವ್ಯಾಪಾರ,ವಹಿವಾಟು ಮಾಡುತ್ತಿದ್ದೇನೆ ನನಗೆ ಮದುವೆ ಆಗಿದೆ.. ಅಮ್ಮ ಅಪ್ಪ ತೀರಿಕೊಂಡರು.. ಅಪಘಾತದಲ್ಲಿ ಕಾಲು ಮುರಿದುಕೊಂಡು ಅಂಗವಿಕಲನಾದರು ಸ್ವಾಭಿಮಾನದಿಂದ ಬದುಕುತ್ತಿರುವೆ.. ನಾನೀಗ ತೃಪ್ತಿಕರವಾಗಿ ಜೀವನ ನಡೆಸುತ್ತಿದ್ದೇನೆ, ಅದಕ್ಕೆ ಕಾರಣ ನಾನು ನನ್ನ ಪ್ರೀತಿಯನ್ನು ಉಳಿಸಿಕೊಂಡಿದ್ದು.. ಹತ್ತು ವರುಷಗಳ ಹಿಂದೆ ನಡೆದ ಅಪಘಾತದಲ್ಲಿ ನನ್ನ ಗೆಳೆಯರು, ಸಹಪಾಠಿಗಳು ಸಾವಿಗೀಡಾದರು ನಾನು ಹೀಗೆ ಅಂಗವಿಕಲನಾದೆ ಆದರೆ ಯಾವ ದೇವರ ದಯೆಯೋ ಕಾಣೆ ನನ್ನ ಪ್ರೀತಿಯಲ್ಲಿ ಗೆದ್ದೆ..ಅಂದು ನಾನು ಪ್ರೀತಿಸಿದ ಹುಡುಗಿಗೆ ಗೋವಾ ಪ್ರವಾಸದಲ್ಲಿ ನನ್ನ ಪ್ರೀತಿಯನ್ನು ಹೇಳಿಕೊಂಡಿದ್ದೆ.. ಆದರೆ ಅಪಘಾತದಲ್ಲಿ ಆ ಹುಡುಗಿಯ ತಲೆಗೆ ಪೆಟ್ಟಾಗಿ ಅವಳು ಜೀವಶ್ಚವವಾಗಿ ಆಸ್ಪತ್ರೆಯಲ್ಲಿದ್ದಾಗ ನಾನು ಅಪ್ಪ ಅಮ್ಮನ ಜೊತೆ ಆಕೆಯಿದ್ದ ಆಸ್ಪತ್ರೆಗೆ ಹೋಗಿ ಅವಳ ಪೋಷಕರ ಬಳಿ ಮಾತನಾಡಿ ವಿಷಯ ತಿಳಿಸಿ ಅಂತಿಮವಾಗಿ ಅವರ ಒಪ್ಪಿಗೆಯೊಂದಿಗೆ ನನ್ನ ಪ್ರೀತಿಯ ಗೆಳತಿಯನ್ನು ಮದುವೆಯಾಗಿದ್ದೇನೆ..ನಮ್ಮಿಬ್ಬರದೂ ಸುಖೀ ಸಂಸಾರ.. ನೋಡಿ ಈಕೆಯೆ ನನ್ನ ಪ್ರೀತಿಯ ಗೆಳತಿ ನನ್ನ ಧರ್ಮಪತ್ನಿ ಸುಮಲತ ಎಂದು ಪತ್ರಕರ್ತರಿಗೆ ಸುಮಲತಳನ್ನು ಪರಿಚಯಿಸುತ್ತಾನೆ.. ರಾಜೇಶ್ ನಿಜಕ್ಕೂ ಮಾನವೀಯತೆಗೆ ತಾನು ಪ್ರೀತಿಸಿದ ತನ್ನ ಪ್ರೀತಿಗೆ ಬಹು ದೊಡ್ಡ ಗೌರವ ನೀಡಿ ಪ್ರೀತಿಯ ಮಹತ್ವವನ್ನು ಸಾರಿ ಹೇಳುತ್ತಾರೆ.. ವೀಲ್ ಚೇರ್ ಮೇಲೆ ಕುಳಿತ ಸುಮಲತಳನ್ನು ರಾಜೇಶ್  ಪರಿಚಯ ಮಾಡಿಸುತ್ತಾರೆ..ಮಾತು ಕಳೆದುಕೊಂಡು ಕೈ ಕಾಲುಗಳ ಸ್ವಾದೀನ ಇಲ್ಲದೆ ವೀಲ್ ಚೇರ್ ನಲ್ಲಿ ಕುಳಿತಿರುವ ಸುಮಲತಳನ್ನು ಕಂಡ ಪತ್ರಕರ್ತರು, ಟೀವಿ ವಾಹಿನಿಗಳು ಒಂದು ಕ್ಷಣ ಮೌನಕ್ಕೆ ಜಾರುತ್ತಾರೆ.. ಕಣ್ಣಿನಲ್ಲಿ ಜೀವ ಇಟ್ಟುಕೊಂಡು ಉಸಿರಾಡುತ್ತಿರುವ ನಿಶ್ಚಲ ಬದುಕಿನ ಪಯಣಿಗಳಂತೆ ಕಾಣುವ ಸುಮಲತ‌ ಮತ್ತು ಆಕೆಯ ಬಾಳಿಗೆ ಬೆಳಕು ನೀಡಿ ಪ್ರೀತಿಯ ಬದುಕಿಗೆ ಜೀವ ತುಂಬಿದ ನಾವಿಕ ರಾಜೇಶ್ ತನ್ನ ಅಂಗವೈಕಲ್ಯತೆಯನ್ನು ಮೀರಿ ನಿಂತು ಮಾನವತೆಯ ದೇಗುಲದ ಮಹಾನ್ ದೈವಿಕರಂತೆ ಗೋಚರಿಸುತ್ತಾರೆ.. ಲೈವ್ ಟೀವಿ ನೋಡುತ್ತಿರುವ ಅಸಂಖ್ಯಾತ ವೀಕ್ಷಕರು ತಮಗರಿವಿಲ್ಲದಂತೆಯೇ ಕಣ್ಣೀರು ಜಿನುಗಿಸುತ್ತಾರೆ.. ಎಲ್ಲೆಲ್ಲೂ ಚಪ್ಪಾಳೆ ನವ ದಿಗಂತದಲ್ಲಿ ಬಣ್ಣದೋಕುಳಿ.. ಈ ಅಮರಜೀವಿಗಳ ಪಾಲಿಗೆ ಸಣ್ಣ ಹನಿಗಳು ಸುರಿಸಿ ಆರತಿ ಎತ್ತುತ್ತದೆರಾಜೇಶ್ ಮತ್ತು ಸುಮಲತ ತಮ್ಮ ಅಂಗ ವೈಕಲ್ಯವನ್ನು ಮೀರಿ ನಿಂತು ತಮ್ಮ ಪ್ರೇಮದ ಪ್ರೀತಿಯ ಪರಾಕಾಷ್ಠೆ ಅಮರಕಾವ್ಯದ ಪ್ರೇಮ ಬರಹಕ್ಕೆ ಸಾಕ್ಷಿಯಾಗಿ ಹೊಸದೊಂದು ಮುನ್ನುಡಿ ಬರೆದು ಪ್ರೇಮಲೋಕದ ದೃವ ತಾರೆಗಳಾಗಿ ಪ್ರಜ್ವಲಿಸುತ್ತಾರೆ. ರಾಜ ಶೇಖರ್. ಕೆ

ರಾ.ಶೇ ಅವರ ನೆನಪುಗಳ ಲಹರಿ “ಆ ದಿನಗಳು” Read Post »

ಕಾವ್ಯಯಾನ

ನಾಗರಾಜ ಬಿ ನಾಯ್ಕ ಅವರ ಕವಿತೆ”ಸುಂದರಚಿತ್ರಕೆ”

ಕಾವ್ಯ ಸಂಗಾತಿ ನಾಗರಾಜ ಬಿ ನಾಯ್ಕ “ಸುಂದರಚಿತ್ರಕೆ” ಹಗಲು ಬಿಡಿಸಿದಸುಂದರ ಚಿತ್ರಕೆಗರಿಗಳು ನೂರುನಗೆಯ ನವಿಲುಗಳುಹಾರೋ ಹಕ್ಕಿಗಳುತೇಲೋ ಮೋಡಗಳಒಲವಿನ ಸೂರುಇಳೆಯ ಮಂಟಪಕೆಚಿನ್ನದ ರೇಖೆಗಳುಬೆಳಕಿನ ತೇರುಬಳ್ಳಿ ಬಳುಕಿನಲಿಮರದ ಸೊಂಪಿನಲಿಹಕ್ಕಿಗಾನ ಜೋರುಮಣ್ಣ ರಾಶಿಯಲಿನೀರ ಹನಿಗಳಲಿಚೆಂದ ಕವಿತೆ ಸಾಲುದಿನದ ಬದುಕಿನಲಿನೂರು ತೆರೆ ಬರಲಿಬದುಕು ಚೆಂದ ನೋಡು ನಾಗರಾಜ ಬಿ ನಾಯ್ಕ.

ನಾಗರಾಜ ಬಿ ನಾಯ್ಕ ಅವರ ಕವಿತೆ”ಸುಂದರಚಿತ್ರಕೆ” Read Post »

ಕಾವ್ಯಯಾನ

ನಿಶ್ಚಿತ ಎಸ್( ಎಸ್. ಎನ್)ಅವರ ಕವಿತೆ “ನನ್ನ ಕ್ಷಮಿಸಿ”

ಕಾವ್ಯ ಸಂಗಾತಿ ನಿಶ್ಚಿತ ಎಸ್( ಎಸ್. ಎನ್) “ನನ್ನ ಕ್ಷಮಿಸಿ” ಮನದಾಳದ ಮಾತನ್ನುಮನ ಬಂದಂತೆಹೇಳಿದ್ದಕ್ಕಾಗಿ ಕ್ಷಮಿಸಿ ನನ್ನ ನೀವು ನನ್ನವರೆಂದು ತಿಳಿದುನನ್ನವರನ್ನೆಲ್ಲ ಬಿಟ್ಟುಬಂದಿದ್ದಕ್ಕಾಗಿ ಕ್ಷಮಿಸಿ ನನ್ನ ನಿಮ್ಮವರನ್ನೆಲ್ಲ ನಮ್ಮವರೆಂದುತಿಳಿದುಕೊಂಡಿದ್ದಕ್ಕಾಗಿಕ್ಷಮಿಸಿ ನನ್ನ ನನ್ನ ಅಂತರಂಗವ ನೀವುಅರಿಯುತ್ತೀರಾ ಎಂದುನಂಬಿದ್ದಕ್ಕಾಗಿ ಕ್ಷಮಿಸಿ ನನ್ನ ನಾ ಇರುವ ಹಾಗೆ ನನ್ನನ್ನುಒಪ್ಪಿಕೊಳ್ಳುವಿರಿ ಎಂದುಬಯಸಿದ್ದಕ್ಕಾಗಿ ಕ್ಷಮಿಸಿ ನನ್ನ ನಿಮ್ಮ ಆಸೆಗಳಿಗಾಗಿನನ್ನಾಸೆಗಳನ್ನತೊರೆದಿದ್ದಕ್ಕಾಗಿ ಕ್ಷಮಿಸಿ ನನ್ನ ನನ್ನ ಕನಸುಗಳನ್ನುನನಸು ಮಾಡುವಿರಿ ಎಂದುಅಪೇಕ್ಷಿಸಿದ್ದಕ್ಕಾಗಿ ಕ್ಷಮಿಸಿ ನನ್ನ ನನ್ನ ಭಾವನೆಗಳಿಗೆನಿಮ್ಮ ಸ್ಪಂದನೆಯಕೇಳಿದ್ದಕ್ಕಾಗಿ ಕ್ಷಮಿಸಿ ನನ್ನ ನಾನು ನೀವು ಎರಡು ದೇಹಒಂದು ಪ್ರಾಣ ಎಂದುಕಲ್ಪಿಸಿಕೊಂಡಿದ್ದಕ್ಕಾಗಿ ಕ್ಷಮಿಸಿ ನನ್ನ ಒಟ್ಟಾರೆಯಾಗಿ ನಾನು ಆ ಮನೆಯಸೊಸೆಯಲ್ಲ ಮಗಳೆಂದುಬದುಕಿದ್ದಕ್ಕಾಗಿ ಕ್ಷಮಿಸಿ ನನ್ನ ನಿಶ್ಚಿತ ಎಸ್( ಎಸ್. ಎನ್)ನಿಶ್ಚಿತಾರ್ಜುನ್

ನಿಶ್ಚಿತ ಎಸ್( ಎಸ್. ಎನ್)ಅವರ ಕವಿತೆ “ನನ್ನ ಕ್ಷಮಿಸಿ” Read Post »

ಇತರೆ, ಲಹರಿ

“ಒಂಟಿ ಚಪ್ಪಲಿಯ ಗೋಳಾಟ”ಕಲ್ಪನಾ ಎಸ್‌ ಪಾಟೀಲ್‌ ಅವರ ಒಂದು ಲಹರಿ ಬರಹ

ಲಹರಿಸಂಗಾತಿ ಕಲ್ಪನಾ ಎಸ್‌ ಪಾಟೀಲ್‌ “ಒಂಟಿ ಚಪ್ಪಲಿಯ ಗೋಳಾಟ” ನಾಲ್ಕು ದಿನ ಅಂತ ಊರಿಗೆ ಹೋಗಿದ್ದೆಮರಳಿದಾಗ ಅನಿಸ್ತಿತ್ತು ಏನೋ ಇಲ್ಲಲಾಮನೆ ಮುಂದ ಅಂಗಳದಾಗ,ಏನಿಲ್ಲ,?ಏನಿಲ್ಲ ಅಂತ ಒಳಗ ಕಾಲಿಡೊದ್ರಾಗ ಒಂಟಿ ಚಪ್ಪಲಿ ಗೋಳಾಡತಿತ್ತು.ಗೊಳೋ ಅಂತ ಅಳತಿತ್ತು  ಕುಂಯ್ಯೋss ಮರೋss ಅಂತ ಆಗಾಗ ನಿಟ್ಟುಸಿರು ಬಿಡತಾನೆ ಇತ್ತು. ನಾ ಏಕಾಂಗಿ ಆಗೇನಿ ಅಂತ ಬಿಕ್ಕಿ ಬಿಕ್ಕಿ ಅಳೋದನ್ನ  ನೋಡಿ.. ಏನಾಯಿತು? ಯಾಕೆ ಈ ರೋದನೆ? ಬಿಸಿಲ ಜಾಸ್ತಿ ಆಯಿತಾ?ಮನಸ್ಸು ಪ್ರಶ್ನೆ ಹಾಕಿತು,ತಕ್ಷಣ ನೆರಳಲ್ಲಿ ಬಿಡೋಕ ಬಲಕಾಲು ಮುಂದೆ ಬಂದು, ಗಬಕ್ಕನ ಹಿಂದೆ ಸರಿದು ಸುಮ್ನ ನಿಲ್ಲತು.ಯಾಕ ನಿನಗೇನಾತು? ನೀ ಯಾಕ ನಿಂತಿ ನೆರಳಾಗ ಬಿಡಾಕತ್ತಿದ್ದ್ಯಲ್ಲ.?ಅಲ್ಲಿವರೆಗೂ ಅದು ಎಡಗಾಲಿನ ಚಪ್ಪಲಿ, ಅಂತ ನನ್ನ ತಲೆಗೆ ಹೊಳದಿರಲಿಲ್ಲ. ಹೌದಲ್ಲ.ಹೌದು, ಎಲ್ಲಿ ನನ್ನ ಜೊತೆಗಾರ? ನೀನು ಹೋದಾಗಿನಿಂದ ನಾನು ಒಂಟಿಯಾಗಿದ್ದೀನಿ ಅಂತ ಗೋಳಾಡಾಕತ್ತು. ನಾವಿಬ್ಬರೂ ಎಂದೂ ಅಗಲತಿರಲಿಲ್ಲ,  ಎಲ್ಲಿ ಹೋದರೂ ಇಬ್ಬರೂ ಜೊತೆಯಾಗೆ ಹೋಗತಿದ್ದವಿ. ಒಟ್ಟಿಗೆ ಇರತಿದ್ದವಿ.ಅದ ಯಾವ ನಾಯಿ ನಮ್ಮನ್ನ ಬ್ಯಾರೆಮಾಡಿದೆಯೋ? ಮುಗಿತಿನ್ನು ನನ್ನ ಕತಿ,ನೀನು ನನ್ನ ದೂರ ಮಾಡತಿ.ಕಸದಾಗ ಎಸಿತಿ?ನನ್ನ ನೋವು ನಿನಗೆಲ್ಲಿ ಕಾಣಿಸಬೇಕು.  ನನ್ನ ನೀನ ತಯಾರ ಮಾಡಿ, ಆದ್ರೂ ನನಗ ಮಾತು ಬರುದಿಲ್ಲ.ಅದೇನೋ ಅಂತೀರಲ್ಲ ನೀವು ಮಿಸ್ ಮ್ಯಾಚಂತ ಹಂಗ ಮಾಡಕೊ.ನಾ ಎಲ್ಲಿ ಹೋಗುದಿಲ್ಲ ಅಂತು.ಹುಂ, ಆಯಿತ ಆಯಿತ ಸರಿ ನೋಡತಿನಿ ತಡೆ.ಮಿಸ್ ಮ್ಯಾಚಂತ,ಆಹಹಹಾ…ಈ ನಮ್ಮ ಕರಿಯಗ ಚಪ್ಪಲಿಯಂದ್ರ ಬಾಳ  ಪ್ರೀತಿ. ನನಗ ಅವನ ಮ್ಯಾಲ ಸಂಶಯ ಬರಾಕತ್ತಿತ್ತು.ನನ್ನ ನೋಡಿ ಎದೆ ಎತ್ತರಕ್ಕ ಜಿಗಿದ, ಮುಖ ನೆಕ್ಕಿ ಅರಿವಿ ಜಗ್ಗಿ ನನ್ನ ಯಾಕ ಬಿಟ್ಟ ಹೋಗಿದ್ದೆ? ಅಂತ ಕೇಳತಿತ್ತು.ಲೇ ಕರಿಯ ಚಪ್ಪಲಿ ಎಲ್ಲ್ಯಲೇ? ನಾ ನೋಡಿಲ್ಲ ಅಂತ ವರದಿ ಒಪ್ಪಿಸಿತು.ಬಾಳಷ್ಟು ಓಣ್ಯಾಗ ಹೋಗವ್ರನ್ನ ಸ್ನೇಹಿತರನ್ನ ಮಾಡಿಕೊಂಡಿದ್ದ. ಮನಿಯೆಲ್ಲ ಹುಡಕಾಡಿ, ಒಳಗ ಎಲ್ಲ ಹುಡಕಾಡಿದೆ.ಈಗರ ಬಂದಿ, ಕುಂಡರು, ನೀರು  ಕುಡಿ ಅಂದಳು ಆಯಿ. ಸಿಗತೈತಿ ಇಲ್ಲೆ, ಎಲ್ಲ್ಯರ ಬಿದ್ದಿರತೈತಿ.ನನಗೂ ಅದ ಸಿಗೂತನ ಸಮಾಧಾನ ಇರಲಿಲ್ಲ. ಯಾಕೋ ಬಾಳ ಕೆಟ್ಟ ಅನಿಸಾಕತ್ತಿ,  ನಾನು- ನನ್ನ ಸ್ನೇಹಿತರಿಂದ ದೂರಾದಂಗ ಅನಿಸಾಕತ್ತ.ಹೊರಗಡೆ ಹೋಗಿ ಮನೆಯ ಹಿಂದೆ, ಅಗ್ಗಲ-ಮಗ್ಗಲ ಒಂದು ಸುತ್ತ ಹೊಡೆದು ಸ್ವಲ್ಪ ದೂರ ಹೊದಾಗ ಅಲ್ಲಿ ಒಂದು ಚಪ್ಪಲಿ ಕಾಣಿಸಿತು, ಹತ್ತಿರ ಹೋಗಿ ನೋಡಿದ್ರ ಬಲಗಾಲಿನ ಚಪ್ಪಲಿ ಅನಾಥವಾಗಿ ಬಿದ್ದಿತ್ತು. ಇದರದು ಅದ ಗೋಳು. ಅಯ್ಯೋ, ಯಾರಿಗೆ ಹೇಳಲಿ ನನ್ನ ಗೋಳು? ನಮಗೂ ಮನುಷ್ಯರ ತರ ಮಾತಾಡೋಕ ಬರತಿದ್ರ, ಕೂಗಬಹುದಿತ್ತು. ಚೀರಿ ಹೇಳಬಹುದಿತ್ತು.  ಗಂಟಲೆ ಇಲ್ಲ. ತಮ್ಮ ಪಾದಗಳನ್ನ ಸುರಕ್ಷಿತವಾಗಿಟ್ಟುಕೊಳ್ಳಾಕ ನಮ್ಮನ್ನ ಸೃಷ್ಟಿ ಮಾಡಿಕೊಂಡ ಮನ್ಷ್ಯಾ ಆವಾಗವಾಗ, ಕಳೆದುಕೊಂಡಾಗಲೂ “ಹೋಗಲಿ ಬಿಡ ಪೀಡಾ ಹೋತಂತ” ಅಂತಿರಿ. ನೀವು ಕಳೆದು ನಮ್ಮನ್ನ ಪೀಡಾ ಅಂತಿರಿ. ಇದು ಖರೇನ, ಹಿಂಗ ಎಷ್ಟ ಸಲ ನಮ್ಮ ಮನ್ಯಾನವ್ರು, ಮದುವೆಗೆ, ಮಣ್ಣಿಗೆ ಹೋದಾಗ, ಯಾರೋ ಹಳೆಯ ಹರಿದ,ಸವೆದ,ಬಣ್ಣ ಮಾಸಿದ, ಉಂಗುಟ ಕಿತ್ತಿದ ಜೋಡುಗಳನ್ನ ಬಿಟ್ಟು ಇವರ ಹೊಸ ಜೋಡನ್ನ ಧರಿಸಿ ಹೋಗಿದ್ದಾಗ ಬರಿಗಾಲಲ್ಲಿ ಮನೆಗೆ ಬಂದಾಗ ಹಂಗ ಹೇಳಿದ್ದ ನೆನಪಾಯಿತು. ಅಷ್ಟರಾಗ, ಇದು ಓsss ನೀವೇನು ನನ್ನ ಹುಡಕ್ಕೊಂಡ ಬಂದ್ರಾ ಅಂತ ಕೇಳತು.ಹುಂ ಅಂದೆ..ನೀವು ಊರಗೆ ಹೋಗಬೇಕಾದ್ರ ನಮ್ಮನ್ನ ಎತ್ತಿಟ್ಟು ಹೋಗೊದಲ್ಲ! ನಮಗೇನು ಎದ್ದ ಹೋಗಾಕ ನಿಮ್ಮ ತರಹ ಕಾಲಿದ್ದಾವಾ… ನಮಗ ಜೀವ ಇಲ್ಲದಂಗ ಸೃಷ್ಟಿ ಮಾಡಿರಿ.ಬೇರೆ ಬೇರೆ ದೇಶದಾಗ ಮಕ್ಕಳಿಂದ ಹಿಡಿದು ದೊಡ್ಡವರು ಧರಿಸೊ ಜೋಡಗಳೊಳಗ ಬಣ್ಣ ಬಣ್ಣದ ವಿದ್ಯುತ್ ಲೈಟ್ , ಮ್ಯುಜಿಕ್ ಹಾಕತಾರ. ನಮ್ಮನ್ನ ಇಡಾಕ ಚಂದ ಚಂದ ಕಪಾಟ ಮಾಡಸ್ತಾರ. ನೀವು ಅದಿರಿ ಕೋಟಿಗಟ್ಟಲೆ ರೊಕ್ಕ ಖರ್ಚ ಮಾಡಿ ಮನೆ ಕಟ್ಟಸ್ತಿರಿ, ಹೊರತು ನಮಗ ಜಾಗ ಮಾತ್ರ ಇರುದಿಲ್ಲ. ಹಾಂ, ಇನ್ನೊಂದೇನದ ಹೊರಗಿನಿಂದ ಬರುವವರಗೆ ನಾವು ಮೊದಲ ಕಾಣಿಸಬಾರದಂತಿರಿ. ಹೇಳಿ ಮಾಡಸಿದ ಜೋಡಿ ಸಿಗುದಂದ್ರ ನಾವ ಅಲ್ಲೇನ,  ಮತ್ತೇನ ಸಿಗತೈತಿ ನಿಮಗ?ಅಂದಾಗ ನನಗ “ಹೇಳಿ ಮಾಡಿಸಿದ ಜೋಡು ಸಿಗುವುದು ಚಪ್ಪಲಿಯಲ್ಲಿ ಮಾತ್ರ ಉಳಿದೆಲ್ಲ ಹೊಂದಾಣಿಕೆ” ಅಂತ ಎಲ್ಲೋ ಓದಿದ್ದ ನೆನಪಾಯಿತು. ನಾನಂದೆ ಹೋಗಲಿ ಬಿಡು, ಈಗ ಸುಮ್ಮನ ನಡಿ ಅಂತ ಒಂಟಿಯಾದ ಜೋಡನ್ನ ಧರಿಸಿ ಮನೆಗೆ ಬಂದು ಒಂಟಿಯಾಗಿದ್ದರ ಪಕ್ಕ ಬಿಟ್ಟಾಗ, ಎರಡು  ಬಾಳ ಖುಷಿ ಪಟ್ಟಂತೆ ಭಾಸವಾಗತಿತ್ತು. ಎರಡು ಕೋಪ,ಇರಿಸುಮುರಿಸನ್ನ ಬಿಟ್ಟು ಎಲ್ಲ ಬೇಗ ಮರೆತು ಶಾಂತ ಅದವು. ನನ್ನ ಮನಸ್ಸು ಹೇಳಿತು, ನೋಡು ನೀವು ನರಮಾನವರು ಇರತಿರಿ, ಎನಾದ್ರೂ ಆದ್ರ ಲಗೂ ಮರೆಯೊದಿಲ್ಲ,  ದುಃಖಿಸ್ತಿರಿ,  ಮತ್ತ ಮತ್ತ ನೆನೆಸಿಕೊಂಡು ಅಳತಿರಿ. ಏನೋ, ಆದರೂ ಮನುಷ್ಯ ಅನ್ನೋ ವಿಚಿತ್ರ ಪ್ರಾಣಿನ ಆ ಭಗವಂತ ಅದೆಷ್ಟು ತಾಳ್ಮೆಯಿಂದ ಸೃಷ್ಟಿ ಮಾಡಿದ್ದಾನಲ್ಲ ಅಂತು. ಹುಂ, ಅದಕ್ಕ ಅಲ್ಲ ನನ್ನಲ್ಲಿ ಅಷ್ಟ ತಾಳ್ಮೆ ಐತಿ ಅಂದೆ, ಅದು ಶಾಂತವಾಗಿ ನಸುನಕ್ಕಿತು. ನನಗೂ ಖುಷಿ ಆಯಿತು. “ಹುಂ, ಚಪ್ಪಲಿ ಸಿಕ್ಕಿತಲ್ಲ, ಬಾ ಇನ್ನsss  ಒಳಗ, ಬಿಸಿಲ ಬಾಳೈತಿ ಹೊರಗ” ಅಂತ ಆಯಿಯ ಕೂಗು ಕೇಳಿಸಿ ಒಳ ನಡೆದೆ. ಕಲ್ಪನಾ ಎಸ್ ಪಾಟೀಲ ಕಾವ್ಯಧರೆ

“ಒಂಟಿ ಚಪ್ಪಲಿಯ ಗೋಳಾಟ”ಕಲ್ಪನಾ ಎಸ್‌ ಪಾಟೀಲ್‌ ಅವರ ಒಂದು ಲಹರಿ ಬರಹ Read Post »

ಕಾವ್ಯಯಾನ

ವಾಣಿ ಶಿವಕುಮಾರ್‌ ಅವರ ಕವಿತೆ ” ಜೀವದ ಗೆಳತಿ”

ಕಾವ್ಯ ಸಂಗಾತಿ ವಾಣಿ ಶಿವಕುಮಾರ್‌ “ಜೀವದ ಗೆಳತಿ” pic adobeai̧chatgpt ಕಣ್ಣಲ್ಲಿ ಮೂಡಿದ ಕಾಂತಿಯ ಹೊನಲು,ಮನದಲ್ಲಿ ಪ್ರೀತಿಯ ಮೊಗ್ಗು ಅರಳಲು,ಜೀವದ ಗೆಳತಿ ನೀನಾಗಿ ಬಂದರೆ,ಬಂದಿಯು ನಿನ್ನ ತೋಳಿನಾಸರೆ.. ಚಂದಿರನೂ ನಾಚಿ ಮೋಡದಿ ಮರೆಯಾದ,ಹೃದಯ ತಾಳಕೆ ಬೆಸೆಯಿತು ಗೆಜ್ಜೆನಾದ,ಶೃಂಗಾರದ ಮೈಸಿರಿಗೆ ದೃಷ್ಟಿ ತಾಕದಂತೆ,ನನ್ನ ಕಣ್ಣುಗಳೇ ನಿನಗೆ ಕಾವಲಿನಂತೆ.. ಒಲವು ಚೆಲುವಿನ ಚಿತ್ತಾರ ಬರೆದಿದೆ,ಕಾಮನಬಿಲ್ಲಾಗಿ ರಂಗನು ಹರಿಸಿದೆ,ಭತ್ತದ ಎಸಳನು ನವಿರಾಗಿ ಬಿಡಿಸುತಾ,ಗುಲಾಬಿ ತಿರುಳನು ಸವೆದು ಮರ್ಧಿಸುತ,-ಸಣ್ಣ ಆಲಾಪನೆ-ಜಗವ ಮರೆಯುತ, ಉಸಿರ ಬೆಸೆಯುತ,ಸಾಗುವ ಜೊತೆಗೆ ಹೆಜ್ಜೆಯನೂರುತ.. ಕಣ್ಣಲ್ಲಿ ಮೂಡಿದ ಕಾಂತಿಯ ಹೊನಲು,ಮನದಲ್ಲಿ ಪ್ರೀತಿಯ ಮೊಗ್ಗು ಅರಳಲು,ಜೀವದ ಗೆಳತಿ ನೀನಾಗಿ ಬಂದರೆ,ಬಂದಿಯು ನಿನ್ನ ತೋಳಿನಾಸರೆ.. ವಾಣಿ ಶಿವಕುಮಾರ್

ವಾಣಿ ಶಿವಕುಮಾರ್‌ ಅವರ ಕವಿತೆ ” ಜೀವದ ಗೆಳತಿ” Read Post »

ಕಾವ್ಯಯಾನ

ಡಾ.ಹೆಚ್.ನಟರಾಜ್‌ ಅರ್ಯ ಅವರ ಕವಿತೆ “ಬೆಳದಿಂಗಳ ರಾತ್ರಿ ಕಂಡ ಕನಸು”

ಕಾವ್ಯ ಸಂಗಾತಿ ಡಾ.ಹೆಚ್.ನಟರಾಜ್‌ ಅರ್ಯ “ಬೆಳದಿಂಗಳ ರಾತ್ರಿ ಕಂಡ ಕನಸು” ಬೆಳದಿಂಗಳ ಬೆಳ್ಳಿ ಹಾದಿಯಲ್ಲಿ,ಮನಸು ಮೌನವಾಗಿ ತೇಲಿತು;ನೆರಳಿನ ಮಧ್ಯೆ ನಿಂತ ಕನಸು,ನನ್ನ ಕೈ ಹಿಡಿದು ನಡೆಯಿತು. ಕತ್ತಲ ಕಾಡು ದಟ್ಟವಾದರೂ,ಚಂದ್ರ ಕಣ್ಣು ಮಿಟುಕಿಸಿತು;ದಿಕ್ಕಿಲ್ಲದ ಹೆಜ್ಜೆ ಮುಂದೆ,ಕನಸೇ ದಾರಿಯಾಗಿ ನಿಂತಿತು. ಒಣ ಮಣ್ಣಿನ ನಿಶ್ಶಬ್ದದಲ್ಲಿ,ಒಂದು ಮೊಳೆ ತಲೆ ಎತ್ತಿತು;“ದಯೆ ಬಿದ್ದ ಬೀಜವಾದರೆ,ಬಾಳೇ ಮರವಾಗಿ ಬೆಳೆಯಿತು.” ಹಸಿದ ಕಣ್ಣಿನ ತೇವದಲ್ಲಿ,ದೇವರ ಮೌನ ಕಾಣಿಸಿತು;ಒರೆಸಿದ ಒಂದು ಕಣ್ಣೀರಲ್ಲಿ,ಒಂದು ದೀಪವೇ ಹೊತ್ತಿತು. ಸುಲಭ ಸಿಹಿಯ ಮೃದುವಾದ ಧ್ವನಿ,ದೂರದಿಂದ ಕರೆಯಿತು;ಬೆವರಿನ ಉಪ್ಪು ಬಿದ್ದ ಜಾಗದಲ್ಲಿ,ಸತ್ಯದ ಬೆಳೆ ಮೊಳೆಯಿತು. ಕಲ್ಲಿನ ಹೃದಯದೊಳಗೂ,ಒಂದು ಹನಿ ದಯೆ ಬೀಳಿತು;ಹಿಮಾಲಯದ ಅಹಂಕಾರವೂ,ಮೌನವಾಗಿ ನೀರಾಯಿತು. ಬೀಜವಾಗಿ ಬಿದ್ದ ಸಣ್ಣ ಕೈಹಿಡಿತ,ಕಾಲದಲ್ಲಿ ಮರವಾಗಿ ನಿಂತಿತು;ಆ ಮರದ ನೆರಳಲ್ಲಿ ಒಂದು ದಿನ,ಕೊಟ್ಟ ಕೈಯೂ ಮರೆತು ಹೋಯಿತು. ಬೆಳದಿಂಗಳ ಮೌನ ರಾತ್ರಿ,ಕನಸು ಬಂದು ಮಾತಾಡಿತು“ಒಂದು ಮನದಲ್ಲಿ ಬೆಳಕು ಹತ್ತಿದರೆ,ಲೋಕವೆಲ್ಲ ಪ್ರಭಾತವಾಯಿತು.” ಡಾ.ಹೆಚ್.ನಟರಾಜ್‌ ಅರ್ಯ

ಡಾ.ಹೆಚ್.ನಟರಾಜ್‌ ಅರ್ಯ ಅವರ ಕವಿತೆ “ಬೆಳದಿಂಗಳ ರಾತ್ರಿ ಕಂಡ ಕನಸು” Read Post »

ಕಾವ್ಯಯಾನ, ಗಝಲ್

ಡಾ.ರೇಖಾ ಉದಯ ಅವರ ಗಜಲ್

ಕಾವ್ಯ ಸಂಗಾತಿ ಡಾ.ರೇಖಾ ಉದಯ ಗಜಲ್ ಅದಾವ ಮೋಹದ ಮಾಯೆ ಸೆಳೆದಿದೆ ನಿನ್ನೆಡೆಕಣ್ಣೊಳಗಿನ ಒಲವಿನ ನೋಟ ಕರೆದಿದೆ ನಿನ್ನೆಡೆ ಗಾಳದಲ್ಲಿ ಸಿಕ್ಕ ಮೀನಂತಾಗಿದೆ ನನ್ನೀ ಜೀವನನಂಬಿಕೆಯೇ ಒಲವೆಂಬ ಜಾಡು ಹಿಡಿದಿದೆ ನಿನ್ನೆಡೆ ನಯವಾದ ಮಾತುಗಳೇ ಮುದ ನೀಡಿದವು ಎನಗೆಶರದಿ ಸೇರುವ ತವಕದಿ ಮನ ನಡೆದಿದೆ ನಿನ್ನೆಡೆ ತಿಳಿಯದಂತಿರಬೇಕು ಮಾಡಿದ ತಪ್ಪುಗಳಿಗೆ ಅಲ್ಲವೇಭ್ರಮೆಯ  ತೊರೆದು ನಂಬಿಕೆಯ ಪಡೆದಿದೆ ನಿನ್ನೆಡೆ ರೇಖೂ ಸೋಕಿಸಿಕೊಳ್ಳದಿರು ಕರಿ ನೆರಳ ಛಾಯೆಯಸೋಲಿನ ಭೀತಿಯ ಬಿಟ್ಟು ಭರವಸೆ ಬೆಳೆದಿದೆ ನಿನ್ನೆಡೆ ಡಾ.ರೇಖಾ ಉದಯ

ಡಾ.ರೇಖಾ ಉದಯ ಅವರ ಗಜಲ್ Read Post »

ಕಾವ್ಯಯಾನ

ಎಮ್ಮಾರ್ಕೆ ಅವರ ಹೊಸ ಗಜಲ್

ಕಾವ್ಯ ಸಂಗಾತಿ ಎಮ್ಮಾರ್ಕೆ ಗಜಲ್ ಬೋಳುಮರವೂ ಭರವಸೆ ತೋರುತಿದೆ ಈಗಚಿಗುರೆಲೆ ಹೊಸತು ಸಂದೇಶ ಸಾರುತಿದೆ ಈಗ ಖಾಲಿ ಕೊಂಬೆ ಮೇಲೀಗ ಕೋಗಿಲೆ ದರ್ಬಾರುಕುಹೂ ಕುಹೂ ಕೂಗೋ ರಾಗ ಕೇಳುತಿದೆ ಈಗ ನೋವು-ನಲಿವುಗಳಿದ್ದಾಗಲೇ ಬಾಳಿಗೊಂದರ್ಥಬೇವು ಬೆಲ್ಲ ರುಚಿಯ ಜಿಹ್ವೆ ನೋಡುತಿದೆ ಈಗ ಸೃಷ್ಠಿ‌ ತಾ ಸೊಬಗು ತೋರೇ ಅದೆಂಥ ಗಾರುಡಿಕ್ರೋಧಿನಾಮ ಘಳಿಗೆ ಶುಭ ಕೋರುತಿದೆ ಈಗ ಕುಂಬಾರನಿಗೆ ಯುಗಾದಿಯೇ ಹೊಸ ವರ್ಷವುರತ್ನಪಕ್ಷಿಯೇ ಕಣ್ಣ ಮುಂದಣ ಹಾರುತಿದೆ ಈಗ ಎಮ್ಮಾರ್ಕೆ

ಎಮ್ಮಾರ್ಕೆ ಅವರ ಹೊಸ ಗಜಲ್ Read Post »

ಕಾವ್ಯಯಾನ

ಮಾಲಾ ಚಲುವನಹಳ್ಳಿ ಅವರ‌ ಗಜಲ್

ಕಾವ್ಯ ಸಂಗಾತಿ ಮಾಲಾ ಚಲುವನಹಳ್ಳಿ ಗಜಲ್ ನಡೆಯುವ ಹಾದಿಯಲ್ಲಿ ಹೂವು ಚೆಲ್ಲಿ ಕೈ ಹಿಡಿದು ನಡೆಸುವೆನು ಸಖತಡೆಯುತ ಅಡೆತಡೆಯ ಸಹಬಾಳ್ವೆಗೆಹೂ ಮಳೆಯ ಸುರಿಸುವೆನು ಸಖ ಸಮ್ಮತಿ,ಅಸಮ್ಮತಿಗಳ ಅಸಮತೋಲನಸಂಸಾರದಲ್ಲಿ ಸಹಜವಲ್ಲವೇನುನಮ್ಮದೇ ನಿಸ್ವಾರ್ಥದ ಚೌಕಟ್ಟಿನಲ್ಲಿನಿನ್ನ ಮೈ ಮರೆಸುವೆನು ಸಖ ಹರೆಯವೆಂದರೆ ಬಣ್ಣದ ಚಿತ್ತಾಕರ್ಷಕಅರಿಯದ ಮೂಢನಲ್ಲ ನೀಕರೆಯುವ ಕಾಮನೆಗಳ ಜೊತೆ ಪ್ರೇಮ ಸೌಧದಿ ನಿನ್ನ ಇರಿಸುವೆನು ಸಖ ಶಬ್ದವಾಗಲಾರದ ಭಾವಗಳು ಅದೆಷ್ಟೋಎದೆಯೊಳಗೆ ನಗಾರಿಯಾಗಿವೆಸ್ಥಬ್ಧವಾದ ಮಾತುಗಳೂ ತಾಕಲಾಟವನಡೆಸುವುದ ಅರ್ಥೈಸುವೆನು ಸಖ ಭವಿಷ್ಯದ ಹಾದಿ ತೆರೆದುಕೊಂಡಿರುವಈ ಘಳಿಗೆ ತವಕ ನೂರಾಗಿದೆನವಿರಾದ ಕನಸುಗಳು ಮಾಲಾಳ ಎದೆಯಹಾಡಾಗಿರುವುದ ತಿಳಿಸುವೆನು ಸಖ ಮಾಲಾ ಚೆಲುವನಹಳ್ಳಿ

ಮಾಲಾ ಚಲುವನಹಳ್ಳಿ ಅವರ‌ ಗಜಲ್ Read Post »

You cannot copy content of this page

Scroll to Top