ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನಾನು ಹುಟ್ಟಿ ಬೆಳೆದ‌ ನನ್ನ ಆ ಭವ್ಯ ಮನೆಯು ನನ್ನ ತಂದೆಯ ಬೆವರಾಗಿತ್ತು ತಾಯಿಯ ಮಮತೆಯಾಗಿತ್ತು, ನಮ್ಮ ಬದುಕಿಗೊಂದು ಬೆಚ್ಚನೆಯ ಸೂರಾಗಿತ್ತು, ಆದರೆ ಇಂದು ಮರ ಬಿದ್ದಾಗ ಹಕ್ಕಿ ಹಾರಿತು ಗೂಡು ಕಳಚಿ ರಸ್ತೆ ಪಾಲಾಯಿತ್ತು, ಹಕ್ಕಿಗಳು ತಮ್ಮ ತಮ್ಮ ಪಾಡಿಗೆ ಹಾರಿ ಹೋದಂತೆ ಆ ಮನೆಯ ಸ್ಥಿತಿಲತೆಯ ಕಂಡು ನೋವಿಂದ ಬರೆದ ಕವನವಿದು.

*ತಾಯಿ ಮನೆ*

ಬೆವರ ಸುರಿಸಿ ದುಡಿದು
ತಂದೆ ಕಟ್ಟಿಸಿದ, ನಮ್ಮ ಮನೆ
ಆಶ್ರಯ ನೀಡಿದ ಆ “ತಾಯಿ ಮನೆ”
ಹಲವು ಕನಸುಗಳ ಅವರು ಕಂಡ ಮನೆ,!

ನಮ್ಮ ತಾಯಿ ಮನೆ
ನಾವು ಹುಟ್ಟಿ ಬೆಳೆದ ಮನೆ
ಬಾಲ್ಯದಾಟದಲಿ ನಲಿದ ಮನೆ
ತಾಯಿ ಮಮತೆಯ ಕಾರುಣ್ಯ ಮನೆ,!

ಮತ್ತೇ ಬೆಳಗೊ ಕಾತರ
ತಂದೆಯ ರಕ್ತದ ಆ ಬೆವರು
ನಿತ್ಯ ಸುವಾಸಿಸುವ ನಮ್ಮ ತವರು
ಮರೆಯಲಾರೆವು ನಾವೆಂದು ಕುವರರು,!

ಕತ್ತಲಲಿ ಕೊಠಡಿಗಳು
ಗಾಜು ಹೊಡೆದ ಕಿಟಕಿಗಳು
ಬೀಡು ಬಿಟ್ಟ ಜೇಡ ಜಾಲಗಳು
ಕಾಡುತ್ತಿದೆ ಬಾಲ್ಯದ ಆ ನೆನಪುಗಳು,!

ಅಂದು ರಾಜ ಮನೆತನ
ಸಂಭ್ರಮ ಮೆರೆದಾಡಿತ್ತು ಕಣ್ಮನ
ವೈವಾಹಿಕ ವೈಭವಗಳ ಜೊತೆ ಜೀವನ
ಕತ್ತಲ ದಾಟಿ ಪಯನ, ವೈಭವದತ್ತ ಬೆಳಕಿನ.!


About The Author

Leave a Reply

You cannot copy content of this page

Scroll to Top