ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ಒಬ್ಬ ಅಮ್ಮನ ಕಥೆ

ಧಾರಾವಾಹಿ ಸಂಗಾತಿ-108 ಒಬ್ಬ ಅಮ್ಮನ ಕಥೆ ರುಕ್ಮಿಣಿ ನಾಯರ್ ಆತಂಕದಲ್ಲಿಯೇ ರಾತ್ರಿ ಕಳೆದ ಕುಟುಂಬ “ಮುಂದಿನ ಬಾರಿ ಈ ತರದ ಯಾವ ಅದೃಷ್ಟವೂ ಇವರನ್ನು ಖಂಡಿತಾ ಕಾಪಾಡುವುದಿಲ್ಲ…. ಸರಿಯಾಗಿ ಪ್ಲಾನ್ ಮಾಡಿಕೊಳ್ಳೋಣ”…. ಎಂದು ಮತ್ತೊಬ್ಬ ಹೇಳಿದ. ಆಗ ಇನ್ನೊಬ್ಬ ಹೌದೆನ್ನುವಂತೆ ತಲೆ ಆಡಿಸಿದ. ಮಾತನಾಡುತ್ತಲೇ ಆ ಇಬ್ಬರು ಯುವಕರ ಸಂಭಾಷಣೆಯನ್ನು ಅಕ್ಕತಂಗಿಯರು ಗಮನಿಸಿದರು. ಅವರ ಹಣೆಯಲ್ಲಿ ಚಿಂತೆಯ ಗೆರೆಗಳು ಮೂಡಿದವು. ಆದರೂ ಅದನ್ನು ತೋರ್ಪಡಿಸಿಕೊಳ್ಳದೇ ಎಂದಿನಂತೆ ಸಹಜವಾಗಿ ಇರುವ ಪ್ರಯತ್ನ ಮಾಡಿದರು. ಅವರು ಹೇಳಿದ ಮಾತುಗಳು ತಮಗಲ್ಲವೇನೋ ಅನ್ನುವಂತೆ ಕಿಟಕಿಯಿಂದ ಆಚೆ ನೋಡುತ್ತಾ ಕುಳಿತುಕೊಂಡರು. ಆದರೆ ಮನಸ್ಸಿನಲ್ಲಿ ಆತಂಕ ಮನೆ ಮಾಡಿತ್ತು. ಅಕ್ಕನ ಕೈಯನ್ನು ತಂಗಿ, ತಂಗಿಯ ಕೈಯನ್ನು ಅಕ್ಕ ಬಲವಾಗಿ ಹಿಡಿದು ಮೌನವಾಗಿ ಒಬ್ಬರಿಗೊಬ್ಬರು ಧೈರ್ಯ ಹೇಳಿಕೊಂಡರು.  ಇಬ್ಬರ ಮನಸ್ಸು ಭಾರವಾಯಿತು. ತಮ್ಮ ಬಸ್ ನಿಲ್ದಾಣ ಬಂದಾಗ ಅಂಜುತ್ತಲೇ ಇಳಿದರು. ಆದರೆ ಹಿಂತಿರುಗಿ ನೋಡಲಿಲ್ಲ. ಸ್ವಲ್ಪ ದೂರ ಕ್ರಮಿಸಿದ ನಂತರ ತಿರುಗಿ ನೋಡಿದರು. ಅವರ ಜೊತೆ ಈ ಬಸ್ ನಿಲ್ದಾಣದಲ್ಲಿ ದಿನವೂ ಇಳಿಯುವ ಇತರೆ ಪ್ರಯಾಣಿಕರಿದ್ದರೇ ಹೊರತು ಆ ಇಬ್ಬರು ಯುವಕರು ಕಾಣಲಿಲ್ಲ. ಇಬ್ಬರೂ ನೆಮ್ಮದಿಯ ನಿಟ್ಟುಸಿರೊಂದನ್ನು ಬಿಟ್ಟು ವೇಗವಾಗಿ ಹೆಜ್ಜೆ ಹಾಕುತ್ತಾ ಆತುರದಿಂದ ಮನೆಯ ಕಡೆಗೆ ನಡೆದರು. ಮನೆ ತಲುಪಿದಾಗ ಅಮ್ಮ ದೇವರಿಗೆ ದೀಪ ಹಚ್ಚಿ ಪ್ರಾರ್ಥನೆ ಮಾಡುತ್ತಿದ್ದುದು ಕಂಡರು. ಅಕ್ಕ-ತಂಗಿಯರಿಬ್ಬರೂ ಬಟ್ಟೆ ಬದಲಿಸಿ, ಕೈಕಾಲು ಮುಖ ತೊಳೆದು ತಾವೂ ದೇವರಿಗೆ ಕೈ ಮುಗಿದರು.  ಕಣ್ಣು ಮುಚ್ಚಿ ಪ್ರಾರ್ಥಿಸುತ್ತಿದ್ದರೂ ಸುಮತಿಗೆ ಮಕ್ಕಳಿಬ್ಬರ ಆಗಮನದ ಅರಿವಾಯಿತು. ಪ್ರಾರ್ಥನೆ ಮುಗಿದ ನಂತರ ಮಕ್ಕಳಿಬ್ಬರನ್ನು ಗಮನಿಸಿದಳು. ಇಂದು ಕೂಡ ಅವರ ಮುಖ ಬಾಡಿತ್ತು. ಬಹುಶಃ ನಿನ್ನಯ ಘಟನೆಯನ್ನು ನೆನೆದು ಮಕ್ಕಳು ಈ ರೀತಿ ಇರಬಹುದು ಎಂದುಕೊಂಡಳು. ಆದರೂ….” ಏನಾಯ್ತು ಮಕ್ಕಳೇ”…. ಎಂದು ಕೇಳಿದಳು. ಅಕ್ಕ-ತಂಗಿಯರಿಬ್ಬರು ಪರಸ್ಪರ ನೋಡಿಕೊಂಡು ಹೇಳೋಣ ಎನ್ನುವಂತೆ ಕಣ್ಣಲ್ಲಿ ಸನ್ನೆ ಮಾಡಿಕೊಂಡರು. ಇಬ್ಬರೂ ಒಕ್ಕೊರಲಿನಿಂದ…. “ಅಮ್ಮಾ….. ನಮ್ಮನ್ನು ಹಿಂಬಾಲಿಸಿ ಬಂದು ತೊಂದರೆ ಕೊಟ್ಟಂತಹ ಯುವಕರು ಯಾರೆಂದು ತಿಳಿಯಿತು”…. ಎಂದು ಮಕ್ಕಳು ಹೇಳಿದಾಗ, ಸುಮತಿ ಕಾತರದಿಂದ ಯಾರವರು?… ನಿಮಗೆ ಪರಿಚಿತರೇ?… ಅಥವಾ ಹೊರಗಿನವರೇ?… ಎಂದು ಕೇಳಿದಳು. ಆಗ ತಮಗೆ ತಿಳಿದಿರುವ ವಿಷಯಗಳನ್ನು ಮಕ್ಕಳು ತಿಳಿಸಿದರು. ಜೊತೆಗೆ ತಾವು ಬಸ್ಸಿನಲ್ಲಿದ್ದಾಗ ಅವರು ಮಾತನಾಡಿಕೊಂಡ ಬಗ್ಗೆಯೂ ಹೇಳಿದರು. ಮಕ್ಕಳ ಮಾತುಗಳನ್ನು ಆಲಿಸಿದ, ಸುಮತಿ ಹೌಹಾರಿದಳು. ಮುಂದೆ ಏನು ಮಾಡುವುದು? ಎನ್ನುವ ಚಿಂತೆಯು ಅವಳ ಮನವನ್ನು ಆವರಿಸಿತು. ದೇವರೇ ಗಂಡಿನಾಶ್ರಯವಿಲ್ಲದ ನಮ್ಮ ಬದುಕು ಎಷ್ಟೊಂದು ದುಸ್ತರವಾಗುತ್ತಿದೆ. ಆರೋಗ್ಯವಿರದ, ಅಬಲೆಯಾದ ನಾನು ನನ್ನ ಮಕ್ಕಳನ್ನು ಹೇಗೆ ದುಷ್ಟರಿಂದ ಕಾಪಾಡಲಿ.? ಒಂದು ಕಾಲದಲ್ಲಿ ಸಣ್ಣ ವಯಸ್ಸಿನಲ್ಲಿಯೇ ವಿಧವೆಯಾದ ನನ್ನನ್ನು ನಾನು ಕಾಪಾಡಿಕೊಳ್ಳಲು ಬಹಳ ಕಷ್ಟಪಟ್ಟಿದ್ದೇನೆ…. ನನಗಿರುವವರು ನಾಲ್ಕು ಹೆಣ್ಣು ಮಕ್ಕಳು…. ಒಬ್ಬಳದು ಮದುವೆಯಾಗಿದೆ…. ಉಳಿದ ಹೆಣ್ಣು ಮಕ್ಕಳಿಗೆ ಒಂದು ದಾರಿಯಾಗುವವರೆಗೂ ಹೇಗೆ ನಾನು ಕಾಪಾಡಲಿ? ನನ್ನ ಮಕ್ಕಳು ಕೂಡ ಇಂತಹವರಿಂದ ತಮ್ಮನ್ನು ರಕ್ಷಿಸಿಕೊಳ್ಳುವುದು ಹೇಗೆ? ಕೃಷ್ಣಾ ನೀನೇ ಏನಾದರೂ ಒಂದು ದಾರಿ ತೋರು ನಮಗೆ ಎಂದು ಮೌನವಾಗಿ ಕೃಷ್ಣನನ್ನು ಪ್ರಾರ್ಥಿಸುತ್ತಿದ್ದಳು. ಅಮ್ಮನ ಚಿಂತಾಕ್ರಾಂತವಾದ ಮುಖವನ್ನು ನೋಡಿ ಮಕ್ಕಳಿಬ್ಬರೂ ಅಮ್ಮನ ಹೆಗಲ ಮೇಲೆ ಕೈಯಿಟ್ಟು ಏನು ಯೋಚಿಸುತ್ತಿರುವೆ? ಎಂಬಂತೆ ಅವಳ ಮುಖ ನೋಡಿದರು. ಸುಮತಿ ಬಾರದ ಮುಗುಳ್ನಗೆಯನ್ನು ಮುಖದ ಮೇಲೆ ತಂದುಕೊಳ್ಳುತ್ತಾ….”ಹೆದರಬೇಡಿ ಮಕ್ಕಳೇ, ದೇವರು ನಮಗೆ ಏನಾದರೂ ಒಂದು ದಾರಿ ತೋರುವನು. … ಬನ್ನಿ ಮಕ್ಕಳೇ ಊಟ ಮಾಡೋಣ”… ಎಂದು ಅಡುಗೆ ಮನೆಯ ಕಡೆಗೆ ಮಕ್ಕಳನ್ನು ಬರುವಂತೆ ಸೂಚಿಸಿದಳು. ಇಬ್ಬರೂ ಸುಮತಿಯ ಜೊತೆಗೆ ಅಡುಗೆ ಮನೆಗೆ ಬಂದರು. ತಾವು ಕುಳಿತುಕೊಳ್ಳುವ ಮಣೆಯನ್ನು ಇಟ್ಟುಕೊಂಡು ಅಮ್ಮನಿಗೂ ಒಂದು ಮಣೆಯನ್ನು ಇಟ್ಟರು. ಸುಮತಿ ಇಬ್ಬರಿಗೂ ಊಟ ಬಡಿಸಿದಳು. ತಾನು ತಟ್ಟೆಯಲ್ಲಿ ಊಟವನ್ನು ಹಾಕಿಕೊಂಡು ಅನ್ಯಮನಸ್ಕಳಾಗಿ ಏನನ್ನೋ ಯೋಚಿಸುತ್ತಾ ಊಟ ಮಾಡುತ್ತಿದ್ದಳು. ಇದ್ದಕ್ಕಿದ್ದ ಹಾಗೆ ಅನ್ನವು ಅವಳ ನೆತ್ತಿಗೇರಿತು. ಜೋರಾಗಿ ಕೆಮ್ಮಲು ಪ್ರಾರಂಭಿಸಿದಳು. ಮಕ್ಕಳಿಬ್ಬರೂ ನೀರಿನ ಲೋಟವನ್ನು ಅಮ್ಮನೆಡೆಗೆ ಹಿಡಿದರು. ಸುಮತಿಯ ಕಣ್ಣುಗಳಲ್ಲಿ ನೀರು ತುಂಬಿ ಕನ್ನಡಕದ ಮೇಲೆ ಬಿದ್ದು ದೃಷ್ಟಿ ಮಂಜಾಯಿತು. ತನ್ನ ದಪ್ಪ ಕನ್ನಡಕವನ್ನು ತೆಗೆದು ಸೀರೆಯಿಂದ ಒರೆಸಿ ಪುನಹ ಹಾಕಿಕೊಳ್ಳುತ್ತಾ ನೀರನ್ನು ಕುಡಿದಳು. ಊಟ ಮುಗಿಸಿ, ಪಾತ್ರೆ ತೊಳದಿಟ್ಟು ಮಕ್ಕಳ ಜೊತೆಗೆ ಹೊರಗೆ ವರಾಂಡದಲ್ಲಿ ಬಂದು ಕುಳಿತಳು.  ಮಕ್ಕಳಿಬ್ಬರೂ ಅಮ್ಮನ ಅಕ್ಕಪಕ್ಕ ಕುಳಿತುಕೊಂಡು ಅಮ್ಮನ ಹೆಗಲ ಮೇಲೆ ತಲೆ ಇಟ್ಟುಕೊಂಡರು. ಅಮಾವಾಸ್ಯೆಯು ಹತ್ತಿರ ಬರುತ್ತಿದ್ದುದರಿಂದ ಆಗಸದಲ್ಲಿ ನಕ್ಷತ್ರಗಳು ಇನ್ನೂ ಹೆಚ್ಚು ಹೊಳಪಾಗಿ ಕಾಣುತ್ತಿದ್ದವು. ಸುಮತಿ ಗಿಡ ಮರಗಳ ನಡುವೆ ಆವರಿಸಿರುವ ಕತ್ತಲೆಯಲ್ಲಿ ಶೂನ್ಯತೆಯನ್ನು ನೋಡುತ್ತಾ, ಮನಸ್ಸಿನಲ್ಲಿ ಉಪಾಯವೊಂದು ಹೊಳೆದಂತಾಗಿ…. “ಮಕ್ಕಳೇ ನಾಳೆ ನೀವುಗಳು ಶಾಲಾ-ಕಾಲೇಜಿನಿಂದ ಹಿಂತಿರುಗಿ ಬರುವಾಗ ತೋಟದ ದೊಡ್ಡ ಬಂಗಲೆಯ ಗೇಟಿನ ಬಳಿ ಇಳಿದುಕೊಳ್ಳಿ….. ನಾನು ಶಾಲೆ ಮುಗಿದ ನಂತರ ಸಂಜೆ ಬಂದು ಅಲ್ಲಿ ಬಂಗಲೆಯ ಬಳಿ ನಿಮಗಾಗಿ ಕಾಯುತ್ತಿರುತ್ತೇನೆ….. ಸಾಹುಕಾರರನ್ನು ಕಂಡು ಮಾತನಾಡೋಣ…. ಅವರು ಏನಾದರೂ ಒಂದು ಪರಿಹಾರ ಸೂಚಿಸಬಹುದು”…. ಎಂದು ಸುಮತಿ ಮಕ್ಕಳಿಗೆ ಹೇಳಿದಳು. ಅಮ್ಮನ ಮಾತನ್ನು ಕೇಳಿದ ಮಕ್ಕಳು ಹಾಗೆಯೇ ಆಗಲಿ ಎನ್ನುವಂತೆ ತಲೆಯಾಡಿಸಿದರು. ಮನಸ್ಸಿನಲ್ಲಿ ಸಣ್ಣ ಆಶಾ ಭಾವನೆ ಹೊಳೆದಿದ್ದರಿಂದ ಸುಮತಿಯ ಮನಸ್ಸು ಸ್ವಲ್ಪ ತಿಳಿಯಾಯಿತು. ಏನಾದರೂ ಒಂದು ದಾರಿ ಖಂಡಿತಾ ಸಿಕ್ಕೇ ಸಿಗುತ್ತದೆ ಎನ್ನುವ ನಂಬಿಕೆಯಿಂದ ಮಕ್ಕಳಿಬ್ಬರನ್ನು ಕರೆದುಕೊಂಡು ಮನೆಯ ಒಳಗೆ ನಡೆದಳು. ಬಾಗಿಲ ಚಿಲಕವನ್ನು ಹಾಕಿ, ಇಬ್ಬರನ್ನೂ ತನ್ನ ಪಕ್ಕದಲ್ಲಿ ಮಲಗಿಸಿಕೊಂಡು ನಿದ್ರಿಸುವ ಪ್ರಯತ್ನ ಮಾಡಿದಳು. ಅಮ್ಮನ ತೋಳನ್ನು ತಲೆದಿಂಬಾಗಿಸಿಕೊಂಡು ಮಕ್ಕಳಿಬ್ಬರೂ ಅಮ್ಮನನ್ನು ಅಪ್ಪಿ ಮಲಗಿದರು. ದಿನವೂ ಮಲಗುವಾಗ ಸುಮತಿ ಮಕ್ಕಳಿಗೆ ಯಾವುದಾದರೊಂದು ನೀತಿ ಕಥೆಯನ್ನು ಹೇಳುತ್ತಿದ್ದಳು. ವಿಶೇಷವಾಗಿ ತನ್ನ ಇಷ್ಟದೈವ ಶ್ರೀ ಕೃಷ್ಣನ ಕಥೆಯನ್ನೇ ಹೆಚ್ಚಾಗಿ ಹೇಳುತ್ತಿದ್ದಳು. ಮಕ್ಕಳಿಗೂ ಅಮ್ಮ ಹೇಳುವ ಶ್ರೀ ಕೃಷ್ಣನ ಕಥೆ ಎಂದರೆ ಬಹಳ ಇಷ್ಟವಾಗುತ್ತಿತ್ತು. ಅಮ್ಮ ಹೇಳುತ್ತಿದ್ದ ಕಥೆಯನ್ನು ಕೇಳುತ್ತಾ, ಹೂಂಗುಟ್ಟುತ್ತಾ ಮಕ್ಕಳಿಬ್ಬರೂ ನಿದ್ರೆಗೆ ಜಾರಿದರು. 

Read Post »

ಕಾವ್ಯಯಾನ

“ಹೃದಯ ವೀಣೆ” ಡಾ ಗೀತಾ ದಾನಶೆಟ್ಟಿ ಬಾಗಲಕೋಟೆ

ಕಾವ್ಯ ಸಂಗಾತಿ “ಹೃದಯ ವೀಣೆ” ಡಾ ಗೀತಾ ದಾನಶೆಟ್ಟಿ ಬಾಗಲಕೋಟೆ ಶುರುವಾಗಿದೆಆಸೆಗಳ ಆಂದೋಲನಅತಿಯಾಗಿಹೇಳಲಾಗದೆಉಳಿದಿವೆ ಅದೆಷ್ಟೋಮಾತುಗಳುಮುದುರಿ ಹೋಗಿವೆಎದೆಯ ಗೂಡೊಳಗೆಬಂದೊಮ್ಮೆ ಮೀಟುಹೃದಯ ವೀಣೆಕಾಯುತಿವೆ ನಿನ್ನಬರುವಿಗಾಗಿ ಭಾವಲತೆಗಳುನೀ ಬಂದು ಸಂತೈಸುಮಿಡಿಯುವ ಮನವಬಂದುಬಿಡೊಮ್ಮೆಅಂತರಂಗದ ಹೂ ಬನಕೆಮಧುವರಿಸಿ ಬರುವ ದುಂಬಿಯಂತೆಮಿಲನವಾಗಲಿಮಧುರ ಪ್ರೇಮಕಾವ್ಯಕಾಯುತಿದೆ ಮನವುಬಾಹುಬಂಧನದ ಬೆಸುಗೆತವಕದ ತಲ್ಲಣಕೆಮುನಿಸದೆಕಟ್ಟಿ ಬಿಡುಹೃದಯಕ್ಕೆ ಸೇತುವೆ ಡಾ ಗೀತಾ ದಾನಶೆಟ್ಟಿ ಬಾಗಲಕೋಟೆ

“ಹೃದಯ ವೀಣೆ” ಡಾ ಗೀತಾ ದಾನಶೆಟ್ಟಿ ಬಾಗಲಕೋಟೆ Read Post »

ಅಂಕಣ ಸಂಗಾತಿ, ಸಾವಿಲ್ಲದ ಶರಣರು

ಸಾವಿಲ್ಲದ ಶರಣರು ಮಾಲಿಕೆ,”ದಕ್ಷ ಆಡಳಿತಗಾರ ಪರಾಕ್ರಮಿ ಅರಸು ಶಿವಪ್ಪ ನಾಯಕ” ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಪುಣೆ

ಶರಣರ ಸಂಗಾತಿ ಸಾವಿಲ್ಲದ ಶರಣರು ಮಾಲಿಕೆ, ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಪುಣೆ “ದಕ್ಷ ಆಡಳಿತಗಾರ ಪರಾಕ್ರಮಿ ಅರಸು ಶಿವಪ್ಪ ನಾಯಕ” ಕರ್ನಾಟಕ ಮತ್ತು ಭಾರತದ ಇತಿಹಾಸದಲ್ಲಿ ಸುವರ್ಣಯುಗ ಎನ್ನುವುದು ಕೆಳದಿ ಅರಸರ ಕಾಲದಲ್ಲಿ. ಕೃಷಿ ವಾಣಿಜ್ಯ ತೆರಿಗೆ ಸುಧಾರಣೆಗಳನ್ನು ಅನುಷ್ಠಾನಗೊಳಿಸಿ ಸಮೃದ್ಧ ರಾಜ್ಯವನ್ನು ಮಾಡಿದ ಕೀರ್ತಿ ಕೆಳದಿ ಅರಸರಿಗೆ ಸಲ್ಲುತ್ತದೆ. ಶಿವಪ್ಪ ನಾಯಕ (ಶಿವಪ್ಪ ನಾಯಕ) (1645–1660), ಕೆಳದಿ ಶಿವಪ್ಪ ನಾಯಕ ಎಂದು ಜನಪ್ರಿಯವಾಗಿ ನಾಯಕರು, ಒಬ್ಬ ಭಾರತೀಯ ರಾಜ ಮತ್ತು ಕೆಳದಿ ನಾಯಕ ಸಾಮ್ರಾಜ್ಯದ ಆಡಳಿತಗಾರ. ಕೆಳದಿ ನಾಯಕರು 16 ನೇ ಶತಮಾನದ ಉತ್ತರಾರ್ಧದಲ್ಲಿ ಭಾರತದ ಕರ್ನಾಟಕದ ಕರಾವಳಿ ಮತ್ತು ಮಲೆನಾಡು (ಬೆಟ್ಟ) ಜಿಲ್ಲೆಗಳಲ್ಲಿ ವಿಜಯನಗರ ಸಾಮ್ರಾಜ್ಯದ ನಂತರದ ಲಿಂಗಾಯತ ಉತ್ತರಾಧಿಕಾರಿಗಳಾಗಿದ್ದರು. ಅವರ ಉತ್ತುಂಗದಲ್ಲಿ, ನಾಯಕರು 1763 ರಲ್ಲಿ ಮೈಸೂರು ಸಾಮ್ರಾಜ್ಯಕ್ಕೆ ಶರಣಾಗುವ ಮೊದಲು, ಆಧುನಿಕ ಕರ್ನಾಟಕದ ಕರಾವಳಿ, ಬೆಟ್ಟ ಮತ್ತು ಕೆಲವು ಆಂತರಿಕ ಜಿಲ್ಲೆಗಳನ್ನು ( ಬಯಲುಸೀಮೆ ) ಒಳಗೊಂಡ ಸ್ಥಾಪಿತ ಸಾಮ್ರಾಜ್ಯವನ್ನು ನಿರ್ಮಿಸಿದರು,   ಕೆಳದಿ ಅರಸರು ತೆರಿಗೆಯನ್ನು  ಪರಿಚಯಿಸಿದರು.  ಯುದ್ಧ ಮತ್ತು ವಿಜಯಗಳು ಶಿವಪ್ಪ ನಾಯ್ಕ ಒಬ್ಬ ಸಮರ್ಥ ಆಡಳಿತಗಾರ ಮತ್ತು  ಶೂರ ಸೈನಿಕ . ಅವರು 1645 ರಲ್ಲಿ ಸಿಂಹಾಸನವನ್ನು ಏರಿದರು. ಈ ಸಮಯದಲ್ಲಿ, ವೆಲ್ಲೂರಿನಿಂದ ಆಳಿದ ವಿಜಯನಗರ ಸಾಮ್ರಾಜ್ಯದ ಕೊನೆಯ ದೊರೆ ಶ್ರೀರಂಗರಾಯ III ಬಿಜಾಪುರ ಸುಲ್ತಾನರಿಂದ ಸೋಲಿಸಲ್ಪಟ್ಟರು ಮತ್ತು ಶಿವಪ್ಪನ ಆಶ್ರಯವನ್ನು ಪಡೆದರು. ಪೋರ್ಚುಗೀಸರ ಬೆದರಿಕೆಯನ್ನು 1653 ರ ಹೊತ್ತಿಗೆ ತೊಡೆದುಹಾಕಲಾಯಿತು ಮತ್ತು ಮಂಗಳೂರು, ಕುಂದಾಪುರ ಮತ್ತು ಹೊನ್ನಾವರ ಬಂದರುಗಳನ್ನು ಕೆಳದಿ ನಿಯಂತ್ರಣಕ್ಕೆ ತರಲಾಯಿತು.  ಕನ್ನಡ ಕರಾವಳಿಯನ್ನು ಗೆದ್ದ ನಂತರ, ಅವರು ಆಧುನಿಕ ಕೇರಳದ ಕಾಸರಗೋಡು ಪ್ರದೇಶಕ್ಕೆ ದಂಡೆತ್ತಿ ಹೋಗಿ ನೀಲೇಶ್ವರದಲ್ಲಿ ವಿಜಯಸ್ತಂಭವನ್ನು ಸ್ಥಾಪಿಸಿದರು. ಚಂದ್ರಗಿರಿ, ಬೇಕಲ್, ಅಡ್ಕ ಕೋಟೆ, ಆರಿಕ್ಕಾಡಿ ಮತ್ತು ಮಂಗಳೂರಿನ ಕೋಟೆಗಳನ್ನು ಶಿವಪ್ಪ ನಾಯಕ ನಿರ್ಮಿಸಿದ. ನಂತರ ಅವರು ತುಂಗಭದ್ರಾ ನದಿಯ ಉತ್ತರಕ್ಕೆ ದಾಳಿ ಮಾಡಿದರು ಮತ್ತು ಆಧುನಿಕ ಧಾರವಾಡ ಜಿಲ್ಲೆಯಲ್ಲಿ ಬಿಜಾಪುರ ಸುಲ್ತಾನರಿಂದ ಪ್ರದೇಶವನ್ನು ವಶಪಡಿಸಿಕೊಂಡರು. ದಕ್ಷಿಣದಲ್ಲಿ, ಆಧುನಿಕ ಮೈಸೂರು ಜಿಲ್ಲೆಯ ಶ್ರೀರಂಗಪಟ್ಟಣಕ್ಕೆ ಅವನು ಆಕ್ರಮಣ ಮಾಡಿ ಮುತ್ತಿಗೆ ಹಾಕಿದಾಗ, ಅವನ ಸೈನ್ಯದಲ್ಲಿ ಸಾಂಕ್ರಾಮಿಕ ರೋಗವು ಅವನನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿತು.  ದಕ್ಷಿಣದಲ್ಲಿ, ಅವರು ಕರಾವಳಿ ಪ್ರದೇಶದ ಎಲ್ಲಾ ಪೋರ್ಚುಗೀಸ್ ಕೋಟೆಗಳನ್ನು ವಶಪಡಿಸಿಕೊಳ್ಳುವ ಮೂಲಕ ಕೆನರಾ ಪ್ರದೇಶದಲ್ಲಿ ಪೋರ್ಚುಗೀಸ್ ರಾಜಕೀಯ ಶಕ್ತಿಯನ್ನು ನಾಶಪಡಿಸಿದರು.  ಶಿವಪ್ಪ ನಾಯಕ ಅವರು ಸಿಸ್ಟ್ ಎಂಬ ರಾಜಸ್ವ ಪರಿಹಾರ ಯೋಜನೆಯನ್ನು ಪರಿಚಯಿಸಿದರು , ಇದು ಮೊಗಲ್ ಚಕ್ರವರ್ತಿ ಅಕ್ಬರ್ ರೂಪಿಸಿದ ಕಂದಾಯ ಯೋಜನೆಗಳಿಗೆ ಅನುಕೂಲಕರ ಹೋಲಿಕೆಯನ್ನು ಕಂಡುಕೊಂಡಿದೆ.  ಈ ಯೋಜನೆಯ ಪ್ರಕಾರ, ಮಣ್ಣಿನ ಪ್ರಕಾರ ಮತ್ತು ಲಭ್ಯವಿರುವ ನೀರಾವರಿ ಸೌಲಭ್ಯಗಳ ಆಧಾರದ ಮೇಲೆ ಕೃಷಿ ಭೂಮಿಯನ್ನು ಐದು ವಿಧಗಳಾಗಿ ವಿಂಗಡಿಸಲಾಗಿದೆ. ಖಂಡುಗ ಎಂಬ ಬಿತ್ತನೆ ಸಾಮರ್ಥ್ಯದ ಘಟಕವನ್ನು ಅಭಿವೃದ್ಧಿಪಡಿಸಲಾಯಿತು ಮತ್ತು ಪ್ರತಿ ನೀರಾವರಿ ಭೂಮಿಗೆ ಈ ಘಟಕದ ಆಧಾರದ ಮೇಲೆ ವಿವಿಧ ಮೊತ್ತಗಳಲ್ಲಿ ತೆರಿಗೆ ವಿಧಿಸಲಾಯಿತು. ತೆರಿಗೆಯ ದರವು ಈ ಐದು ರೀತಿಯ ಭೂಮಿಯಲ್ಲಿ ಪ್ರತಿಯೊಂದರ ಇಳುವರಿಯನ್ನು ಅವಲಂಬಿಸಿದೆ, ದರವು ಹಳ್ಳಿಯಿಂದ ಗ್ರಾಮಕ್ಕೆ ಬದಲಾಗುತ್ತದೆ ಮತ್ತು ಒಟ್ಟು ಇಳುವರಿಯಲ್ಲಿ ಮೂರನೇ ಒಂದು ಭಾಗದಷ್ಟು ಇರುತ್ತದೆ. ಶಿವಪ್ಪ ನಾಯಕ ಅವರು ಕೃಷಿಗೆ ಪ್ರಾಮುಖ್ಯತೆಯನ್ನು ನೀಡಿದರು, ಇದು ಕೃಷಿ ಆರ್ಥಿಕತೆಯನ್ನು ವಿಸ್ತರಿಸಲು ಕಾರಣವಾಯಿತು.  *ಧಾರ್ಮಿಕ  ಸಹಿಷ್ಣು*  ಧಾರ್ಮಿಕ ಮತ್ತು ಸಹಿಷ್ಣು ವ್ಯಕ್ತಿ, ಶಿವಪ್ಪ ನಾಯಕ ಲಿಂಗಾಯತ   ಆಚರಣೆಗಳನ್ನು ಮಾಡಿದರು ಮತ್ತು ಶೃಂಗೇರಿಯ ಹಿಂದೂ ಅದ್ವೈತ ಕ್ರಮವನ್ನು ಪೋಷಿಸಿದರು. ಶೃಂಗೇರಿಯ ಮಠ ಗುಡಿ ಕಟ್ಟಿ ಕೊಟ್ಟರು. ಅವರು ಕ್ರಿಶ್ಚಿಯನ್ನರ ಬಗ್ಗೆ ಸಹಿಷ್ಣುರಾಗಿದ್ದರು ಮತ್ತು ಅವರಿಗೆ ಕೃಷಿ ಮಾಡಲು ಭೂಮಿ ನೀಡಿದರು. ಅವರು ದಕ್ಷಿಣ ಭಾರತದ ವಾಣಿಜ್ಯ ಸಮುದಾಯಗಳಾದ ಕೋಮಟಿಗಳು ವೈಶ್ಯರು ಮತ್ತು ಕೊಂಕಣಿಗಳನ್ನು ತಮ್ಮ ರಾಜ್ಯದಲ್ಲಿ ನೆಲೆಸಲು ಮತ್ತು ವ್ಯವಹಾರಗಳನ್ನು ಸ್ಥಾಪಿಸಲು ಪ್ರೋತ್ಸಾಹಿಸಿದರು.  ಕಾಶ್ಮೀರಿ ಪಂಡಿತರು ವಲಸೆ ಬಂದಾಗ ಅವರಿಗೆ ಹೊಸನಗರ ಪ್ರದೇಶದಲ್ಲಿ ಆಶ್ರಯ ನೀಡಿ ಪೋಷಿಸಿದರು. *ಸ್ವಾರಸ್ಯಕರ ಪ್ರಸಂಗ* ಶಿವಪ್ಪ ನಾಯಕನ ಆಳ್ವಿಕೆಯ ಕಾಲದ ಸ್ವಾರಸ್ಯಕರ ಪ್ರಸಂಗ ಹೀಗಿದೆ. ಗಣೇಶ್ ಮಲ್ಯ ಎಂಬ ಬಡ ಬ್ರಾಹ್ಮಣನು ಉದ್ಯೋಗ ಹುಡುಕುವ ಉದ್ದೇಶದಿಂದ ರಾಜಧಾನಿ ಕೆಳದಿಗೆ ಬಂದನು. ಹಣವಿಲ್ಲದ ಕಾರಣ ಮನೆಯಲ್ಲಿ ಬೆಳೆದ ತೆಂಗಿನಕಾಯಿ ತುಂಬಿದ ಚೀಲವನ್ನು ಹೊತ್ತೊಯ್ದರು. ನಗರವನ್ನು ಪ್ರವೇಶಿಸುವ ಮೊದಲು, ಪ್ರತಿಯೊಬ್ಬ ಪ್ರಯಾಣಿಕರು ಎಂಟು ಟೋಲ್ ಗೇಟ್‌ಗಳ ಮೂಲಕ ಹಾದುಹೋಗಬೇಕಾಗಿತ್ತು, ಪ್ರತಿಯೊಂದೂ ತೆರಿಗೆಯನ್ನು ಸಂಗ್ರಹಿಸುತ್ತದೆ. ಅವರು ಯಾವುದೇ ಹಣವನ್ನು ಸಾಗಿಸದ ಕಾರಣ, ಗಣೇಶ್ ಮಲ್ಯ ಅವರು ಪ್ರತಿ ಟೋಲ್ ಗೇಟ್‌ನಲ್ಲಿ ಎರಡು ತೆಂಗಿನಕಾಯಿಗಳನ್ನು ಹಂಚಿಕೊಳ್ಳಬೇಕಾಯಿತು, ಒಂದನ್ನು ತೆರಿಗೆ ಮತ್ತು ಇನ್ನೊಂದನ್ನು ಅಧಿಕಾರಿಗೆ ಉಡುಗೊರೆಯಾಗಿ ನೀಡಲಾಯಿತು. ನಗರದ ಪ್ರವೇಶ ದ್ವಾರದಲ್ಲಿ ಎರಡು ತೆಂಗಿನಕಾಯಿ ಸಹ ಪಾವತಿಸಿದರು. ಎಲ್ಲಾ ಟೋಲ್‌ಗಳಿಂದ ನಿರಾಶೆಗೊಂಡ ಮಲ್ಯ ಅವರು ಧೈರ್ಯದಿಂದ ತಮ್ಮದೇ ಆದ ಟೋಲ್ ಗೇಟ್ (ಒಂಬತ್ತನೇ ಟೋಲ್ ಗೇಟ್) ಸ್ಥಾಪಿಸಿದರು ಮತ್ತು ತಮ್ಮ ಸ್ವಂತ ರಿಜಿಸ್ಟರ್‌ನಲ್ಲಿ ನಗರಕ್ಕೆ ಬರುವ ಪ್ರಯಾಣಿಕರ ಸಂಪೂರ್ಣ ವಿವರಗಳನ್ನು ನೋಂದಾಯಿಸಿದ ನಂತರ ಟೋಲ್ ಸಂಗ್ರಹಿಸಿದರು. ಟೋಲ್‌ಗೆ ಪ್ರತಿಯಾಗಿ, ಗಣೇಶ್ ಮಲ್ಯ ಅವರು ಹದಿನೆಂಟು ತೆಂಗಿನಕಾಯಿಗಳಿಗೆ ಹೊಸ ಕಸ್ಟಮ್ ಸ್ಟೇಷನ್, ಕುಮಟಾದ ಗಣೇಶಯ್ಯ ರಾಜರ ಸಹಿಯೊಂದಿಗೆ ಚೀಟಿಯನ್ನು ನೀಡಿದರು . ಇದು ಹದಿನೆಂಟು ತಿಂಗಳುಗಳ ಕಾಲ ರಾಜ ಶಿವಪ್ಪ ನಾಯಕನಿಗೆ ಕೇಳುವ ಮೊದಲು ಯಾರೂ ಗಮನಿಸಲಿಲ್ಲ. ರಾಜನು ಕರೆಸಿದಾಗ, ಜೀವನೋಪಾಯಕ್ಕಾಗಿ ಅಕ್ರಮ ಜಕಾತು ತೆರಿಗೆ ಸಂಗ್ರಹಿಸಿದ್ದಾಗಿ ಗಣೇಶ್ ಮಲ್ಯ ಒಪ್ಪಿಕೊಂಡಿದ್ದಾನೆ. ಅವರ ಪ್ರಾಮಾಣಿಕತೆ ಮತ್ತು ವ್ಯವಹಾರ ಕುಶಾಗ್ರಮತಿಯಿಂದ ಪ್ರಭಾವಿತರಾದ ಶಿವಪ್ಪ ನಾಯಕ ಗಣೇಶ್ ಮಲ್ಯರನ್ನು ತಮ್ಮ ಸೇವೆಗೆ ತೆಗೆದುಕೊಂಡರು.  ಶಿವಪ್ಪ ನಾಯಕನ ನಂತರ 1660 ರಲ್ಲಿ ಅವನ ಕಿರಿಯ ಸಹೋದರ ಚಿಕ್ಕ ವೆಂಕಟಪ್ಪ ನಾಯಕನು ಸಿಂಹಾಸನವನ್ನು ಅಲಂಕರಿಸಿದನು. ಶಿವಪ್ಪ ನಾಯಕ ಕೆಳದಿ ಅರಸರ ಮೊದಲ ದೊರೆ. ಇವನ ಕಾಲದ ಸಾಮ್ರಾಜ್ಯವು ದಕ್ಷಿಣ ಭಾರತದಲ್ಲಿ ಹಲವು ಭಾಗಗಳಲ್ಲಿ ಕಾಣುತ್ತೇವೆ.  ಇಂತಹ ಜನಪರ ಅರಸು ಸಾಮಾಜಿಕ ಬದಲಾವಣೆಯ ಕನಸುಗಾರ ಶ್ರೀ ಶಿವಪ್ಪ ನಾಯಕ ಇವರಿಗೆ ಅನಂತ ಕೋಟಿ ನಮನಗಳು ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಸಾವಿಲ್ಲದ ಶರಣರು ಮಾಲಿಕೆ,”ದಕ್ಷ ಆಡಳಿತಗಾರ ಪರಾಕ್ರಮಿ ಅರಸು ಶಿವಪ್ಪ ನಾಯಕ” ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಪುಣೆ Read Post »

ಕಾವ್ಯಯಾನ

“ಯಾರೂ ಅನಿವಾರ್ಯರಲ್ಲ‌ ಇಲ್ಲಿ” ವೈ ಎಂ ಯಾಕೊಳ್ಳಿ

ಕಾವ್ಯ ಸಂಗಾತಿ “ಯಾರೂ ಅನಿವಾರ್ಯರಲ್ಲ‌ ಇಲ್ಲಿ” ವೈ ಎಂ ಯಾಕೊಳ್ಳಿ ಈ‌ ಲೋಕ ತನ್ನಷ್ಟಕ್ಕೆ ತಾನೇ ಓಡುತ್ತದೆಯಾರೂ ಅನಿವಾರ್ಯರಲ್ಲ ಯಾರೋ ನಮ್ಮನ್ನಗಲಿ ಹೋದಾಗನಾವು ಇನ್ನು ಬದುಕಲಾರೆವೇನೊ ಎನ್ನುತ್ತೇವೆಆದರೂ ಕೆಲವೆ ದಿನಗಳಲ್ಲಿ ಮತ್ತೆ ಕಾಲಎಂದಿನಂತೆ ಓಡತೊಡಗುತ್ತದೆ ಅಂದೊಮ್ಮೆ ಆ ಕ್ಷಣ ಅವರು ಅಗಲಿದಾಗಇನ್ನು  ಬದುಕುವುದೆ ಅಸಾಧ್ಯ ವೆಂದುಕೊಂಡಿದ್ದವರು,  ಅದೆ ಹಗಲು ಅದೇ ರಾತ್ರಿಅದೇ ಬದುಕನ್ನು ಯಥಾವತ್ತಾಗಿಅನುಭವಿಸತೊಡಗುತ್ತಾರೆವ್ಯತ್ಯಾಸ ಇಷ್ಟೇ ಅವರಷ್ಟೇ ಹೋಗಿರುತ್ತಾರೆನಾವೆಲ್ಲರೂ ಇಲ್ಲೇ ಇರುತ್ತೇವೆ. ಚಂದ್ರ ಸೂರ್ಯರೂ ಇಲ್ಲವಾದಾಗಪರ್ಯಾಯ ವ್ಯವಸ್ಥೆಯನ್ನು ಬಳಸಿಕೊಂಡಈ ಲೋಕಕ್ಕೆ  ಎಲ್ಲವನು ಮರೆಯುವದು ಗೊತ್ತುಬಹುಶಃ ತಾವು ಅನಿವಾರ್ಯಎಂದು ತಿಳಿದದ್ದು ಅಗಲಿ ಹೋದವರಷ್ಟೇ. ಇದು ನಾವು ಹೋದಾಗಲೂ ಅಷ್ಟೇ!ಇನ್ಯಾರೋ ಹೋದಾಗಲೂ ಅಷ್ಟೇ!!ಜಗತ್ತಿನಲ್ಲಿ ಬೇಕಾದವರು ಒಂದಿಷ್ಟು  ದಿನಕಣ್ಣೀರು ಹಾಕಿ  ಮತ್ತೆ ಮರೆಯುತ್ತಾರೆ.ಇನ್ನೊಂದು ರಾತ್ರಿ ಕೊಡವಿಕೊಂಡು ಎದ್ದುಹಗಲಾಗಿರುತ್ತದೆ. ವೈ.ಎಂ.ಯಾಕೊಳ್ಳಿ

“ಯಾರೂ ಅನಿವಾರ್ಯರಲ್ಲ‌ ಇಲ್ಲಿ” ವೈ ಎಂ ಯಾಕೊಳ್ಳಿ Read Post »

ಅನುವಾದ

“ದೇಹದ ಬೀಜ”ಕೆ.ಎ. ಮುನಿಸುರೇಶ್ ಪಿಳ್ಳೆ ಅವರ ತೆಲುಗು ಕವಿತೆಯ ಕನ್ನಡಾನುವಾದ ರಂಗನಾಥ ರಾಮಚಂದ್ರರಾವು

ಅನುವಾದ ಸಂಗಾತಿ ದೇಹದ ಬೀಜ ತೆಲುಗು ಮೂಲ : ಕೆ.ಎ. ಮುನಿಸುರೇಶ್ ಪಿಳ್ಳೆಕನ್ನಡಕ್ಕೆ : ರಂಗನಾಥ ರಾಮಚಂದ್ರರಾವು ಬೀಜವು ಮಹಿಮೆ ತಿಳಿದಿರುವ ಮನೆಯಲ್ಲಿಯೇ  ಅಲ್ಲವೇ?ಅವಳು ಮೊಳಕೆಯೊಡೆದಿದ್ದು! ಬೀಜದಲ್ಲಿ..ಬಿತ್ತವಿಕೆಯಲ್ಲಿ..ಬದುಕು ಇರುವುದೆಂಬ  ಪಾಠವನ್ನು ತಿಳಿದ ಅಮ್ಮ! ಅಮ್ಮ  ಬಿತ್ತಿದ ಪ್ರತಿಯೊಂದು ಬೀಜವೂ..ಮೊಳಕೆಯೊಡೆದ ಪ್ರತಿಯೊಂದು ಮೊಳಕೆಯೂ ..ದೃಷ್ಟಿಗೆ ಬರುತ್ತವೆ ನನಗೆ! ನನ್ನ ಬಾಲ್ಯದಿಂದಲೂ,ನನ್ನನ್ನು ಅನಾಥನನ್ನಾಗಿ ಮಾಡುವವರೆಗೂ..ಬಿತ್ತಿದ ಪ್ರತಿ ಬೀಜವೂ! ಅಮ್ಮ ಬಿತ್ತಿದ ಅಕ್ಷರಗಳುನನ್ನಅಧ್ಯಯನಗಳಾಗಿ ಮೊಳಕೆಯೊಡೆದವು!ಅಮ್ಮ ಬಿತ್ತಿದ ಆಲೋಚನೆಗಳುನನ್ನ ಬುದ್ಧಿಯಲ್ಲಿ  ಪರಿಣತಿಯಾಗಿ  ಮೊಗ್ಗು ಬಿಟ್ಟಿವೆ!ನನ್ನ ಮೇಲೆ ಬಿತ್ತಿದ ಆಶೆಗಳುಮೊಳಕೆಯೊಡೆದು ನನ್ನ ಜೀವನವಾಗಿ ಅರಳಿದವು!ನನ್ನ ಬೆನ್ನಿನ ಮೇಲೆ ಬೆತ್ತದಿಂದ  ಬಿತ್ತಿದ ಬೀಜಗಳುನನಗೆ  ಒದಿಗಿದ  ಶಿಸ್ತಾಗಿ ಫಲಿಸಿದವು! ಅಮ್ಮ ಒಳ್ಳೆಯ ಬೇಸಾಯಗಾರ್ತಿಬಿತ್ತುವುದು ಅಮ್ಮನ ಲಕ್ಷಣ!ಭೂಮಿತಾಯಿ ಯಿಂದ ಚೊಚ್ಚಿ ಬಂದ ಮೊಳಕೆಎರಡು ಎಲೆ ತೊಟ್ಟಂದಿನಿಂದಲೂ …ಆ ಮೊಳಕೆಗೆ ರಕ್ಷಣೆಯ ತೊಡಿಗೆಯೂ   ಅಮ್ಮನೇ!ಸಸ್ಯಕ್ಕೆ ದಾಹವನ್ನು ತೀರಿಸುವ  ಬೊಗಸೆಯ   –ನೀರೂ ಅಮ್ಮನೇ!ಬೆಳಕಿನಿಂದ ಜೀವನೀಡುವ ಏಳು ಕುದುರೆಗಳ ರಾಜನೂ ಅಮ್ಮನೇ ! ಆಕಾಶವನ್ನು ಲಕ್ಷ್ಯವನ್ನಾಗಿಸಿಕೊಂಡು …ನೇರವಾಗಿ ಬೆಳೆಯುವುದನ್ನು  ಕಲಿಸಿರುವುದು   ಅಮ್ಮನೇ !ತಲೆಯನ್ನು ಕೊರೆಯುವ  ಹುಳುಗಳು  ಸೇರಿದಾಗಲೆಲ್ಲಾ…ಔಷಧದ ಪಿಚಕಾರಿಯಿಂದ  ಕಾಪಾಡಿದ್ದು ಅಮ್ಮನೇ !ವ್ಯರ್ಥವಾದ  ಟೊಂಗೆಗಳನ್ನು ಪ್ರೂನಿಂಗ್ ಮಾಡುತ್ತಾದೃಢವಾಗಿ ಬೆಳೆಯುವಂತೆ  ನೋಡಿದವಳು ಅಮ್ಮನೇ! ಕಸಿಕಟ್ಟಿ, ಸಸಿ ಬೆಳುಯುವ  ವರೆಗೂಕಾಯ್ದು , ಆ ಬೇಸಾಯದ ಕನ್ನಡಿಯಲ್ಲಿತನ್ನನ್ನೂ, ತನ್ನ ಕಷ್ಟವನ್ನೂ  ತೃಪ್ತಿಯಾಗಿ  ನೋಡಿಕೊಂಡವಳು ಅಮ್ಮನೇ! ಆ ಗಿಡ ಮರವಾದಾಗ…ಆ ಫಲಗಳನ್ನು ಸಂಪೂರ್ಣವಾಗಿ ಆಸ್ವಾದಿಸದೆಯೇಆ ನೆರಳಿನಲ್ಲಿ   ತುಂಬಾ ದಣಿವು ತೀರಿಸಿಕೊಳ್ಳದೆಯೇ  ಜಾರಿಹೋದವಲೇ  ಅಮ್ಮ!ಆ ನೆರಳು ತನಗೆ ಸಾಕೆಂದುಕೊಂಡಳೇ?ತನ್ನ ಜಾಡ  ಆ ಮರಕ್ಕೆ ಸಾಕೆಂದುಕೊಂಡಳೇ? ಆ ನೆರಳಲ್ಲಿ ತನ್ನ ಪಾದದ ತಡನೆಯ  ಸದ್ದುಗಳೆಆ ಮರದ  ಬೇರುಗಳ ಎದೆ ಬಡಿತೆಗಳೆಂದು ಅಮ್ಮಗೆ ತಿಳಿಯದೆ?ನೆರಳನ್ನು ಏಮಾರಿಸಿ ತನು  ಸರಿದುಹೋದರೆಆ ಎದೆ ನಿಶ್ಶಬ್ದ  ವಾಗುವುದೆಂದೂ  …ಆ ಮರ ನಿಶ್ಶಕ್ತ ವಾಗುವುದೆಂದೂ  ಅಮ್ಮನಿಗೆ ತಿಳಿವು ಇಲ್ಲವೇ?—- ಅಮ್ಮ ತನ್ನನ್ನು ತಾನೇ ಬಿತ್ತಿಕೊಂಡಳುತನ್ನ ದೇಹವನ್ನು ಬಿತ್ತಿಕೊಂಡಳು!ಅನಾಟಮಿ ಲ್ಯಾಬ್ ನಲ್ಲಿ ಮೊಳಕೆಯೊಡುತ್ತಾಳೆ!ನಾಳೆಯ ವೈದ್ಯರ  ಜ್ಞಾನದಲ್ಲಿ  ಪುಷ್ಪಿಸಿ, ಫಲಿಸಿ ವೃದ್ಧಿಹೊಂದುತ್ತಳೆ!ಮರದ ನೆರಳಿನಲ್ಲಿ ದಣಿವಾರಿಸಿ ಕೊಳ್ಳುವವಳಲ್ಲ  ಅಮ್ಮತಾನೇ  ಶಾಖೋಪಶಾಖಗಳಾಗಿ  ಮಹಾವೃಕ್ಷವಾಗಿ ವಿಸ್ತರಿಸುವವಳು ! (ನನ್ನ ತಾಯಿಯ ದೇಹವನ್ನು ವೈದ್ಯಕೀಯ ಕಾಲೇಜಿಗೆ ದಾನ ಮಾಡಿದನಂತರ.. ಅಮ್ಮ  ನೆನೆಪಿನಲ್ಲಿ -: ಕೆ.ಎ. ಮುನಿಸುರೇಶ್ ಪಿಳ್ಳೆ, 99594 8808 ತೆಲುಗು ಮೂಲ : ಕೆ.ಎ. ಮುನಿಸುರೇಶ್ ಪಿಳ್ಳೆಕನ್ನಡಕ್ಕೆ : ರಂಗನಾಥ ರಾಮಚಂದ್ರರಾವು

“ದೇಹದ ಬೀಜ”ಕೆ.ಎ. ಮುನಿಸುರೇಶ್ ಪಿಳ್ಳೆ ಅವರ ತೆಲುಗು ಕವಿತೆಯ ಕನ್ನಡಾನುವಾದ ರಂಗನಾಥ ರಾಮಚಂದ್ರರಾವು Read Post »

You cannot copy content of this page

Scroll to Top