ಮಹಿಳಾ ದಿನದ ವಿಶೇಷ
ಕಲ್ಪನಾ ಎಸ್ ಪಾಟೀಲ
ನಾವೇಕೆ ಹೀಗೆ.!?


ಸಂಬಂಧಗಳನೆಲ್ಲ ಅಳೆದು
ತೂಗುವದಿಲ್ಲ, ಎಲ್ಲರೂ
ನನ್ನವರೇ ಎನ್ನುವೆವಲ್ಲ, ನಾವೇಕೆ ಹೀಗೆ.?!
ವೈಯಕ್ತಿಕ ಆಸೆ, ಕನಸುಗಳನೆಲ್ಲ
ಹತ್ತಿಕ್ಕಿ ಬದುಕ ನಡೆಸಿದೆವಲ್ಲ
ತಮಗಾಗಿ ಬದುಕಲಿಲ್ಲ, ನಾವೇಕೆ ಹೀಗೆ.!?
ತವರುಮನೆಯ ತೊರೆಯಬೇಕು
ಗಂಡನಮನೆಯಲಿ ಬೆರೆಯಬೇಕು
ಇಲ್ಲಿಯೂ ನಮಗಾಗಿ ಅಲ್ಲ, ನಾವೇಕೆ ಹೀಗೆ.!?
ಸಣ್ಣ ಸಣ್ಣ ಕ್ಷಣಗಳ ಆನಂದಿಸುವಳು
ಅಡುಗೆ ಮನೆಯೇ ತನ್ನದೆನ್ನುವಳು
ನಮಗೆಲ್ಲಾ ಅದ್ಯಾಕ ಎನ್ನುವಳು ಅವಳೇಕೆ ಹೀಗೆ.?!
ಮಾತಿಗೆ ಮೊದಲೇ ಸಹನಾಮೂರ್ತಿಯಾಗಿಹಳು
ಸಿಟ್ಟು ಕೋಪವ ಒಳಗೊಳಗೆ ನುಂಗುವಳು
ತನ್ನ ರಕ್ತವ ಸುಟ್ಟುಕೊಳ್ಳುವಳು ಇವಳೇಕೆ ಹೋಗೆ.?!
ಗಂಡ ಗದರಿದರೂ ಮರಳಿ ಗದರಿಸದವಳು
ಮಕ್ಕಳು ಹೆದರಿಸಿದರೂ ಹೆದರುವಳು
ಮನಕೆ ಘಾಸಿಯಾದರೂ ಸಹಿಸುವಳು ಇವಳೇಕೆ ಹೀಗೆ.!?
ಇಂದು ಮಹಿಳಾ ದಿನಾಚರಣೆಯಂತೆ
ಒಂದಿನಕೆ ಆಚರಣೆಗಾದರೆ
ನಿತ್ಯಕೆ ಅದಾವ/ರ ಆಚರಣೆ.!?

ಕಲ್ಪನಾ ಎಸ್ ಪಾಟೀಲ




Simply speechless for ur lines
So meaningful soooo heart touching
Just touched my heart ❤️