ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com


ಅವಳ ನೆನಪುಗಳೇ ಹಾಗೆ
ಎಳೆದಷ್ಟು ತುದಿ ದಕ್ಕುವುದಿಲ್ಲ
ಅಳೆದಷ್ಟು ತಾಳ್ಮೆ ಬರಿದಾಗುತ್ತಿರಲಿಲ್ಲ
ಮೌನದಲ್ಲಿ ಬದುಕಿನ ಸೂತ್ರ ಹೆಣೆದಿದ್ದಳು.

ಕೋಪ ತಾಪದ ಧಗೆ ಎಂದೂ ಹಚ್ಚಲಿಲ್ಲ
ನಾಜೂಕಲ್ಲಿ ತಯಾರಿಸುತ್ತಿದ್ದಳು
ಸೌದೆ ಒಲೆಯಲಿ ರುಚಿಯಾದ ಅಡುಗೆ
ಆ ಪರಿಮಳವೆಂದೂ ಅಳಿಯದಂತೆ
ಇರಿಸಿ ಹೋದಳು ಮೂಗಿನೊರಳಲಿ.

ಕರುಳ ಬಳ್ಳಿಗಳ ಕುಳ್ಳಿರಿಸಿ
ಬಿಸಿ ಆರುವ ಮುನ್ನ ನಲ್ಮೆಯಿಂದ
ತುತ್ತು  ಬಡಿಸಿ
ಕಥೆ ಹೆಣೆಯುತಿದ್ದಳು
ಮಾಸಲಿಲ್ಲ ಇಂದಿಗೂ ಆ ಧ್ಯಾನ.

ಚಿಮಿಣಿ ದೀಪ ಮನೆ ಮನದ ಆಶ್ರಯ
ಸಹಭಾಗಿತ್ವದ  ಪಾಠ ಕಲಿಸಿದ್ದಳು
ತನ್ನ ತಾನೇ ಸುಟ್ಟುಕೊಂಡ  ಸೊಡರು
ಹಣೆಬರಹವ ತಿದ್ದಿ ತೀಡುತಾ
ಬದುಕಿನ ಸಾರ್ಥಕತೆ  ಸಾರಿತು.

ಆದರಿಂದು ಅದೆಲ್ಲ  ಮರೆಯಾದವು
ಅವಿಶ್ರಾಂತದ  ಹಿಂದಿನ ಬದುಕಿನ
ಆ ಶಕ್ತಿ ಆ ಪ್ರೀತಿ  ಬಹು ದೂರ ಸಾಗಿದವೇ
ಹಳೆಯ ಜೀವನಾಡಿಗಳೆಲ್ಲ ಮೂಲೆ ಸೇರಿದವೇ
ಆಧುನಿಕತೆಯ ಅಬ್ಬರದಲ್ಲಿ
 ಒಲವು ಕೂಡ  ಕಲಬೆರಕೆಯಾಯಿತೇ… ?


        

About The Author

1 thought on “ಮಹಿಳಾದಿನದ ವಿಶೇಷ, ವಿಮಲಾರುಣ ಪಡ್ಡoಬೈಲು”

Leave a Reply

You cannot copy content of this page

Scroll to Top