ಕಾವ್ಯ ಸಂಗಾತಿ
ರಾಶೇ ಬೆಂಗಳೂರು
“ನೆನಪುಗಳು”


ಸೊಗಸು ಸೊಗಸಾದ
ಸಿಹಿ ಸಿಹಿಯಾದ
ಆ ನೆನಪುಗಳು
ಮಧುರವಾಗಿರಲಿ..
ಜೀವ ಭಾವದ
ಪ್ರೀತಿ ಮರೆಯದ
ಹೊಂಗನಸುಗಳು
ಸದಾ ನನಗಿರಲಿ..
ಮತ್ತೆ ಬಾರದ
ನೋವು ಗಾಯದ
ಕಹಿ ಘಟನೆಗಳು
ಮರುಕಳಿಸದಿರಲಿ..
ಕಳೆದುಹೋದ
ಕೆಣಕಿ ದೂರಾದ
ಉರಿ, ದಳ್ಳುರಿಗಳು
ಬೆಂದು ಬೂದಿಯಾಗಲಿ..
ರಾಶೇ ಬೆಂಗಳೂರು



