ಮಹಿಳಾದಿನದ ವಿಶೇಷ
ಶ್ರೀದೇವಿ. ಮ. ಗುಮ್ಮಗೋಳ
ಮಾನಿನಿಯ ಮನ


ಮಾರಿಯೆಂದರು
ಮಾಯಾಂಗನಿ ಎಂದು ಮೊದಲಿಸಿದರೂ….
ಅರಿವಿಲ್ಲದೆ ಅದೇ ಮಾಯಾಜಾಲದಲಿ
ಬಂದಿಯಾದರೂ ಆ ಚಕ್ರವ್ಯೂಹ ಭೇದಿಸಿದಳು ನೀನು…
ಬಾಯಬಡಿಕಿ ಎಂದರು
ಎಲ್ಲ ತಿಳಿದ ಮಳ್ಳಿ ಎಂದರೂ….
ಹೊರ ಪ್ರಪಂಚದಲ್ಲಿದ್ದು
ಏನೂ ಅರಿದ ಕಪ್ಪೆಯಂತಿದ್ದವಳು….
ಸಂಸಾರವೆಂಬ ಬಾವಿಯೊಳಗೆ
ಎಲ್ಲವ ಅರಿತು ಮೌನವಾದವಳು ನೀನು…
ಬುದ್ದಿ ಮೊನಕಾಲ ಕೆಳಗೆಂದರು
ಮತಿಹೀನಳೆಂದರೂ…
ದೇಶದ ಚುಕ್ಕಾಣಿ ಹಿಡಿದವಳು ನೀನು…
ದೇಶದ ಚಿತ್ತ ಹರಿಸಿ ವಿತ್ತ ಓದಿದವಳು ನೀನು…..
ಬಜಾರಿ ಎಂದರೂ
ಹೆಮ್ಮಾರಿ ಎಂದರೂ…..
ಕಟ್ಟಳೆಗಳ ಗೆರೆ ಎಳೆದರೂ…
ಇನಿಯನ ಬರುವಿಗಾಗಿ ಶಬರಿಯಂತೆ ಕಾದವಳು ನೀನು….
ದೇಶಭಕ್ತಿ, ದೈವಭಕ್ತಿ ಪ್ರೇಮಭಕ್ತಿಯ ಮೆರೆದು ಸ್ಪುಟವಾದವಳು ನೀನು….
ಆಟ, ಓಟ, ಪಾಠ ಎಲ್ಲಂದರಲ್ಲೂ ಸೈ ಎನಸಿ
ಇತಿಹಾಸ ಪುಟವಾದವಳು ನೀನು…
ಮನೆಗೆ ಭಾರವೆಂದರೂ…
ಇದಿಯಾದವಳೆಂದರೂ…
ಪ್ರೀತಿ ಅಕ್ಕರೆಯ ತೋರಿ ಸಾಕಿ ಸಲುಹಿದ
ಮಗನೇ ಬೆನ್ನು ತಿರುಗಿಸಿದಾಗ
ಹೆತ್ತವರನ್ನೆ ದೂಡಿ ಬಿಸಾಕಿದಾಗ
ಹೆಗಲು ಕೊಟ್ಟವಳು ನೀನು…
ಅಕ್ಕರೆಯಿಂದ ಆಸರೆಯಾಗಿ ಸಲುಹಿದವಳು ನೀನು..
ಕಡೆಗೆ ಸತ್ತಾಗ ಅದೇ ಜೀವಗಳಿಗೆ ಅಳುತ
ಹಿಡಿ ಮಣ್ಣು ಹಾಕಿದವಳು ನೀನು..
ಅಬಲೆಯೆಂದರೂ….
ಮೂಲ ಹುಡಕಬೇಡವೆಂದರೂ…
ಮಾನಿನಿ ನಿನ್ನ ಬಾಳಲ್ಲಿ
ಮಾಗಿ ಹಣ್ಣಾದವಳು ನೀನು…
ಬಾಗಿ ಸಣ್ಣಾದವಳು ನೀನು…
ತೂಗಿ ಹೊನ್ನಾದವಳು ನೀನು…
ತನ್ನತನವ ತೊರೆದು
ಇತರರಿಗಾಗಿ ಬಾಳಿದವಳು ನೀನು…
ಕೊನೆಗೆ ನಿನ್ನ ಅಸ್ತಿತ್ವ ನೀನೆ ಹುಡುಕುತ
ಮಣ್ಣಾದವಳು ನೀನು….

ಶ್ರೀದೇವಿ. ಮ. ಗುಮ್ಮಗೋಳ
ಶ್ರೀದೇವಿ. ಮ. ಗುಮ್ಮಗೋಳ



