ಕಾವ್ಯಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
“ಇನ್ನೂ ಕನಸಿದೆ”


ಇನ್ನೂ ಕನಸಿದೆ
ಬಣ್ಣ ಬಣ್ಣದ ಚಿತ್ರ
ಸುಳಿವ ಗಾಳಿ
ಸುರಿವ ಮಳೆ
ಹಕ್ಕಿ ಪಕ್ಷಿಗಳ ಇಂಚರ
ನೀಲಿ ಆಗಸದಲಿ ಹಾರುವ
ಬಿಳಿ ಪಾರಿವಾಳ
ಅದೆಷ್ಟೋ ಭಾವಗಳು
ಕವನವಾಗುವ ಸಮಯ
ಬೆಸಗೊಳ್ಳುತ್ತಿವೆ
ಪದ ಲಯ
ಶಬ್ದಗಳ ಸಂಭ್ರಮ
ಸೂರ್ಯನೇ
ನೀನು ಇಷ್ಟು ಬೇಗ
ಏಕೆ ಉದಯಿಸಿ ಬಿಟ್ಟೆ
ಇನ್ನೂ ಕನಸಿದೆ
ಮಧುರ ಕ್ಷಣಗಳನ್ನು
ಕನಸಿನಲ್ಲಾದರೂ ಕಂಡು
ಕೊಂಚ ನೆಮ್ಮದಿಯಿಂದ
ಇರುತ್ತಿದ್ದೆ
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ




Excellent poem
ಕನಸುಗಳೂ ಎಂದಿಗೂ ಜೀವಂತ…
ತರಂಗದ ಅಲೆಗಳ ಹಾಗೆ
ಮುತ್ತುಗಳ ಮಾಲೆಯ ಹಾಗೆ
ಸುಗಂಧದ ಪರಿಮಳದ ಹಾಗೆ
ಭಾವಗಳ ಬುತ್ತಿಯ ಹಾಗೆ
ಬತ್ತದ ಸೆಲೆಯ ಹಾಗೆ
“ಇನ್ನೂ ಕನಸಿದೆ”ಅದ್ಭುತ ಕವನ ಸರ್