“ಯಾರಿಗಿದೆ ನೆಮ್ಮದಿ?” ವನಜ ಮಹಾಲಿoಗಯ್ಯ ಮಾದಾಪುರ
ಬದುಕಿನ ಸಂಗಾತಿ “ಯಾರಿಗಿದೆ ನೆಮ್ಮದಿ?” ವನಜ ಮಹಾಲಿoಗಯ್ಯ ನಾನು ಯಾರನ್ನು ಉದ್ದೇಶಿಸಿ ಈ ಮಾತನ್ನು ಹೇಳುತ್ತಿಲ್ಲ ಜಗತ್ತಿನ ಪ್ರತಿ ಒಬ್ಬರು ತಿಳಿದುಕೊಳ್ಳಬೇಕಾದ ಮಾತಿದು ಎಷ್ಟೇ ಕೋಟಿ ಹಣ ಆಸ್ತಿ ಇದ್ದರೂ ನಾವು ಹೋಗುವಾಗ ಏನನ್ನು ತೆಗೆದುಕೊಂಡು ಹೋಗುವುದಿಲ್ಲ. ಇಷ್ಟೆಲ್ಲ ಇದ್ದರೂ ಅದನ್ನೆಲ್ಲವನ್ನು ಅನುಭವಿಸುವಂತಹ ಶಕ್ತಿ ಮನುಷ್ಯನಿಗೆ ಇಲ್ಲ. ಕಾರಣ ಆಸ್ತಿ ಹಣಕ್ಕೆ ಇರುವಷ್ಟು ವಯಸ್ಸು ಮನುಷ್ಯನಿಗೆ ಇಲ್ಲ.ಇದ್ದಾಗ ಇರುವಷ್ಟುನ್ನು ಅನುಭವಿಸುವಷ್ಟು ಮನೋ ಧೈರ್ಯವೂ ಮನುಷ್ಯನಿಗೆ ಇಲ್ಲ. 10 ಕಾರಿದ್ದರು ಒಂದು ಸಲಕ್ಕೆ ಒಂದೇ ಕಾರಿನಲ್ಲಿ ಕುಳಿತು ಪ್ರಯಾಣ ಮಾಡಲು ಸಾಧ್ಯ. ಹಾಗೆಯೇ ಕೋಟಿ ಕೋಟಿ ಹಣ ವಿದ್ದರೂ ಅದನ್ನೆಲ್ಲ ಎಲ್ಲರ ಎದುರಿಗೆ ತೋರಿಸುವಷ್ಟು ಧೈರ್ಯವಿಲ್ಲ. ಕಾರಣ ಅಷ್ಟೊಂದು ಹಣ ಬರಲು ಒಳ್ಳೆಯ ದಾರಿಯಿಂದ ಅವಕಾಶವಿಲ್ಲ. ಇದ್ದ ಹಣದಲ್ಲಿ ಧಾರಾಳವಾಗಿ ಯಾರಿಗೂ ಸಹಾಯ ಮಾಡದೆ ತನ್ನಲ್ಲಿ ಹಾಗೆ ಇಟ್ಟು ಅದನ್ನು ಉಪಯೋಗಕ್ಕೆ ಬರದಂತೆ ಮಾಡುವುದು ಕೆಟ್ಟ ಮನಸ್ಥಿತಿ ಇರುವ ಮನುಷ್ಯನಿಗೆ ಮಾತ್ರ ಸಾಧ್ಯ. ಹಾಗೆ ತಾನು ಅನುಭವಿಸದೆ ತನ್ನವರಿಗೂ ಕೊಡದೆ ಸತ್ತಾಗ “ದರಿದ್ರದವರು ಬದುಕಿದ್ದು ಏನು ಪ್ರಯೋಜನ ಸತ್ತರೆ ಸಾಯಲಿ ಬಿಡಿ” ಎಂದು ಜನ ಅಂದುಕೊಳ್ಳುವಂತೆ ಬದುಕುವುದು ಏಕೆ ಬೇಕು? ನ್ಯಾಯವಾಗಿ ಬದುಕಿ ದುಡಿದದ್ದರಲ್ಲಿ ತನಗೆ ತನ್ನವರಿಗೆ ಎಂದು ಬಚ್ಚಿಡದೆ ಇರುವಷ್ಟು ದಿನ ಎಲ್ಲರೊಂದಿಗೆ ಪ್ರೀತಿಯಿಂದ ಬದುಕಿ ಸತ್ತಾಗ “ಈ ಮನುಷ್ಯ ಇನ್ನಷ್ಟು ದಿನ ಬದುಕಿರಬೇಕಿತ್ತು “ಅಂದುಕೊಳ್ಳುವಂತೆ ಬದುಕುವುದು ಎಷ್ಟು ಒಳ್ಳೆಯ ಸಾರ್ಥಕತೆಯ ಬದುಕಲ್ಲವೇ?.ಇತ್ತೀಚಿನ ದಿನಗಳಲ್ಲಿ ಮನುಷ್ಯ ಮನುಷ್ಯನಾಗಿಯೇ ಇಲ್ಲ ಅವನನ್ನು ಮೃಗಗಳಿಗೆ ಹೋಲಿಸುವುದು ಖಂಡಿತ ಬೇಡವೇ ಬೇಡ. ಮೃಗಗಳಿಗಿರುವಷ್ಟು ಒಳ್ಳೆಯತನ ಈ ಕೆಟ್ಟ ಮನುಷ್ಯನಿಗಿಲ್ಲ. ಸ್ವಾರ್ಥ ಮೋಸ ಧಗ ವಂಚನೆ ಅನ್ಯಾಯ ಇವೆಲ್ಲವೂ ಮನುಷ್ಯನ ಐದು ಅಂಗಗಳಂತಾಗಿದೆ. ಮನುಷ್ಯ ತನ್ನ ದುನ೯ಡತೆ ದುರ್ಗುಣ ಇವುಗಳಿಂದ ತನ್ನನ್ನು ತಾನು ಹಾಳು ಮಾಡಿಕೊಂಡು ತನ್ನ ಸುತ್ತಮುತ್ತಲಿನ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿದ್ದಾನೆ. ಒಳ್ಳೆಯದು ಮಾಡಲು ಒಂದು ಕ್ಷಣ ಯೋಚನೆ ಮಾಡಿದರೆ ಸಾಕು. ಕೆಟ್ಟದ್ದನ್ನು ಮಾಡಲು ಸಾವಿರ ಸಲ ಯೋಚಿಸಬೇಕು. ಆದರೆ ಈಗಿನ ಯುವ ಜನತೆ ತಪ್ಪನ್ನು ಮಾಡಲು ಒಂದೇ ಕ್ಷಣ ಯೋಚಿಸುತ್ತಾರೆ ಒಳ್ಳೆಯದನ್ನು ಮಾಡಲು ಸಾವಿರ ಸಲ ಯೋಚಿಸುತ್ತಾರೆ. ಹಾಗಾಗಿ ಇಂದು ಎಷ್ಟೋ ಯುವಜನತೆ ತಪ್ಪುಗಳನ್ನು ಮಾಡಿ ಜೈಲನ್ನು ಸೇರಿದ್ದಾರೆ. ಅವರನ್ನೆಲ್ಲ ನೋಡಿ ಆದರೂ ಉಳಿಧ ಜನರುಬುದ್ದಿ ಕಲಿತು ಬದುಕಬೇಕು.ಇವತ್ತಿನ ಮಕ್ಕಳು ತಂದೆ ತಾಯಿಯರ ಮಾತಿಗೆ ಬೆಲೆ ಕೊಡದೆ, ತಮ್ಮದೇ ಆದ ರೀತಿಯಲ್ಲಿ ನಡೆದುಕೊಂಡು ಜೀವನ ವನ್ನೇ ಹಾಳುಮಾಡಿಕೊಂಡು, ಕೇಳಿದರೆ ಅವ್ರೆಲ್ಲ ಹೇಳೋ ಮಾತು ಏನು ಗೊತ್ತಾ? ನಾವು ನಿಮ್ಮ ಕಾಲದವರಲ್ಲ, ಇವತ್ತಿನ ಜನರೇಷನ್ ನಾವು ಎಂದು ಉತ್ತರಿಸುವ ರೀತಿ ಅಸಯ್ಯ ತರುತ್ತೆ. ತಂದೆ ತಾಯಿಗಳು ಈ ಮಕ್ಕಳ ಕಾಲದಲ್ಲಿ ಸೋತು ಹೋಗಿದ್ದಾರೆ. ನಾನು ತಂದೆ ತಾಯಿಗಳಿಗೆ ಒಂದು ಮಾತು ಹೇಳುತ್ತೇನೆ. ಯಾರ ಮಕ್ಕಳೇ ಆಗಲಿ ಮರ್ಯಾದೆ ತೆಗೆಯೋ ಕೆಲಸ ಮಾಡಿದರೆ ನೀವು ನೊಂದುಕೊಂಡು ಜೀವ ಕಳೆದುಕೊಳ್ಳಬೇಡಿ. ಕಾರಣ ಯಾವ ತಂದೆ ತಾಯಂದಿರು ಮಕ್ಕಳನ್ನು ಕೆಟ್ಟ ದಾರಿಗೆ ಹೋಗಲು ಪ್ರೇರೇಪಿಸುವುದಿಲ್ಲ. ಹಾಗೆಯೇ ಯಾರು ನೋವುಂಡ ತಂದೆ ತಾಯಿಯರಿಗೆ ದಯವಿಟ್ಟು ಅವಮಾನಿಸಿ ಮಾತನಾಡಬೇಡಿ. ಹಣ ಇಲ್ಲ ಅಂದ್ರೆ ಜನಗಳ ಎದುರಿಗೆ ಓಡಾಡಬಹುದು ಆದ್ರೆ ಮರ್ಯಾದೆ ಹೋದರೆ ಹೇಗೆ ಓಡಾಡಬಹುದು ಅಲ್ಲವೇ, ಮರ್ಯಾದೆ ಇಲ್ಲ ಅಂದ್ರೆ ನೆಮ್ಮದಿ ಎಲ್ಲಿರುತ್ತೆ. ವನಜ ಮಹಾಲಿoಗಯ್ಯ ಮಾದಾಪುರ
“ಯಾರಿಗಿದೆ ನೆಮ್ಮದಿ?” ವನಜ ಮಹಾಲಿoಗಯ್ಯ ಮಾದಾಪುರ Read Post »




