ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com


ಇತಿಹಾಸ ಮತ್ತೆ
ಮರುಕಳಿಸುತ್ತಿದೆ
ಯುದ್ಧವೆಂದರೆ
ಕೇವಲ ಸಾವು ನೋವಿನ
ಲೆಕ್ಕವಲ್ಲ
ಭೂಮಿ ಆಕ್ರಮಣವಲ್ಲ
ಬಲಿಷ್ಟರನ್ನು ಬಗ್ಗು ಬಡಿದು
ಗುಲಾಮರನ್ನಾಗಿ ಮಾಡುವುದಲ್ಲ

ಮನುಷ್ಯ ಮನುಷ್ಯರ ಮಧ್ಯೆ
ಹಗೆತನದ ಗೋಡೆ ನಿರ್ಮಾಣ
ಒಂದಾಗದ ಜನರ ಕಿಚ್ಚು
ಬೂದಿಯಾಗುವುದು ಭೂಮಿ
ಸುತ್ತಲೂ ಬಾಂಬ್ ಸಪ್ಪಳ
ಕ್ಷಿಪಣಿಗಳ ಹಾರಾಟ
ಎಳೆಯ ಮಕ್ಕಳು ಕುಳಿತಲ್ಲಿಯೇ
ಜೀವ ಬಿಟ್ಟಿದ್ದಾರೆ
ನಾಗಾಸಾಕಿ ಹಿರೋಶಿಮಾದ
ಕುರುಡು ಕೆಪ್ಪರ ಭೀತಿ
ರಾತ್ರಿ ಈಸ್ಟರ್ ನ ಭರ್ಜರಿ ಭೋಜನ
ಬೆಳಿಗ್ಗೆ ರಕ್ತ ಕಾರಿ ಸತ್ತರು
ಗಡಿವಲಯದ ಗ್ರಾಮಗಳು
ಶೆಲ್ ದಾಳಿಗೆ ಸುಟ್ಟು ಕರಕಲು
ಮಕ್ಕಳ ಮಹಿಳೆಯರ ಅರಚಾಟ
ಫೋನಿನ್ ಗಂಟೆ ಬಾರಿಸಿದಾಗಲೆಲ್ಲ
ಹೆದರುತ್ತಾರೆ ಮಡದಿ ಮಕ್ಕಳು
ಮಸಣದ ಗುಂಡಿಗಳ ನೆನಪು
ದಾರಿಯುದ್ದಕ್ಕೂ ಬಿದ್ದಿವೆ
ಎಲವು ಡೌವುಗಿಗಳು
ಕೊಂದವರ ಅಟ್ಟಹಾಸ
ಸತ್ತವರ ಶೋಕ ಸಭೆ ಪ್ರತಿಭಟನೆ.

ಒಮ್ಮೆ ಕೇಳಬೇಕಿದೆ
ಕಳಿಂಗ ಗೆದ್ದ ಮೇಲೂ
ವಿರಕ್ತನದ ಅಶೋಕನನ್ನು
ಜಗವೇ ಗೆಲ್ಲಲು ಹೋಗಿ
ಹೆಣದ ಪೆಟ್ಟಿಗೆಯಲ್ಲಿ ಮಲಗಿದ
ಅಲೆಕ್ಸಾಂಡರ್ ಚಕ್ರವರ್ತಿಯನ್ನು
ಗುಲಗಂಚಿ ಕಣ್ಣಿನ ಜಗದಂಬೆಯನ್ನು
ಏಕೆ ಈ ಯುದ್ಧ ?
ಯಾವ ಸಾಹಸ ಸ್ವಾರ್ಥಕೆ
ಪ್ರಾಣಿ ಪಶು ಪಕ್ಷಿಗಳು
ಒಂದಾಗುವ ಸಮಯದಲ್ಲಿ
ಮನುಷ್ಯ ಮನುಷ್ಯರ ಕೊಲ್ಲುವ
ಯುದ್ಧ ರಣ ನೀತಿ
ಕೇಳ ಬೇಕಿದೆ ಒಮ್ಮೆ
ಬುದ್ಧ ಬಸವ ಏಸು ಮಹಮ್ಮದರನ್ನು
ಗೆದ್ದು ಬೀಗಿದವರನ್ನು
ಸೋತು ಸತ್ತವರನ್ನು
ವಿಶ್ವ ಯುದ್ಧಕ್ಕೆ ಸಿದ್ಧರಾದವರನ್ನು
ಏಕೆ ಬೇಕು ಈ ಯುದ್ಧ?
ಮತ್ತೆ ಮತ್ತೆ ಇತಿಹಾಸ
ಮರುಕಳಿಸಬಹುದು
ಕನಸುಗಳು ಪುಡಿಯಾಗುವವು
ಹಿಟ್ಲರ್ ಬೈಬಲ್ ಓದುತ್ತಿರುವವನು
ನಾಳೆ ಏನಾಗುವುದೋ ಗೊತ್ತಿಲ್ಲ
ಇಂದು ಮಲಗೋಣ
ಬದುಕುಳಿದರೆ ನಾಳೆ ಇರೋಣ
ಇಲ್ಲಾ ಇಂದೇ ಆಲ್ ವಿದಾ
 ಚರಮಗೀತೆ ಹಾಡೋಣ


ಡಾ ಶಶಿಕಾಂತ ಪಟ್ಟಣ ರಾಮದುರ್ಗ 

About The Author

3 thoughts on “ಡಾ ಶಶಿಕಾಂತ ಪಟ್ಟಣ ರಾಮದುರ್ಗ “ಮರುಕಳಿಸುತಿದೆ””

  1. ಸಂತೋಷ್ ಹೆಗಡೆ

    ಕ್ರಾಂತಿಕಾರಕ ಕವನಗಳನ್ನು ಪ್ರಕಟ ಮಾಡಿ ಕನ್ನಡ ಓದುಗರನ್ನು ಜಾಗೃತಗೊಳಿಸುತ್ತಿರುವ ತಮಗೆ ಹಾಗೂ ಕವಿ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ ಇವರಿಗೆ ಧನ್ಯವಾದಗಳು

  2. ಗೀತಾ ಪಾಟಿಲ ಹುಬ್ಬಳ್ಳಿ

    ಸರ್ ನಿಜಕ್ಕೂ ತುಂಬಾ ಅರ್ಥಪೂರ್ಣ ಕಾವ್ಯ ಇದಾಗಿದೆ

  3. ಸುತ್ತಣ ಪರಿಸ್ಥಿತಿಗೆ ತಕ್ಷಣವೇ ಸ್ಪಂದಿಸುವವರೇ ನಿಜವಾದ ಬರಹಗಾರರು. ಯುದ್ದದ ಗಂಭೀರತೆಯನ್ನು ತಮ್ಮ ಕವನದಲ್ಲಿ ನಮಗೆ ಕಣ್ಣಿಗೆ ಕಟ್ಟುವಂತೆ ಹೇಳುತ್ತಾ ನಿಜವಾದ ಕಳಕಳಿಯನ್ನು ವ್ಯಕ್ತಪಡಿಸಿದ್ದೀರಿ

    ಸುತೇಜ

Leave a Reply

You cannot copy content of this page

Scroll to Top