ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ದೇಶ – ದೇಶ ನಡುವೆ ದ್ವೇಷ ಜ್ವಾಲೆ ಆರಿಸುವವರು ಯಾರಿಲ್ಲಿ
ಮುಗಿಲು ಮುಟ್ಟಿದ ಅಳಲು ಆಕ್ರಂದನ ಆಲಿಸುವವರು ಯಾರಿಲ್ಲಿ

ಯುದ್ಧ ರಣಾರ್ಭಟಕೆ ಬೆಚ್ಚಿ ಬಿದ್ದಿದೆ ಮನುಕುಲವು
ಜಗದಗಲ ಹರಡಿದ ಅಶಾಂತಿಯ ಅಳಿಸುವವರು ಯಾರಿಲ್ಲಿ

ಬಲಿಷ್ಠತೆ ಮೆರೆದು ದೀನರಿಲ್ಲಿ ಬಲಿಪಶುಗಳಾದರು
ರಕ್ತ- ಸಿಕ್ತದಲಿ ಸಿಕ್ಕ ಹೆಣಗಳ ಎಣಿಸುವವರು ಯಾರಿಲ್ಲಿ

ಅಸೂಯೆ ಅಹಂನ ಪ್ರದರ್ಶನ ಕರಾಮತ್ತೋ
ಅಮಾಯಕರ ಜೀವ ಬೆಲೆ ತಿಳಿಸುವವರು ಯಾರಿಲ್ಲಿ

ಕ್ರಾಂತಿ ಕಹಳೆ ಹೊತ್ತಿಸಿ ಕ್ಷಿಪಣಿಗಳ ಮಳೆಗೈಯುತಿವೆ
ಹಲ್ಲೋಲ- ಕಲ್ಲೋಲ ಜಗತ್ತು ದಂಡಿಸುವವರು ಯಾರಿಲ್ಲಿ

ಭಯದ ಭೀತಿ ಆವರಿಸಿದೆ ಅಳಿದುಳಿದ ಮನಗಳಲಿ  
ವಿರಾಮವಿಲ್ಲದೆ ವಿರಾಜಿಸುತಿದೆ ವಿನಾಶ ಕದನ ತ್ಯಜಿಸುವವರು ಯಾರಿಲ್ಲಿ

ವಿಶ್ವದಾದ್ಯಂತ ಶಾಂತಿ ಸ್ನೇಹ – ಭಾತೃತ್ವ ನೆಲೆಸಲೆಂದು ಪ್ರಾರ್ಥಿಸಿಬೇಕಿದೆ ಇಂದಿರೆ
ದಾಳಿ – ಪ್ರತಿದಾಳಿಗೆ ನಲುಗಿದವರ ರಕ್ಷಿಸುವವರು ಯಾರಿಲ್ಲಿ


About The Author

2 thoughts on “ಇಂದಿರಾ ಕೆ ಅವರ ಗಜಲ್”

  1. ತಮ್ಮ ಕವನ ಅತ್ಯುತ್ತಮವಾಗಿ ಮೂಡಿಬಂದೇ ಮೇಡಂ.
    ತಮ್ಮೊಳಗಿನ ಕವಯಿತ್ರಿ ಸದಾ ಹೀಗೆ ಮುಂದುವರೆಯಲಿ….
    ಒಂದು ಸಾಲಿನಲ್ಲಿ ಅದು ಅಲ್ಲೋಲ ಆಗಬೇಕಿತ್ತು.

  2. ತಮ್ಮ ರೆಸಲ್ ಅದ್ಭುತವಾಗಿದೆ ಮೇಡಂ. ತಮ್ಮ ಸಾಹಿತ್ಯದ ಪಯಣ ನಿತ್ಯ, ನಿರಂತರ ಮತ್ತು ನೂತನವಾಗಿರಲಿ.

Leave a Reply

You cannot copy content of this page

Scroll to Top